Explainer | ಹಾರ್ಮುಜ್‌ ಜಲಸಂಧಿಯಲ್ಲಿ ಸ್ಫೋಟಕ ಇರಿಸಿದ ಇರಾನ್‌ – ತೆಗೆದುಹಾಕಲು ಸಿದ್ಧ ಎಂದ ಜಪಾನ್‌; ಹೇಗೆ ಸಾಧ್ಯ?

4 Min Read

– ಏನಿದು ನೇವಲ್‌ ಮೈನ್ಸ್‌?

ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಹಡಗುಗಳು ಸಂಚರಿಸದಂತೆ ಸಮುದ್ರದ ಒಳಗಡೆ ಇರಾನ್‌ ಇರಿಸಿರುವ ಸ್ಫೋಟಕಗಳನ್ನ (ಇದನ್ನ ನೇವಲ್‌ ಮೈನ್ಸ್‌ ಅಥವಾ ನೆಲಬಾಂಬ್‌ ಅಂತ ಕರೆಯಲಾಗುತ್ತದೆ) ತೆಗೆದುಹಾಕಲು ಸಹಾಯ ಮಾಡುವುದಾಗಿ ಜಪಾನ್‌ ಹೇಳಿದೆ.

ವಿದೇಶಾಂಗ ಸಚಿವ ತೋಷಿಮಿಟ್ಸು ಮೊಟೆಗಿ ಅವರ ಪ್ರಕಾರ, ಹಾರ್ಮುಜ್‌ ಜಲಸಂಧಿಯ ಪ್ರದೇಶದಲ್ಲಿ ಕದನ ವಿರಾಮ ಘೋಷಿಸಿದ್ರೆ, ಜಪಾನ್‌ (Japan) ತನ್ನ ಮೈನ್‌ಸ್ವೀಪರ್‌ ಹಡಗು (ಕಡಲ ಸ್ವರಕ್ಷಣಾ ಪಡೆ ಇರುವ ಹಡಗು) ಬಳಸಿಕೊಂಡು ನೆಲಬಾಂಬ್‌ (ನೇವಲ್‌ ಮೈನ್ಸ್‌) (Naval Mines) ಗಳನ್ನ ತೆರವುಗೊಳಿಸಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ನ ನ್ಯೂಕ್ಲಿಯರ್‌ ಸೌಲಭ್ಯವಿರುವ ಪಟ್ಟಣಗಳ ಮೇಲೆ ಇರಾನ್‌ ಕ್ಷಿಪಣಿ ಸುರಿಮಳೆ – 100ಕ್ಕೂ ಹೆಚ್ಚು ಮಂದಿಗೆ ಗಾಯ

ಅಮೆರಿಕದ ನ್ಯಾಟೋ (NATO) ಮಿತ್ರರಾಷ್ಟ್ರಗಳು ಇರಾನ್‌ (Iran) ವಿರುದ್ಧದ ಯಾವುದೇ ಕಾರ್ಯಾಚರಣೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದರೂ ಜಪಾನ್‌ ತನ್ನ ಸಂವಿಧಾನ ಮತ್ತು ಭದ್ರತಾ ಕಾನೂನುಗಳ ಪರಿಮಿತಿಯಲ್ಲಿ ಈ ವಿಷಯವನ್ನ ಪ್ರಸ್ತಾಪಿಸಿದೆ.

naval mines

ಮೈನ್‌ಸ್ವೀಪರ್‌ ಎಂಬುದು ಕಡಲ ಸಂರಕ್ಷಣೆಗೆ ಬಳಸುವ ವಿಶೇಷ ಹಡಗುಗಳಾಗಿವೆ. ಇದು ಸಾಗರದ ದೊಡ್ಡ ಪ್ರದೇಶಗಳಲ್ಲಿ ಸಂಭಾವ್ಯ ಸ್ಫೋಟಕಗಳನ್ನ ತಟಸ್ಥಗೊಳಿಸಿ, ಸುರಕ್ಷಿತ ಮಾರ್ಗಕ್ಕೆ ಅನುವು ಮಾಡಿಕೊಡುತ್ತವೆ. ಜಪಾನ್‌ನ ಕಡಲ ಸ್ವರಕ್ಷಣಾ ಪಡೆ (JMSDF) ಈ ತಂತ್ರಜ್ಞಾನದಲ್ಲಿ ವಿಶ್ವದ ಅತ್ಯಂತ ಸಮರ್ಥ ಸಂಘಟನೆ ಎಂದು ಗುರುತಿಸಿಕೊಂಡಿದೆ. ಇದನ್ನೂ ಓದಿ: ಹಿಂದೂ ಮಹಾಸಾಗರ ಡೀಗೊ ಗಾರ್ಸಿಯಾ ಬೇಸ್ ಮೇಲೆ ಇರಾನ್ ದಾಳಿ – 4,000 ಕಿಮೀ ದೂರಕ್ಕೆ ಕ್ಷಿಪಣಿ ಹಾರಿಸಿ ದಾಳಿ

ಏನಿದು ನೇವಲ್‌ ಮೈನ್ಸ್‌?
ನಕ್ಸಲೈಟ್‌ಗಳು, ಉಗ್ರಗಾಮಿಗಳು ಭೂಮಿ ಒಳಗಡೆ ಬಾಂಬ್‌ ಇಡುವುದನ್ನು ನೀವು ಓದಿರಬಹುದು. ಈ ನೆಲಬಾಂಬ್‌ ಹುದುಗಿಸಿದ ಜಾಗದ ಮೇಲೆ ಕಾಲು ಇಟ್ಟಾಗ ಅಥವಾ ವಾಹನಗಳು ಸಂಚರಿಸಿದಾಗ ಒತ್ತಡದಿಂದ ಅದು ಸ್ಫೋಟಗೊಳ್ಳುತ್ತದೆ. ಅದೇ ರೀತಿಯಾಗಿ ನೀರಿನ ಒಳಗಡೆಯೂ ಸ್ಫೋಟಕಗಳನ್ನ ಇರಿಸಿ ಹಡಗುಗಳು, ಜಲಾಂತರ್ಗಾಮಿಗಳನ್ನು ನಾಶ ಮಾಡಲು ನೇವಲ್‌ ಮೈನ್ಸ್‌ ಬಳಕೆ ಮಾಡಲಾಗುತ್ತದೆ. ಹಡಗುಗಳು ಅವುಗಳ ಸಂಪರ್ಕಕ್ಕೆ ಬಂದಾಗ ಅಥವಾ ಅವುಗಳ ಹತ್ತಿರ ಸುಳಿದಾಗ ಸ್ಫೋಟಗೊಳ್ಳುವಂತೆ ವಿನ್ಯಾಸ ಮಾಡಲಾಗಿರುತ್ತದೆ. ʻಗಾಝಿ ಅಟ್ಯಾಕ್‌ʼ ಸಿನಿಮಾದಲ್ಲಿ ಇದನ್ನು ಬಹಳ ಅದ್ಭುತವಾಗಿ ತೋರಿಸಲಾಗಿದೆ.

ಈ ಮೈನ್‌ಗಳನ್ನು ರಕ್ಷಣಾತ್ಮಕವಾಗಿ (ತನ್ನದೇ ಆದ ಹಡಗುಗಳನ್ನು ರಕ್ಷಿಸಲು) ಅಥವಾ ಆಕ್ರಮಣಕಾರಿಯಾಗಿ (ಶತ್ರುಗಳ ಹಡಗುಗಳ ಸಂಚಾರವನ್ನು ತಡೆಯಲು) ಬಳಸಲಾಗುತ್ತದೆ.

ಯಾವ ರೀತಿ ಇರುತ್ತೆ?
ಕೆಲವು ಮೈನ್‌ಗಳನ್ನು ಸಮುದ್ರದ ತಳಕ್ಕೆ ಹಾಕಿದ್ದರೆ, ಇನ್ನು ಕೆಲವು ನೀರಿನಲ್ಲಿ ತೇಲುತ್ತಿರುತ್ತವೆ. ಈ ಸ್ಫೋಟಕಗಳನ್ನು ತಾಗಿದಾಗ ಸ್ಫೋಟಗೊಳ್ಳುತ್ತದೆ. ಹಡಗು ಸಂಚರಿಸುತ್ತಿದ್ದಾಗ ಕಾಂತೀಯ ಕ್ಷೇತ್ರ, ಪ್ರೊಪೆಲ್ಲರ್‌ ಶಬ್ಧ ನೀರಿನ ಒತ್ತಡದಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚಿ ಸ್ಫೋಟಗೊಳ್ಳುವಂತೆ ರೂಪಿಸಲಾಗಿರುತ್ತದೆ. ಇದನ್ನೂ ಓದಿ: ಹಾರ್ಮುಜ್‌ ಜಲಸಂಧಿ ಮಾರ್ಗದಲ್ಲಿ ಸುರಕ್ಷಿತ ತೈಲ ಸಾಗಣೆಗೆ 20ಕ್ಕೂ ಹೆಚ್ಚು ದೇಶಗಳ ಬೆಂಬಲ

ಇವುಗಳನ್ನು ವಿಶೇಷ ಹಡಗುಗಳು, ಜಲಾಂತರ್ಗಾಮಿಗಳು ಅಥವಾ ವಿಮಾನಗಳ ಮೂಲಕ ಸಮುದ್ರಕ್ಕೆ ಹಾಕಲಾಗುತ್ತದೆ. ಇವುಗಳು ಕ್ಷಿಪಣಿಗಳಿಗಿಂತ ಕಡಿಮೆ ವೆಚ್ಚದಾಯಕವಾಗಿದೆ ಮಾತ್ರವಲ್ಲ ಶತ್ರು ಹಡಗುಗಳಿಗೆ ಭಾರಿ ಹಾನಿ ಉಂಟುಮಾಡುತ್ತದೆ. ಇರಾನ್‌ ದೇಶೀಯವಾಗಿ ನೇವಲ್‌ ಮೈನ್ಸ್‌ ತಯಾರಿಸುವ ಸಾಮರ್ಥ್ಯ ಹೊಂದಿದೆ. ಕೆಲವು ಸುಧಾರಿತ ವಿನ್ಯಾಸಗಳನ್ನ ರಷ್ಯಾ, ಚೀನಾ ಅಥವಾ ಉತ್ತರ ಕೊರಿಯಾದಲ್ಲಿ ಅಭಿವೃದ್ಧಿಪಡಿಸಿದ ವ್ಯವಸ್ಥೆಗಳಿಂದ ಪಡೆದಿದೆ ಎನ್ನಲಾಗುತ್ತಿದೆ.

ಅಮೆರಿಕ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಮ್ಯಾರಿಟೈಮ್ ಸೆಕ್ಯುರಿಟಿಯ ಪ್ರಕಾರ, ಇರಾನ್ ಸುಮಾರು 2,000 ರಿಂದ 5,000 ನೇವಲ್‌ ಮೈನ್ಸ್‌ ಹೊಂದಿರುವ ಸಾಧ್ಯತೆಯಿದೆ.

ಮೈನ್‌ಸ್ವೀಪರ್ ಮತ್ತು ಮೈನ್‌ ಹಂಟರ್‌ನ ವಿಶೇಷತೆ ಏನು?
ನೇವಲ್‌ ಮೈನ್ಸ್‌ ಅಂದ್ರೆ ಸಮುದ್ರದೊಳಗೆ ಇರಿಸುವ ಸ್ಫೋಟಕಗಳನ್ನ ತೆರವುಗೊಳಿಸಲು 2 ರೀತಿಯ ವಿಶೇಷ ಹಡಗುಗಳನ್ನ ಬಳಸಲಾಗುತ್ತದೆ. ಎರಡೂ ವಿಭಿನ್ನ ಕಾರ್ಯಾಚರಣೆಯ ವಿಧಾನವನ್ನ ಒಳಗೊಂಡಿರುತ್ತದೆ. ಮೈನ್‌ ಹಂಟರ್‌ ಹಡಗುಗಳ ಪ್ರಾಥಮಿಕ ಕಾರ್ಯವೆಂದ್ರೆ ಸೋನಾರ್‌ ಮತ್ತು ಡೈವರ್‌ಗಳನ್ನ ಬಳಸಿಕೊಂಡು ನಿರ್ದಿಷ್ಟ ಸ್ಫೋಟಕಗಳನ್ನ ಪತ್ತೆಹಚ್ಚುವುದು ಮತ್ತು ನಾಶಪಡಿಸುವುದು. ಮೈನ್‌ಸ್ವೀಪರ್‌ ಹಡಗುಗಳು ಸಂಪೂರ್ಣ ಸಮುದ್ರ ಪ್ರದೇಶಗಳನ್ನು ಅಥವಾ ಗಣಿಗಳ ನಿರ್ದಿಷ್ಟ ಮಾರ್ಗಗಳನ್ನ ತೆರವುಗೊಳಿಸಲು ಕಾರ್ಯನಿರ್ವಹಿಸುತ್ತದೆ. ಮೈಸ್ವೀಪರ್‌ ಕೆಲಸವು ಸಮುದ್ರದಲ್ಲಿ ಇರಿಸಲಾದ ಸ್ಫೋಟಗಳನ್ನು ಪತ್ತೆಹಚ್ಚುವುದಾಗಿರುವುದಿಲ್ಲ, ಆದ್ರೆ ಸರಕು ಮತ್ತು ಯುದ್ಧನೌಕೆಗಳು ಅಪಾಯವಿಲ್ಲದೇ ಹಾದುಹೋಗುವಂತೆ‌ ಸುರಕ್ಷಿತ ಮಾರ್ಗವನ್ನ ಅನುವು ಮಾಡಿಕೊಡುತ್ತದೆ. ಈ ಹಡಗುಗಳು ನೆಲಬಾಂಬ್‌ಗಳನ್ನ ನಿಷ್ಕ್ರಿಯಗೊಳಿಸಲು ಯಾಂತ್ರಿಕ ಅಥವಾ ವಿದ್ಯುತ್‌ ಸಾಧನಗಳನ್ನ ಬಳಸಿಕೊಳ್ಳುತ್ತವೆ.

ಮೈನ್‌ಸ್ವೀಪಿಂಗ್ ಏಕೆ ಅಗತ್ಯ?
ಸಮುದ್ರ ಸ್ಫೋಟಕಗಳು ಯಾವುದೇ ವ್ಯಾಪಾರ ಮಾರ್ಗಕ್ಕೆ ಗಮನಾರ್ಹ ಬೆದರಿಕೆ ಒಡ್ಡುತ್ತವೆ. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಹುಟ್ಟಿಕೊಂಡ ಈ ಸಂಪ್ರದಾಯವು ಇಂದು ಹೆಚ್ಚು ಅಪಾಯಕಾರಿಯಾಗಿದೆ. ಮಿಂಗ್ ರಾಜವಂಶದ ಕಾಲದಿಂದಲೂ ಆಧುನಿಕ ತಂತ್ರಜ್ಞಾನವು ಈ ಇತಿಹಾಸವನ್ನ ಗಮನಾರ್ಹವಾಗಿ ಬದಲಾಯಿಸಿದೆ. ಹಾಗಾಗಿ ಮೈನ್‌ಸ್ವೀಪರ್‌ ಹಡಗುಗಳು ಸಮುದ್ರದ ʻಕ್ಲೀನರ್‌ʼ ಗಳಾಗಿ ಕಾರ್ಯನಿರ್ವಹಿಸುತ್ತವೆ. ಯಾವುದೇ ಹಡಗಿನ ಬಳಿ ಸ್ಫೋಟಕಗಳು ಸ್ಫೋಟಗೊಳ್ಳದಂತೆ ನೋಡಿಕೊಳ್ಳುತ್ತವೆ. ಹಾರ್ಮುಜ್‌ ಜಲಸಂಧಿ ಕಿರಿದಾದದ ಮಾರ್ಗವಾಗಿರುವುದರಿಂದ ಇಲ್ಲಿ ಸ್ಫೋಟಕಗಳನ್ನು ತಟಸ್ಥಗೊಳಿಸದಿದ್ದರೆ ಜಾಗತಿಕ ಮಟ್ಟದಲ್ಲಿ ಇಂಧನ ಅಭಾವ ಉಂಟಾಗುತ್ತದೆ. ಹಾಗಾಗಿ ಮೈನ್‌ ಸ್ವೀಪಿಂಗ್‌ ಅಗತ್ಯವಿದೆ ಎಂದು ಜಪಾನ್‌ ಹೇಳಿದೆ.

Share This Article