ಕೌಟುಂಬಿಕ ಕಲಹ ಸರಿ ಮಾಡ್ತೀನಿ ಅಂತ ಬಂದ ಜ್ಯೋತಿಷಿ – ಚಿನ್ನ, ಹಣ ದೋಚಿ ಬೀರುವಿನಲ್ಲಿ ನಿಂಬೆಹಣ್ಣು ಇಟ್ಟು ಹೋದ

Public TV
1 Min Read

ಬೆಂಗಳೂರು: ಕೌಟುಂಬಿಕ ಕಲಹ ಸರಿ ಮಾಡ್ತೀನಿ ಅಂತ ಬಂದ ಜ್ಯೋತಿಷಿಯನ್ನ ನಂಬಿ ಕುಟುಂಬವೊಂದು ಚಿನ್ನಾಭರಣ, ಹಣ ಕಳೆದುಕೊಂಡಿರುವ ಘಟನೆ ರಾಜಧಾನಿಯಲ್ಲಿ ಯಲಹಂಕದಲ್ಲಿ ನಡೆದಿದೆ.

ಇಂದಿರಾ ಎಂಬಾಕೆಯ ಮಗಳು-ಅಳಿಯನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಸಮಸ್ಯೆ ಬಗೆಹರಿಸುವಂತೆ ಹೊಸಪೇಟೆ ಮೂಲದ ಜ್ಯೋತಿಷಿ ಸುರೇಶ್‌ ಪಾಟೀಲ್‌ಗೆ ಕುಟುಂಬ ಮನವಿ ಮಾಡಿತ್ತು. ಎಲ್ಲವನ್ನೂ ಸರಿ ಮಾಡ್ತೀನಿ ಅಂತ ಬೆಂಗಳೂರಿನ ಯಲಹಂಕದ ಮನೆಗೆ ಜ್ಯೋತಿಷಿ ಬಂದಿದ್ದ. ಇದನ್ನೂ ಓದಿ: ಕದ್ದು ತಂದಿದ್ದ ಜೆಸಿಬಿ ಬಳಸಿ ATM ಕಳ್ಳತನಕ್ಕೆ ಯತ್ನ

ಅಮಾವಾಸ್ಯೆ-ಹುಣ್ಣಿಮೆ ದಿನಗಳಲ್ಲಿ ವಿಶೇಷ ಪೂಜೆ ಮಾಡಬೇಕು ಅಂತ ಕುಟುಂಬವನ್ನು ದೇವಸ್ಥಾನಕ್ಕೆ ಕಳುಹಿಸಿದ್ದ. ದೇವಸ್ಥಾನಕ್ಕೆ ಹೋದ ವೇಳೆ ಮನೆಯಲ್ಲಿದ್ದ ಐದು ಲಕ್ಷ ಮೌಲ್ಯದ ಚಿನ್ನಾಭರಣ, ಹಣ ಕದ್ದು ಆ ಜಾಗದಲ್ಲಿ ನಿಂಬೆಹಣ್ಣು ಇಟ್ಟಿದ್ದ ಜ್ಯೋತಿಷಿ.

ಇತ್ತ ಕುಟುಂಬದವರು ದೇವಸ್ಥಾನದಿಂದ ವಾಪಸ್ ಮನೆಗೆ ಬಂದ ಬಳಿಕ ಬೀರು ಬಾಗಿಲು ತೆಗೆಯಿರಿ ಅಂತ ತಾನೇ ಸೂಚಿಸಿದ್ದ. ಬಾಗಿಲು ತೆಗೆದ ವೇಳೆ ಹಣ ಕಳುವಾಗಿ ನಿಂಬೆಹಣ್ಣು ಇರೋದು ನೋಡಿ ಕುಟುಂಬ ಶಾಕ್‌ ಆಗಿತ್ತು. ಇದನ್ನು ನಿಮ್ಮ ಬೀಗರ ಮನೆಯವರೇ ಮಾಡಿದ್ದಾರೆ. ಎಲ್ಲವನ್ನು ವಾಪಸ್ ತರಿಸುತ್ತೇನೆ ಅಂತ ಸುಳ್ಳು ಹೇಳಿ ಜ್ಯೋತಿಷಿ ಮತ್ತೆ ಹಣ ಪಡೆದಿದ್ದ. ಇದನ್ನೂ ಓದಿ: ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ದ್ವೇಷ ಹುಟ್ಟಿಸಲು ಪತ್ರ ರಿಲೀಸ್‌- ಬಿ.ಆರ್ ಪಾಟೀಲ್‌ರಿಂದ ದೂರು

ಎರಡು ಅಮಾವಾಸ್ಯೆ ಸಮಯ ಕೊಡಿ ಅಂತಾ ಹೇಳಿ ಹಣ, ಚಿನ್ನಾಭರಣ ಸಮೇತ ಜ್ಯೋತಿಷಿ ಪರಾರಿಯಾಗಿದ್ದಾನೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್