2047ಕ್ಕೆ ಎಕ್ಸ್‌ಪ್ರೆಸ್‌ವೇಗಳ ಅಭಿವೃದ್ಧಿಗೆ ಸರ್ಕಾರ ಮಾಸ್ಟರ್‌ಪ್ಲಾನ್‌

Public TV
2 Min Read

ನವದೆಹಲಿ: 2047 ಕ್ಕೆ ಹೆದ್ದಾರಿಗಳು (Highway) ಮತ್ತು ಎಕ್ಸ್‌ಪ್ರೆಸ್‌ವೇಗಳ (Expressway) ಅಭಿವೃದ್ಧಿಗಾಗಿ ಸರ್ಕಾರವು ಮಾಸ್ಟರ್ ಪ್ಲಾನ್‌ ಮಾಡುತ್ತಿದೆ. ಇದು ಟ್ರಕ್‌ಗಳು ಒಂದು ದಿನದಲ್ಲಿ 800 ಕಿ.ಮೀ ಕ್ರಮಿಸಲು ಸಾಧ್ಯವಾಗಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸ್ತುತ ಭಾರತದಲ್ಲಿ ಟ್ರಕ್‌ಗಳು ಒಂದು ದಿನದಲ್ಲಿ 300 ರಿಂದ 350 ಕಿಮೀಗಳನ್ನು ಕ್ರಮಿಸುತ್ತವೆ. ಇದು ಯುಎಸ್ ಮತ್ತು ಯುರೋಪ್‌ನ ಅಂಕಿ-ಅಂಶಗಳಿಗಿಂತ ಕಡಿಮೆಯಾಗಿದೆ. ಯುರೋಪ್‌ನಲ್ಲಿ ದಿನಕ್ಕೆ 750 ಕಿಮೀ ಆಗಿದ್ದರೆ, ಯುಎಸ್‌ನಲ್ಲಿ ಚಾಲಕರು ಗಂಟೆಗೆ 100 ಕಿ.ಮೀ ವೇಗದಲ್ಲಿ ದಿನಕ್ಕೆ 1100-1200 ಕಿ.ಮೀ ವರೆಗೆ ಕಾನೂನುಬದ್ಧವಾಗಿ ಚಾಲನೆ ಮಾಡಬಹುದು. ಎಕ್ಸ್‌ಪ್ರೆಸ್‌ವೇಗಳು ಮತ್ತು ಹೊಸ ಹೆದ್ದಾರಿಗಳೊಂದಿಗೆ ವೇಗದ ಹೆಚ್ಚಳವು ಲಾಜಿಸ್ಟಿಕ್ಸ್ ವೆಚ್ಚವನ್ನು 3-4% ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇತ್ತೀಚಿನ ಅಧ್ಯಯನದ ಪ್ರಕಾರ, ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ (NCAER), ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ಮತ್ತು ತಜ್ಞರೊಂದಿಗೆ ಸಮಾಲೋಚಿಸಿ ದೇಶದಲ್ಲಿ ಲಾಜಿಸ್ಟಿಕ್ಸ್ ವೆಚ್ಚಗಳು ಒಟ್ಟು ಆರ್ಥಿಕ ಉತ್ಪಾದನೆಯ ಶೇ.7.8% ರಿಂದ 8.9 ರ ನಡುವೆ ಇರುತ್ತದೆ. ಲಾಜಿಸ್ಟಿಕ್ಸ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು, 2030 ರ ವೇಳೆಗೆ ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು, ವಿಶ್ವ ಬ್ಯಾಂಕ್‌ನ ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಸೂಚ್ಯಂಕ (LPI) ಶ್ರೇಯಾಂಕವನ್ನು ಸುಧಾರಿಸುವ ಉದ್ದೇಶದಿಂದ ಸರ್ಕಾರವು ಕಳೆದ ಸೆಪ್ಟೆಂಬರ್‌ನಲ್ಲಿ ಲಾಜಿಸ್ಟಿಕ್ಸ್ ನೀತಿಯನ್ನು ಹೊರತಂದಿತ್ತು.

2047 ರ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳ ಜಾಲದ ಅಭಿವೃದ್ಧಿಗಾಗಿ ಮಾಸ್ಟರ್‌ಪ್ಲಾನ್ ದೇಶದ ರಾಷ್ಟ್ರೀಯ ಹೆದ್ದಾರಿಗಳ ಒಟ್ಟಾರೆ ಚೌಕಟ್ಟನ್ನು ಬಹುಮುಖವಾಗಿ ಹೆಚ್ಚಿಸುತ್ತದೆ ಎಂದು ಅಧಿಕಾರಿ ಹೇಳಿದರು.  ಇದನ್ನೂ ಓದಿ: ಅರವಿಂದ್‌ ಕೇಜ್ರಿವಾಲ್‌ 7 ದಿನಗಳ ಕಾಲ ಇ.ಡಿ ಕಸ್ಟಡಿಗೆ

ಮಾಸ್ಟರ್‌ಪ್ಲಾನ್ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಸಿದ್ಧಪಡಿಸಿದ ಬ್ರಾಡರ್ ವಿಷನ್ 2047 ರ ಭಾಗವಾಗಿದೆ. ಈ ಯೋಜನೆಯಡಿ 50,000 ಕಿಮೀ ‌ಹೆದ್ದಾರಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಎಕ್ಸ್‌ಪ್ರೆಸ್‌ವೇಗಳ ಜೋಡಣೆಯು ದೇಶದ ಯಾವುದೇ ಸ್ಥಳದಿಂದ ಕೇವಲ 100-125 ಕಿ.ಮೀ. ಆಗಿರುತ್ತದೆ. ಪ್ರಸ್ತುತ ದೇಶದಲ್ಲಿ ಎಕ್ಸ್‌ಪ್ರೆಸ್‌ವೇಗಳ ಒಟ್ಟು ಉದ್ದ 2913 ಕಿ.ಮೀ. ಆಗಿರುತ್ತದೆ. ದೇಶದಲ್ಲಿ ಒಟ್ಟಾರೆ ರಾಷ್ಟ್ರೀಯ ಹೆದ್ದಾರಿ ಉದ್ದ 1.46 ಲಕ್ಷ ಕಿ.ಮೀ ಆಗಿದ್ದು, ಭಾರತ್‌ಮಾಲಾ ನಂತಹ ಚಾಲ್ತಿಯಲ್ಲಿರುವ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ಎಕ್ಸ್‌ಪ್ರೆಸ್‌ವೇಗಳು ಮತ್ತು ವಿಸ್ತರಣೆಗಳನ್ನು ಪೂರ್ಣಗೊಳಿಸುವುದರಿಂದ ಒಟ್ಟು ಉದ್ದವು 2 ಲಕ್ಷ ಕಿಮೀ ಮೀರುತ್ತದೆ.

ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳ ಹೊರತಾಗಿ, ಅಸ್ತಿತ್ವದಲ್ಲಿರುವ ಹೆದ್ದಾರಿಗಳಲ್ಲಿ ಸಾಮರ್ಥ್ಯ ವರ್ಧನೆಗೆ ಸರ್ಕಾರವು ಗಮನಹರಿಸಿದೆ. 2014 ರಲ್ಲಿ 30% ಇದ್ದ 2 ಲೇನ್ ಅಗಲಕ್ಕಿಂತ ಕಡಿಮೆ ಇರುವ ಹೆದ್ದಾರಿಗಳ ಪಾಲು 2023 ರಲ್ಲಿ 10% ಕ್ಕೆ ಇಳಿದಿದೆ. ಅವುಗಳ ಒಟ್ಟಾರೆ ಉದ್ದವು 2014 ರಲ್ಲಿ 27,517 ಕಿಮೀ ನಿಂದ 14,850 ಕಿಮೀಗೆ ಇಳಿದಿದೆ.

ಎರಡು ಲೇನ್‌ಗಳು ಅಥವಾ ಅದಕ್ಕಿಂತ ಹೆಚ್ಚು ಆದರೆ 4 ಲೇನ್‌ಗಳಿಗಿಂತ ಕಡಿಮೆ ಇರುವ ಹೆದ್ದಾರಿಗಳ ಪಾಲು 58% ಅಥವಾ 85,096 ಕಿಮೀಗೆ ಏರಿದೆ. ನಾಲ್ಕು ಲೇನ್‌ಗಳು ಅಥವಾ ಅದಕ್ಕಿಂತ ಹೆಚ್ಚಿನ ಹೆದ್ದಾರಿಗಳ ಉದ್ದವು 46,179 ಕಿಮೀಗೆ ಏರಿದೆ. ಇದು ಒಟ್ಟು 32% ಆಗಿದೆ, ಇದು 2014 ರಲ್ಲಿ 18,371 ಕಿಮೀ ಅಥವಾ 20% ರಿಂದ ಹೆಚ್ಚಾಗಿದೆ.

Share This Article