ದ್ವಿಶತಕ ಸಿಡಿಸಿ 21 ವರ್ಷಗಳ ದಾಖಲೆ ಮುರಿದ ಫಖಾರ್ ಜಮಾನ್

Public TV
1 Min Read

ಬುಲಬಾಯೊ: ಪಾಕಿಸ್ತಾನ ಕ್ರಿಕೆಟ್ ತಂಡದ ಯುವ ಆಟಗಾರ ಫಖಾರ್ ಜಮಾನ್ ಜಿಂಬ್ವಾಂಬೆ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದು, ಈ ಮೂಲಕ ಪಾಕ್ ಪರ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದರು.

ಈ ಹಿಂದೆ ಪಾಕ್ ನ ಸಯೀದ್ ಅನ್ವರ್ 21 ವರ್ಷಗಳ ಹಿಂದೆ 194 ರನ್ ಗಳಿಸಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಸದ್ಯ ಈ ದಾಖಲೆಯನ್ನು ಫಖಾರ್ ಜಮಾನ್ 156 ಎಸೆತಗಳಲ್ಲಿ ಅಜೇಯ 210 ರನ್ (24 ಬೌಂಡರಿ, 5 ಸಿಕ್ಸರ್) ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು. ಈ ಮೂಲಕ ದ್ವಿಶತಕರ ಗಳಿಸಿದ ಭಾರತದ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಹಾಗೂ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್, ನ್ಯೂಜಿಲೆಂಡ್ ನ ಮಾರ್ಟಿನ್ ಗುಪ್ಟಿಲ್ ಸಾಲಿಗೆ ಸೇರ್ಪಡೆಯಾದರು.

ಪಂದ್ಯದಲ್ಲಿ ಇಮಾಮ್ ಹುಲ್ ಹಕ್ (112 ಎಸೆತ, 112 ರನ್) ರೊಂದಿಗೆ ಉತ್ತಮ ಜೊತೆಯಾಟ ನೀಡಿದ ಫಖಾರ್ ಜಮಾನ್ 304 ರನ್ ಗಳ ದಾಖಲೆಯ ಆರಂಭಿಕ ಜೊತೆಯಾಟ ನೀಡಿದರು. 2006 ರಲ್ಲಿ ಶ್ರೀಲಂಕಾ ಆಟಗಾರ ಉಪುಲ್ ತರಂಗ, ಜಯಸೂರ್ಯ ಜೋಡಿ ಗಳಿಸಿದ್ದ 286 ರನ್ ಗಳ ಆರಂಭಿಕ ಜೊತೆಯಾಟದ ದಾಖಲೆ ಮುರಿದರು.

ಪಾಕಿಸ್ತಾನ 50 ಓವರ್ ಗಳಲ್ಲಿ 399 ರನ್ ಗಳಿಗೆ 1 ವಿಕೆಟ್ ಕಳೆದು ಜಿಂಬ್ವಾಬೆಗೆ ಬೃಹತ್ ಗುರಿಯನ್ನು ನೀಡಿದರು. ಆದರೆ ಪಾಕ್ ಬೌಲರ್ ಗಳ ಮುಂದೇ ಯಾವುದೇ ಪ್ರತಿರೋಧ ತೋರದ ಜಿಂಬ್ವಾಂಬೆ 155 ರನ್ ಗಳಿಗೆ ಅಲೌಟ್ ಆಗುವ ಮೂಲಕ ಸೋಲುಂಡಿತು. ಪಾಕ್ ಪರ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಾಣವಾಗಿದ್ದು, 2010 ರಲ್ಲಿ ಬಾಂಗ್ಲಾದೇಶ ಪರ ಪಾಕ್ ಗಳಿಸಿದ್ದ 385/7 ಬೃಹತ್ ರನ್ ದಾಖಲೆಯನ್ನು ಅಳಿಸಿ ಹಾಕಿತು. ಈಗಾಗಲೇ 3-0 ಅಂತರದಲ್ಲಿ ನಾಲ್ಕು ಪಂದ್ಯಗಳ ಟೂರ್ನಿಯನ್ನ ಜಯಿಸಿರುವ ಪಾಕ್ , ಮುಂದಿನ ಪಂದ್ಯದ ಗೆಲ್ಲುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ.

Share This Article
Leave a Comment

Leave a Reply

Your email address will not be published. Required fields are marked *