ಮೈಸೂರು: ಸಿಡಿಮದ್ದು (Explosive) ಸ್ಫೋಟಗೊಂಡು ಮಹಿಳೆ ಗಾಯಗೊಂಡಿರುವ ಘಟನೆ ಮೈಸೂರು (Mysuru) ಜಿಲ್ಲೆ ಹುಣಸೂರು (Hunsur) ತಾಲೂಕು ಹುಳಿಯಾಳು ಗ್ರಾಮದಲ್ಲಿ ನಡೆದಿದೆ.
ಕಮಲಮ್ಮ (54) ಸ್ಫೋಟದಿಂದ ಗಾಯಗೊಂಡ ಮಹಿಳೆ. ಮನೆ ಬಳಿ ಕಮಲಮ್ಮಗೆ ಒಂದು ಕವರ್ ಸಿಕ್ಕಿತ್ತು. ಕವರ್ ತೆರೆದಾಗ ಸಿಡಿಮದ್ದು ಸ್ಫೋಟಗೊಂಡಿದೆ. ಇದನ್ನೂ ಓದಿ: ಕಾಂಬೋಡಿಯಾ-ಥೈಲ್ಯಾಂಡ್ ಘರ್ಷಣೆ – ಗಡಿ ಪ್ರದೇಶಗಳಿಗೆ ತೆರಳದಂತೆ ಭಾರತೀಯ ಪ್ರಜೆಗಳಿಗೆ ಸಲಹೆ
ಸದ್ಯ ಗಾಯಾಳು ಕಮಲಮ್ಮನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: Rajasthan | ಶಾಲಾ ಮೇಲ್ಛಾವಣಿ ಕುಸಿದು 7 ವಿದ್ಯಾರ್ಥಿಗಳು ಸಾವು – ಐವರು ಶಿಕ್ಷಕರ ಅಮಾನತು