ನೊಂದು ಬರೋ ಮಹಿಳೆಯರಿಗೆ ಮಸಾಜ್ ಮಾಡಿ ಸಮಸ್ಯೆ ನಿವಾರಿಸುತ್ತಾನೆ ಫೇಕ್ ಬಾಬಾ – ವಿಡಿಯೋ

Public TV
1 Min Read

ಬೆಂಗಳೂರು: ಜೀವನದಲ್ಲಿ ಸಮಸ್ಯೆ ಇದೆ ಎಂದು ತನ್ನ ಬಳಿ ಬರುವ ಮಹಿಳೆಯರನ್ನ ಟಾರ್ಗೆಟ್ ಮಾಡಿಕೊಂಡು ಬಾಬಾ ವೇಷ ಹಾಕಿಕೊಂಡು ವ್ಯಕ್ತಿಯೊಬ್ಬ ಮೋಸ ಮಾಡುತ್ತಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ.

ತನ್ನ ಬಳಿಗೆ ಬರುವ ಮಹಿಳೆಯರಿಗೆ ದೋಷ ನಿವಾರಣೆ ಮಾಡುತ್ತೇನೆ ಎಂದು ಹೇಳಿ ಕಳ್ಳ ಬಾಬಾ ಮಹಿಳೆಯರ ಅಂಗಾಂಗಳನ್ನು ಮುಟ್ಟಿ ಮಸಾಜ್ ಮಾಡಿ ಮೋಸ ಮಾಡುತ್ತಿದ್ದಾನೆ.

ಕರಾವಳಿ ಭಾಗದಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇರುವ ಬಾಬಾ ಯಾರು ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ನಿರಂಜನ್ ಕುಜ್ಜ ಎಂಬವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಆಪ್‍ಲೋಡ್ ಮಾಡಿದ್ದು, ಇಂತಹ ಸ್ವಾಮೀಜಿಗಳಿಂದ ಎಚ್ಚರವಾಗಿರುವಂತೆ ಸಂದೇಶ ನೀಡಿದ್ದಾರೆ.

ಮಹಿಳೆಯರನ್ನ ಟಾರ್ಗೆಟ್ ಮಾಡಿ ಲೈಂಗಿಕವಾಗಿ ವರ್ತಿಸುವ ಈ ಕಳ್ಳ ಬಾಬಾನ ಬಗ್ಗೆ ಇದುವರೆಗೂ ಪೊಲೀಸರಿಗೆ ಯಾವುದೇ ದೂರುಬಂದಿಲ್ಲ. ಈ ಬಗ್ಗೆ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ವೈರಲ್ ಆಗುವ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿರುವುದು ಕೂಡ ತಿಳಿದಿದ್ದರೂ ಬಾಬಾ ತನ್ನ ಕೃತ್ಯವನ್ನು ನಡೆಸಿದ್ದಾನೆ.

ಜೀವನದಲ್ಲಿ ಕಷ್ಟಗಳನ್ನು ಎದುರಿಸಿ ನೊಂದವರು ಆತನ ಗಾಳಕ್ಕೆ ಸಿಲುಕುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಬಾಬಾ ಮಹಿಳೆಯನ್ನು ತನ್ನ ಲೈಂಗಿಕ ಚಟ ತೀರಿಸಿಕೊಳ್ಳುತ್ತಿದ್ದಾನೆ. ತಮ್ಮ ಕಷ್ಟ ನಿವಾರಣೆ ಆದ್ರೆ ಸಾಕು ಎಂದು ಈತನ ಬಳಿ ತೆರಳುವ ಮಂದಿ ಕೂಡ ಈ ಬಗ್ಗೆ ಮಾತನಾಡುತ್ತಿಲ್ಲ ಎನ್ನಲಾಗಿದೆ.

https://www.youtube.com/watch?v=XikTuMl_VIg

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *