ಇಸ್ರೇಲ್, ಪ್ಯಾಲೆಸ್ಟೈನ್‌ ಮಧ್ಯೆ ಕಾದಾಟ ಯಾಕೆ? 6 ದಿನ ನಡೆದ ಯುದ್ಧದಲ್ಲಿ ಏನಾಯ್ತು? – ಇಲ್ಲಿದೆ ಪೂರ್ಣ ಮಾಹಿತಿ

By
3 Min Read

ಸ್ರೇಲ್ ಹಾಗೂ ಪ್ಯಾಲೆಸ್ಟೈನ್‌ (Palestine) 2021ರಲ್ಲಿ ಭೀಕರ ಕಾಳಗ ನಡೆಸಿದ ನಂತರ ಈಗ ಮತ್ತೊಮ್ಮೆ ಎದುರು ಬದುರಾಗಿವೆ. ವೈಮಾನಿಕ ದಾಳಿ ಹಾಗೂ ಗುಂಡಿನ ಚಕಮಕಿ ಬಳಿಕ ಮತ್ತೊಮ್ಮೆ 2 ರಾಷ್ಟ್ರಗಳ ನಡುವೆ ಘನಘೋರ ಕಾದಾಟ ನಡೆಯುತ್ತಿದೆ.

ಹಮಾಸ್‌ ಉಗ್ರರು ಇಸ್ರೇಲ್‌ (Israel) ನಗರದ ಒಳಗಡೆ ನುಗ್ಗಿ ಸೈನಿಕರ ಜನರ ಪ್ರಾಣ ತೆಗೆಯುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ದಾಳಿ ನಡೆಸುತ್ತಿದೆ.

ಕಿತ್ತಾಟ ಯಾಕೆ?
ಇಸ್ರೇಲ್‌ ಮತ್ತು ಪ್ಯಾಲೆಸ್ಟೈನ್‌ ಮಧ್ಯೆ ಕಾಳಗ ಯಾಕೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ 77 ವರ್ಷಗಳ ಹಿಂದಕ್ಕೆ ಹೋಗಬೇಕು. ಎರಡನೇ ವಿಶ್ವಯುದ್ಧ ಬಳಿಕ 1945ರಲ್ಲಿ ಬ್ರಿಟನ್ ವಿಶ್ವಸಂಸ್ಥೆಗೆ ಒಟ್ಟೋಮಾನ್ ಸಾಮ್ರಾಜ್ಯವನ್ನ ಒಪ್ಪಿಸಿತು.   ಇದನ್ನೂ ಓದಿ: ಕಷ್ಟದ ಸಮಯದಲ್ಲಿ ಇಸ್ರೇಲ್ ಪರ ಒಗ್ಗಟ್ಟಿನಿಂದ ನಿಲ್ಲುತ್ತೇವೆ: ನರೇಂದ್ರ ಮೋದಿ

1947ರಲ್ಲಿ ವಿಶ್ವಸಂಸ್ಥೆ ಅರಬ್ ರಾಜ್ಯ ಹಾಗೂ ಇಸ್ರೇಲ್ ಎಂದು ಆ ಭೂಭಾಗವನ್ನ ವಿಂಗಡಿಸಿತು. ಇದಾದ ಒಂದು ವರ್ಷದ ಬಳಿಕ 1948ರಲ್ಲಿ ಇಸ್ರೇಲ್ ತಾನೊಂದು ಸ್ವತಂತ್ರ ದೇಶ ಎಂದು ಘೋಷಣೆ ಮಾಡಿತು. ಈ ಮೂಲಕ ವಿಶ್ವದ ಮೊದಲ ಯಹೂದಿ ದೇಶವಾಗಿ ಅಸ್ತಿತ್ವಕ್ಕೂ ಬಂತು. ಯಹೂದಿ ದೇಶವಾಗಿ ಅಸ್ತಿತ್ವಕ್ಕೆ ಬಂದರೂ ಜೆರುಸಲೇಂ ಸೇರಿದಂತೆ ಹಲವು ಪ್ರದೇಶಗಳು ನನ್ನದು. ಅದು ತನಗೆ ಸೇರಬೇಕೆಂದು ಹೇಳುತ್ತಿತ್ತು. ಇಸ್ರೇಲ್‌ ದೇಶವಾಗಿದ್ದನ್ನು ಪ್ಯಾಲೆಸ್ಟೈನ್‌ ಸೇರಿದಂತೆ ಅರಬ್‌ ರಾಷ್ಟ್ರಗಳು ವಿರೋಧಿಸುತ್ತಲೇ ಇವೆ. ವಿಶೇಷ ಏನೆಂದರೆ ಮೂರು ಧರ್ಮಗಳ ಪವಿತ್ರ ಸ್ಥಳ ಜೆರುಸಲೇಂ (Jerusalem) ಆಗಿದೆ. ಈಗ ಕಿತ್ತಾಟ ನಡೆಯುತ್ತಿರುವ ಜೆರುಸಲೇಂ ಯಹೂದಿ, ಮುಸ್ಲಿಮ್‌ ಮತ್ತು ಕ್ರೈಸ್ತರ ಪವಿತ್ರ ಸ್ಥಳವಾಗಿದೆ.

ಯಹೂದಿಗಳಿಗೆ ಯಾಕೆ?
ಟೆಂಪಲ್ ಮೌಂಟ್ ಯಹೂದಿಗಳ (Jews) ಅತ್ಯಂತ ಪವಿತ್ರ ಸ್ಥಳವೆಂದು ಕರೆಯಲಾಗುತ್ತದೆ. ಯಹೂದಿ ದಂತಕಥೆಯ ಪ್ರಕಾರ ಅಬ್ರಹಾಂ ತನ್ನ ಧರ್ಮ ಮತ್ತು ನಂಬಿಕೆಯನ್ನು ಸಾಬೀತುಪಡಿಸಲು ದೇವರ ಬೇಡಿಕೆಯ ಮೇರೆಗೆ ತನ್ನ ಮಗ ಐಸಾಕ್‌ನನ್ನು ತ್ಯಾಗ ಮಾಡಲು ಹೋಗುತ್ತಾನೆ. ಈ ಸಂದರ್ಭದಲ್ಲಿ ಮೇಲಿನಿಂದ ಕುರಿ ಕಾಣಿಸಿಕೊಂಡಿತು ಮತ್ತು ಅವನ ಮಗನನ್ನು ಬಿಡುಗಡೆ ಮಾಡಿತು ಎಂಬ ಕಥೆಯಿದೆ.

ಯಹೂದಿಗಳ ಮೊದಲ ಮತ್ತು ಎರಡನೆಯ ಪವಿತ್ರ ದೇವಾಲಯಗಳು ಇಲ್ಲಿದೆ. ಜೆರುಸಲೇಂನಲ್ಲಿ ಅನೇಕ ಯಹೂದಿ ಪ್ರವಾದಿಗಳು ಬೋಧಿಸಿದ್ದಾರೆ. ಜಗತ್ತನ್ನು ಸೃಷ್ಟಿಸಿದ ಅಡಿಪಾಯದ ಸ್ಥಳ ಇದು ಎಂದು ಯಹೂದಿಗಳು ನಂಬುತ್ತಾರೆ. ಅನೇಕ ಯಹೂದಿಗಳು ಡೋಮ್ ಆಫ್ ದಿ ರಾಕ್ ಅನ್ನು ಪವಿತ್ರ ಸ್ಥಳವೆಂದು ನಂಬುತ್ತಾರೆ. ವಾರ್ಷಿಕವಾಗಿ ಲಕ್ಷಾಂತರ ಮಂದಿ ಈ ಪವಿತ್ರ ಗೋಡೆಯನ್ನು ವೀಕ್ಷಿಸಲು ಭೇಟಿ ನೀಡುತ್ತಾರೆ.

ಮುಸ್ಲಿಮರಿಗೆ ಯಾಕೆ?
ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾ ಇಸ್ಲಾಂ ಧರ್ಮದ ಮೂರನೇ ಪವಿತ್ರ ಸ್ಥಳ ಜೆರುಸಲೇಂ ಆಗಿದೆ. ಪ್ರವಾದಿ ಮುಹಮ್ಮದ್ (Prophet Muhammad) ಮೆಕ್ಕಾದಿಂದ (Mecca) ಈ ಜಾಗಕ್ಕೆ ಬಂದು ಸ್ವರ್ಗಕ್ಕೆ ಏರಿದರು ಎಂದು ಮುಸ್ಲಿಮರು (Muslims) ನಂಬುತ್ತಾರೆ. ಇಲ್ಲಿ ಡೋಮ್ ಆಫ್ ರಾಕ್ ಮತ್ತು ಅಲ್-ಅಕ್ಸಾ ಮಸೀದಿಯ ಇದ್ದು 1,300 ವರ್ಷಗಳ ಹಿಂದೆ ಸ್ಥಾಪನೆಯಾಗಿದೆ ಎಂದು ನಂಬಲಾಗುತ್ತದೆ. ಅಲ್ ಅಕ್ಸಾ ಮಸೀದಿಗೆ (Al Aqsa Mosque) ಮುಸ್ಲಿಮರು ವರ್ಷಪೂರ್ತಿ ಭೇಟಿ ನೀಡುತ್ತಾರೆ. ಆದರಲ್ಲೂ ರಂಜಾನ್ ತಿಂಗಳಲ್ಲಿ ಪ್ರತಿ ಶುಕ್ರವಾರ ಲಕ್ಷಾಂತರ ಮುಸ್ಲಿಮರು ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಆಗಮಿಸುತ್ತಾರೆ.

ಕ್ರೈಸ್ತರಿಗೆ ಯಾಕೆ?
ಕ್ರಿಶ್ಚಿಯನ್ (Christian) ಕಥೆಗಳ ಪ್ರಕಾರ ಏಸುವನ್ನು (Jesus) ಗೋಲ್ಗೊಥಾ ಅಥವಾ ಕ್ಯಾಲ್ವರಿ ಬೆಟ್ಟದ ಮೇಲೆ ಶಿಲುಬೆಗೇರಿಸಲಾಯಿತು. ಈ ಕಾರಣಕ್ಕೆ ಯೇಸುವಿನ ಖಾಲಿ ಸಮಾಧಿಗೆ ಭೇಟಿ ನೀಡಲು ಮತ್ತು ಆ ಭೂಮಿಯಲ್ಲಿ ಪ್ರಾರ್ಥನೆ ಮಾಡಲು ಲಕ್ಷಾಂತರ ಕ್ರೈಸ್ತರು ಈ ಜಾಗಕ್ಕೆ ಬರುತ್ತಾರೆ.

1967ರ ಯುದ್ಧದಲ್ಲಿ ಏನಾಯ್ತು?
ಸಿರಿಯಾದ ಬೆಂಬಲದೊಂದಿಗೆ ಪ್ಯಾಲೆಸ್ಟೈನ್‌ ಗೆರಿಲ್ಲಾ ಪಡೆ ಇಸ್ರೇಲ್‌ ಮೇಲೆ ದಾಳಿ ಮಾಡಿತು. ಇದಕ್ಕೆ ಅರಬ್‌ ರಾಷ್ಟ್ರಗಳು ಬೆಂಬಲ ನೀಡಿದವು. ಇದರಿಂದ ಕೆರಳಿದ ಇಸ್ರೇಲ್‌ ಭಾರೀ ಪ್ರತಿದಾಳಿ ನಡೆಸಿತು. 1967ರಲ್ಲಿ 6 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಇಸ್ರೇಲ್ ಪೂರ್ವ ಜೆರುಸಲೇಂ ಹಾಗೂ ವೆಸ್ಟ್ ಬ್ಯಾಂಕ್ ಅನ್ನು ವಶಕ್ಕೆ ಪಡೆದಿತ್ತು. ಈ ಕಾರಣಕ್ಕೆ ಜೆರುಸಲೇಂನ ವಶಕ್ಕೆ ಪಡೆಯಲು ಇಸ್ರೇಲ್ ವಿರುದ್ಧ ಆಗಾಗ ಪ್ಯಾಲೆಸ್ಟೈನ್‌ ಸಂಘರ್ಷ ನಡೆಸುತ್ತಿರುತ್ತದೆ. ಈಗಲೂ ಇದೇ ವಿಚಾರಕ್ಕೆ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಸಮರ ಆರಂಭಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಒಳಗೆ ನುಗ್ಗಿದ ಉಗ್ರರು – ಸಾರ್ವಜನಿಕರ ಮೇಲೆ ಗುಂಡಿನ ಮಳೆ

ಹಮಾಸ್‌ ಉಗ್ರರು ಪವಿತ್ರ ಮಸೀದಿಯಾದ ಅಲ್ ಅಕ್ಸಾ ಮಸೀದಿ ಹೆಸರಿನಲ್ಲಿ ಆಪರೇಷನ್ ಅಲ್-ಅಕ್ಸಾ ಫ್ಲಡ್ (Operation Al Aqsa Flood) ಹೆಸರನ್ನು ಇರಿಸಿದೆ. ಅಂದರೆ ಆಪರೇಷನ್ ಅಲ್-ಅಕ್ಸಾ ನೆರೆ ರೂಪದಲ್ಲಿ ಬಂದು ಇಸ್ರೇಲ್‌ ಅನ್ನು ಕೊಚ್ಚಿಕೊಂಡು ಹೋಗುತ್ತೇವೆ ಎಂದು ಉಗ್ರರು ಘೋಷಿಸಿಕೊಂಡಿದ್ದಾರೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್