ಕೌಟುಂಬಿಕ ಕಲಹ – ಸ್ನೇಹಿತನಿಗೆ ಸುಪಾರಿ ಕೊಟ್ಟು ಪತ್ನಿಯನ್ನೇ ಕೊಲೆ ಮಾಡಿಸಿದ ಪತಿ

Public TV
1 Min Read

ಹಾಸನ: ಕೌಟುಂಬಿಕ ಕಲಹದಿಂದಾಗಿ ಬೇಸತ್ತ ಪತಿ ತನ್ನ ಸ್ನೇಹಿತನಿಗೆ ಸುಪಾರಿ ಕೊಟ್ಟು ಪತ್ನಿಯನ್ನು ಕೊಲೆ ಮಾಡಿಸಿರುವ ಘಟನೆ ಹಾಸನ ಜಿಲ್ಲೆ (Hasan), ಬೇಲೂರು ತಾಲ್ಲೂಕಿನ, ಯಕಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶೀಲಾ (42) ಪತಿಯ ಸ್ನೇಹಿತನಿಂದ ಹತ್ಯೆಯಾದ ಮಹಿಳೆ. ಕೌಟುಂಬಿಕ ಕಲಹದ ಹಿನ್ನೆಲೆ ಕೆಲ ವರ್ಷಗಳಿಂದ ಪರಸ್ಪರ ಗಂಡ ಹೆಂಡತಿ ದೂರ ಇದ್ದರು. ಕಳೆದ ಶನಿವಾರ ಮನೆ ಬಳಿ ಬಂದು ತನ್ನ ಸ್ನೇಹಿತ ರಾಜಶೇಖರ ಮೂಲಕ ಪತಿ ಜಗದೀಶ್ ಪತ್ನಿಯನ್ನು ಹೊರಗೆ ಕರೆದು ಜಗಳವಾಡಿದ್ದ. ಜಗದೀಶ್‌ನಿಂದ ಸುಪಾರಿ ಪಡೆದು ರಾಜಶೇಖರ ಶೀಲಾನನ್ನು ಮನೆ ಮುಂದೆ ಕುತ್ತಿಗೆ ಬಿಗಿದು ಬರ್ಬರವಾಗಿ ಹತ್ಯೆಗೈದಿದ್ದಾನೆ. ಇದನ್ನೂ ಓದಿ: ಪ್ರತಿಭಟನೆ ನಿಲ್ಲಿಸಿ, ದುರ್ಗಾಪೂಜೆಗೆ ಗಮನ ಹರಿಸಿ – ದೀದಿ ಹೇಳಿಕೆಗೆ ಮೃತ ಟ್ರೈನಿ ವೈದ್ಯೆಯ ತಾಯಿ ಆಕ್ರೋಶ

ಕೊಲೆ ಬಳಿಕ ಮೃತದೇಹಕ್ಕೆ ಕಲ್ಲು ಕಟ್ಟಿ ಕೆರೆಗೆ ಎಸೆದು ಎಸ್ಕೇಪ್ ಆಗಿದ್ದಾರೆ. ಮಹಿಳೆಯನ್ನ ಹಾಡುಹಗಲೇ ಹತ್ಯೆಗೈಯ್ಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಕೇಂದ್ರ ಸರ್ಕಾರದ ವೈಫಲ್ಯ: ಶಾಸಕ ರಂಗನಾಥ್

ತಾಯಿ ಕಾಣೆಯಾದ ಬಗ್ಗೆ ಭಾನುವಾರ ಪುತ್ರಿ ದೂರು ನೀಡಿದ್ದು, ನಾಪತ್ತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆಗಿಳಿದಾಗ ಕೊಲೆ ರಹಸ್ಯ ಬಯಲಾಯಿತು. ಕೊಲೆ ಆರೋಪಿ ರಾಜಶೇಖರ ಹಾಗೂ ಪತಿ ಜಗದೀಶ್‌ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: Haryana Poll | ಬಿಜೆಪಿಯಿಂದ 21 ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್‌ – ವಿನೇಶ್‌ ವಿರುದ್ಧ ಪ್ರಬಲ ಅಭ್ಯರ್ಥಿ ಅಖಾಡಕ್ಕೆ

ಘಟನೆ ಕುರಿತು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿಎಂ ಸ್ಥಾನ ಖಾಲಿ ಇಲ್ಲ – ಖಾಲಿ ಇಲ್ಲದ ಸ್ಥಾನದ ಬಗ್ಗೆ ಚರ್ಚೆ ಅಪ್ರಸ್ತುತ: ಡಾ.ರಂಗನಾಥ್

Share This Article