ಬೆಂಗ್ಳೂರಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

1 Min Read

ಬೆಂಗಳೂರು: ಇಲ್ಲಿನ ಹಲಸೂರು (Ulsoor) ಠಾಣಾ ವ್ಯಾಪ್ತಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಗೆ (Israeli Embassy) ಹುಸಿ ಬಾಂಬ್ ಬೆದರಿಕೆಯೊಂದು ಬಂದಿದೆ.

ರಾಯಭಾರಿ ಕಚೇರಿಯ ಅಧಿಕಾರಿಗಳು ಇ-ಮೇಲ್ ಪರಿಶೀಲನೆ ನಡೆಸುತ್ತಿದ್ದಾಗ ಬಾಂಬ್ ಬೆದರಿಕೆಯ (Bomb Threat) ಮೇಲ್ ಬಂದಿರುವುದು ಗೊತ್ತಾಗಿದೆ. ಮೇಲ್‌ನಲ್ಲಿ ಕಚೇರಿ ಹಾಗೂ ಆವರಣದಲ್ಲಿ ಆರ್‌ಡಿಎಕ್ಸ್ ಬಾಂಬ್ ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ಬಾಂಬ್ ಬ್ಲಾಸ್ಟ್ ಆಗುತ್ತೆ ಎಂದು ಬರೆಯಲಾಗಿತ್ತು. ಕೂಡಲೇ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮ್ಯೂಸಿಯಂನಲ್ಲಿ ಸಿಕ್ಕ ಫೋಟೋ ಕೊಟ್ಟ ಸುಳಿವು – ಕಾಶ್ಮೀರದಲ್ಲಿ 2,000 ವರ್ಷ ಹಳೆಯ ಬೌದ್ಧ ಸ್ತೂಪ ಪತ್ತೆ!

ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಂಬ್ ಸ್ಕ್ವಾಡ್, ಶ್ವಾನ ದಳದಿಂದ ಪರಿಶೀಲನೆ ನಡೆಸಿದ್ದು, ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಘಟನೆ ಸಂಬಂಧ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article