ಇನ್ಮುಂದೆ ಮುಂಬೈ, ದೆಹಲಿ ರೈಲು ನಿಲ್ದಾಣಗಳಲ್ಲಿ AI ಬಯೋಮೆಟ್ರಿಕ್ ತಂತ್ರಜ್ಞಾನ – ಇದರ ಪ್ರಯೋಜನವೇನು?

Public TV
3 Min Read

ನ್ನು  ಮುಂದೆ ಮುಂಬೈ ಹಾಗೂ ದೆಹಲಿ ರೈಲು ನಿಲ್ದಾಣಗಳಲ್ಲಿ ಎಐ(Artificial Intelligence) ಬಯೋಮೆಟ್ರಿಕ್‌ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ. ಇದು ಮುಂಬೈನ (Mumbai) ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ನವದೆಹಲಿ (New Delhi) ಸೇರಿದಂತೆ ಏಳು ಪ್ರಮುಖ ರೈಲು ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆ ಆಧಾರಿತ ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು ಆರಂಭಿಸಲಾಗುತ್ತದೆ.

ಭದ್ರತೆಯ ಜೊತೆಗೆ , ಟಿಕೆಟ್ ಪರಿಶೀಲನೆ ಮತ್ತು ಬೋರ್ಡಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸಲು ಈ ತಂತ್ರಜ್ಞಾನವು ಪೂರಕವಾಗಿದೆ. ಅಲ್ಲದೇ ಪ್ರಯಾಣಿಕರ ಟಿಕೆಟ್‌ಗಾಗಿ ಕಾಯುವುದನ್ನು ಈ ತಂತ್ರಜ್ಞಾನವು ತಪ್ಪಿಸುತ್ತದೆ. ರೈಲ್ವೆ ನಿಲ್ದಾಣಗಳನ್ನು ಸ್ಮಾರ್ಟ್ ನಿಲ್ದಾಣಗಳನ್ನಾಗಿ ಮಾಡುವ ಯೋಜನೆಯಡಿಯಲ್ಲಿ ಇದನ್ನು ಜಾರಿಗೆ ತರಲಾಗುತ್ತಿದೆ. ಇದು ಭದ್ರತೆ, ಕಣ್ಗಾವಲು ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸುವತ್ತ ಗಮನ ಹರಿಸುತ್ತದೆ. ಈ AI ಬಯೋಮೆಟ್ರಿಕ್ ತಂತ್ರಜ್ಞಾನವು ವಿಮಾನ ನಿಲ್ದಾಣಗಳಂತಹ ಇತರ ಸ್ಥಳಗಳಲ್ಲಿ ಈಗಾಗಲೇ ಬಳಕೆಯಲ್ಲಿದೆ.

AI ಬಯೋಮೆಟ್ರಿಕ್ ತಂತ್ರಜ್ಞಾನ ಎಂದರೇನು?

AI ಬಯೋಮೆಟ್ರಿಕ್ ತಂತ್ರಜ್ಞಾನ ಎನ್ನುವುದು ವ್ಯಕ್ತಿಯ ಮುಖದ ಗುರುತನ್ನು ಪತ್ತೆಹಚ್ಚುವ ತಂತ್ರಜ್ಞಾನವಾಗಿದೆ. ಈ ತಂತ್ರಜ್ಞಾನವು ಕಣ್ಣುಗಳು, ಮೂಗು, ಬಾಯಿ ಮತ್ತು ಮುಖದ ರಚನೆಯನ್ನು ಡಿಜಿಟಲ್ ಚಿತ್ರಗಳು ಅಥವಾ ವೀಡಿಯೊ ಫ್ರೇಮ್‌ಗಳಲ್ಲಿ ಸ್ಕ್ಯಾನ್ ಮಾಡುತ್ತದೆ. ಇದು ಡೇಟಾಬೇಸ್‌ನಲ್ಲಿರುವ ಮಾಹಿತಿಯೊಂದಿಗೆ ಮ್ಯಾಚ್‌ ಮಾಡುತ್ತದೆ.

ರೈಲು ನಿಲ್ದಾಣಗಳಿಗೆ ಯಾಕೆ ಈ ತಂತ್ರಜ್ಞಾನವನ್ನು ಬಳಸಬೇಕು?

ಸುರಕ್ಷತೆ ದೃಷ್ಟಿಯಿಂದ ಮತ್ತು ಪ್ರಯಾಣಿಕರ ಅನುಭವವನ್ನು ಹೆಚ್ಚಿಸಲು ಭಾರತೀಯ ರೈಲ್ವೆ ಈ ತಂತ್ರಜ್ಞಾನವನ್ನು ಬಳಸಲು ಯೋಜಿಸಿದೆ. ರೈಲ್ವೆ ನಿಲ್ದಾಣಗಳು ಜನದಟ್ಟಣೆಯ ಸ್ಥಳಗಳಾಗಿದ್ದು, ಅಲ್ಲಿ ಕಳ್ಳತನ, ಭಯೋತ್ಪಾದಕ ಚಟುವಟಿಕೆಗಳು ಅಥವಾ ಇತರ ಅಪರಾಧಗಳ ಸಾಧ್ಯತೆಗಳು ಹೆಚ್ಚಿರುವುದರಿಂದ ಈ ತಂತ್ರಜ್ಞಾನವನ್ನು ಬಳಸಲು ಮುಂದಾಗಿದೆ.

 ಈ ತಂತ್ರಜ್ಞಾನವು ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಪೊಲೀಸ್‌ ಠಾಣೆಯಲ್ಲಿ ಕೇಸ್‌ ಫೈಲ್‌ ಆದವರನ್ನು ಗುರುತಿಸುತ್ತದೆ. ಈ ತಂತ್ರಜ್ಞಾನವು ಅನುಮಾನಾಸ್ಪದ ಚಟುವಟಿಕೆಗಳನ ಮಾಹಿತಿ ಕಲೆ ಹಾಕಲು ಮತ್ತು ಆರೋಪಿಗಳನ್ನು ಕಂಡುಹಿಡಿಯಲು ಸಹಾಯಕವಾಗುತ್ತದೆ. ಈ ತಂತ್ರಜ್ಞಾನವು ರೈಲ್ವೆ ನಿಲ್ದಾಣದ ಭದ್ರತೆಯನ್ನು ಹೆಚ್ಚಿಸುತ್ತದೆ.

ಯಾವೆಲ್ಲ  7 ರೈಲ್ವೆ ನಿಲ್ದಾಣಗಳಲ್ಲಿ  AI ಬಯೋಮೆಟ್ರಿಕ್ ತಂತ್ರಜ್ಞಾನ ಆರಂಭವಾಗಲಿದೆ?

ಭಾರತದ 7 ರೈಲು ನಿಲ್ದಾಣಗಳಲ್ಲಿ ಈ AI ಬಯೋಮೆಟ್ರಿಕ್ ತಂತ್ರಜ್ಞಾನ ಆರಂಭವಾಗಲಿದ್ದು, ಅವು ಯಾವುವೆಂದರೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಲ್‌, ನವದೆಹಲಿಯ ರೈಲ್ವೆ ನಿಲ್ದಾಣ, ಕೋಲ್ಕತ್ತಾದ ಹೌರಾ, ಕೋಲ್ಕತ್ತಾದ ಸೀಲ್ದಾಹ್‌, ಚೆನ್ನೈನ ಸೆಂಟ್ರಲ್‌ ರೈಲ್ವೆ ನಿಲ್ದಾಣ, ಹೈದ್ರಾಬಾದ್‌ನ ಸಿಕಂದರಾಬಾದ್‌ ರೈಲ್ವೆ ನಿಲ್ದಾಣ ಹಾಗೂ ಬಿಹಾರದ ದಾನಾಪುರ ರೈಲು ನಿಲ್ದಾಣಗಳಲ್ಲಿ ಆರಂಭಬವಾಗಲಿದೆ.

ಕಾನೂನು FRT ಯನ್ನು (Face Recongnition Test) ಆಧಾರ್‌ಗೆ ಲಿಂಕ್ ಮಾಡಲು ಅನುಮತಿಸುತಿ ಇದ್ಯಾ?

ಆಧಾರ್ ಕಾಯ್ದೆ, 2016 ರ ಅಡಿಯಲ್ಲಿ, ಆಧಾರ್ ಡೇಟಾವನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಮಾತ್ರ ಬಳಸಬಹುದು ಉದಾಹರಣೆಗೆ ಸರ್ಕಾರಿ ಯೋಜನೆಗಳಿಗೆ ದೃಢೀಕರಣಗಳಿಗೆ ಬಳಸಬಹುದು ಎಂದು ಹೇಳಿತ್ತು. ಮುಖ ಗುರುತಿಸುವ ಪರೀಕ್ಷೆಗೆ ಆಧಾರ್ ಡೇಟಾವನ್ನು ಬಳಸಲು ವಿಶೇಷ ಅನುಮತಿ ಮತ್ತು ಕಾನೂನು ಪ್ರಕ್ರಿಯೆಯ ಅಗತ್ಯವಿದೆ. ಆಧಾರ್ ಡೇಟಾವನ್ನು ದೃಢೀಕರಣ ಪ್ರಕ್ರಿಯೆಯ ಭಾಗವಾಗಿದ್ದಾಗ ಮಾತ್ರ FRT ಗಾಗಿ ಬಳಸಬಹುದು. ಸಾಮಾನ್ಯ ಕಣ್ಗಾವಲಿಗೆ ಅಲ್ಲ ಎಂದು UIDAI ಹೇಳಿದೆ.

 ಈ ತಂತ್ರಜ್ಞಾನ ಹೇಗೆ ಸಹಾಯ ಮಾಡುತ್ತದೆ?

ಈ ತಂತ್ರಜ್ಞಾನವು ಆರೋಪಿಗಳನ್ನು ಅಥವಾ ಶಂಕಿತರನ್ನು ತಕ್ಷಣ ಗುರುತಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಾಗುತ್ತದೆ. ಟಿಕೆಟ್ ಪರಿಶೀಲನೆಯ ಸಮಯವು ಉಳಿತಾಯವಾಗುತ್ತದೆ. ಈ ತಂತ್ರಜ್ಞಾನವು ಹೆಚ್ಚು ನಿಖರವಾಗಿ ಮತ್ತು ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಆರಂಭಿಕ ಹಂತದಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ಗುರುತಿಸುವ ಮೂಲಕ ಅಪರಾಧವನ್ನು ತಡೆಯಲು ಸಹಕರಿಸುತ್ತದೆ.

ಈ ತಂತ್ರಜ್ಞಾನವು ಭಾರತದಲ್ಲಿ ಎಲ್ಲೆಲ್ಲಿ  ಚಾಲ್ತಿಯಲ್ಲಿದೆ?

ಎಐ ಬಯೋಮೆಟ್ರಿಕ್‌ ತಂತ್ರಜ್ಞಾನವು ಈ ಹಿಂದೆಯೇ ವಿಮಾನ ನಿಲ್ದಾಣಗಳಲ್ಲಿ ಬಳಕೆಯಲ್ಲಿದೆ. ದೆಹಲಿ, ಬೆಂಗಳೂರು, ಹೈದರಾಬಾದ್ ಮತ್ತು ಇತರ ವಿಮಾನ ನಿಲ್ದಾಣಗಳಲ್ಲಿ  ಪ್ರಯಾಣಿಕರ ಗುರುತು ಪತ್ತೆ ಹಚ್ಚಲು ಮತ್ತು ಬೋರ್ಡಿಂಗ್ ಪ್ರಕ್ರಿಯೆಯನ್ನು ವೇಗಗೊಳಿಸಲು ಬಳಸಲಾಗುತ್ತಿದೆ. ಇದು ಜುಲೈ 2019 ರಲ್ಲಿ ಕೆಲವು ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಪ್ರಾರಂಭಿಸಲಾಯಿತು.

ದೆಹಲಿ ಮತ್ತು ಚೆನ್ನೈನಲ್ಲಿ ಟ್ರಾಫಿಕ್ ಸಿಗ್ನಲ್‌ಗಳು, ಸಾರ್ವಜನಿಕ ಸ್ಥಳಗಳು ಮತ್ತು ಇತರ ಪ್ರದೇಶಗಳಲ್ಲಿ ಕಣ್ಗಾವಲುಗಾಗಿ ಬಳಸಲಾಗುತ್ತಿದೆ. ಈ ತಂತ್ರಜ್ಞಾನವು ಪೊಲೀಸರಿಗೆ ಅನುಮಾನಾಸ್ಪದ ವ್ಯಕ್ತಿಗಳನ್ನು ಬಹಳ ಬೇಗನೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಗ್ರಾಹಕರ ಪರಿಶೀಲನೆ ಮತ್ತು ಭದ್ರತೆಗಾಗಿ ಕೆಲವು ಬ್ಯಾಂಕ್‌ಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ.

Share This Article