ರಿಲಯನ್ಸ್‌ AI ಕಂಪನಿಯಲ್ಲಿ 30% ಪಾಲನ್ನು ಪಡೆದ ಫೇಸ್‌ಬುಕ್‌

Public TV
1 Min Read

ಮುಂಬೈ: ಮುಕೇಶ್‌ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಆರಂಭಿಸಿದ ಹೊಸ ಕೃತಕ ಬುದ್ದಿಮತ್ತೆ (Artificial Intelligence) ಕಂಪನಿ ರಿಲಯನ್ಸ್ ಎಂಟರ್‌ಪ್ರೈಸ್ ಇಂಟೆಲಿಜೆನ್ಸ್ ಲಿಮಿಟೆಡ್‌ನಲ್ಲಿ (REIL) ಫೇಸ್‌ಬುಕ್‌ (Facebook) ಮಾತೃಸಂಸ್ಥೆ ಮೆಟಾ ಶೇ.30 ರಷ್ಟು ಪಾಲನ್ನು ಪಡೆದುಕೊಂಡಿದೆ.

REIL ಉದ್ಯಮವು AI ಸೇವೆಗಳನ್ನು ಅಭಿವೃದ್ಧಿಪಡಿಸುತ್ತದೆ, ಮಾರುಕಟ್ಟೆ ಮಾಡುತ್ತದೆ ಮತ್ತು ವಿತರಿಸಲಿದೆ. ಜಂಟಿ ಉದ್ಯಮದ ಒಪ್ಪಂದ ಪ್ರಕಾರ ರಿಲಯನ್ಸ್ ಇಂಟೆಲಿಜೆನ್ಸ್ REIL ನಲ್ಲಿ ಶೇ.70 ರಷ್ಟು ಮತ್ತು ಮೆಟಾ (META) ಉಳಿದ ಶೇ.30 ರಷ್ಟು ಪಾಲನ್ನು ಹೊಂದಿರುತ್ತದೆ ಎಂದು ಅದು ಹೇಳಿದೆ.

ಭಾರತದಾದ್ಯಂತ ಎಂಟರ್‌ಪ್ರೈಸ್ AI ಸೇವೆಗಳನ್ನು ಅಭಿವೃದ್ಧಿಪಡಿಸುವುದು, ಮಾರಾಟ ಮಾಡುವುದು ಮತ್ತು ವಿತರಿಸುವುದರ ಮೇಲೆ ಕೇಂದ್ರೀಕರಿಸುವ REIL ನಲ್ಲಿ ಎರಡೂ ಕಂಪನಿಗಳು 855 ಕೋಟಿ ರೂ.ಗಳ ಆರಂಭಿಕ ಸಂಯೋಜಿತ ಹೂಡಿಕೆಯನ್ನು ಮಾಡಿವೆ.  ಇದನ್ನೂ ಓದಿ:  ನೀವು ಬೆಂಗಳೂರಿಗೆ ಹೋದರೆ, ಕನ್ನಡ ಕಲಿಯಿರಿ: ಝೋಹೊ ಸಂಸ್ಥಾಪಕ ಶ್ರೀಧರ್ ವೆಂಬು

ಆಗಸ್ಟ್ 2025 ರಲ್ಲಿ RIL ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಂಟಿ ಉದ್ಯಮದ ಬಗ್ಗೆ ಘೋಷಣೆಯಾಗಿತ್ತು. ಮೇಟಾದ ಓಪನ್‌ಸೋರ್ಸ್‌ ಲಾಮಾ ಆಧಾರಿತ ಮಾದರಿಗಳನ್ನು ನಿರ್ಮಿಸುವಲ್ಲಿ ತಾಂತ್ರಿಕ ಪರಿಣತಿಯನ್ನು ಒದಗಿಸುತ್ತದೆ.

ರಿಲಯನ್ಸ್‌ ಮತ್ತು ಫೇಸ್‌ಬುಕ್‌ ಜೊತೆಯಾಗುವುದು ಇದೇ ಮೊದಲಲ್ಲ. ಏಪ್ರಿಲ್‌ 2020 ರಲ್ಲಿ ಫೇಸ್‌ಬುಕ್ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ 5.7 ಬಿಲಿಯನ್ ಡಾಲರ್‌ (43,574 ಕೋಟಿ ರೂ.) ಹೂಡಿಕೆ ಮಾಡಿತ್ತು ಜೂನ್ 2020 ರಲ್ಲಿ ಭಾರತದ ಸ್ಪರ್ಧಾ ಆಯೋಗವು ಆ ಹೂಡಿಕೆಯನ್ನು ಅನುಮೋದಿಸಿದ್ದು ಈಗ ಜಿಯೋ (Jio) ಪ್ಲಾಟ್‌ಫಾರ್ಮ್‌ಗಳಲ್ಲಿ 9.99% ಪಾಲನ್ನು ಫೇಸ್‌ಬುಕ್‌ ಹೊಂದಿದೆ.

Share This Article