Explained | ಮತ್ತೆ ಬಟನ್‌ ಫೀಚರ್‌ನೊಂದಿಗೆ ಬರಲಿವೆ ಕಾರುಗಳು- ಟಚ್‌ಸ್ಕ್ರೀನ್‌ ಬೇಡ ಯಾಕೆ?

3 Min Read

ಹೊಸ ಕಾರುಗಳು ಬಿಡುಗಡೆಯಾದಾಗ ಡ್ಯಾಶ್‌ಬೋರ್ಡ್‌ನಲ್ಲಿರುವ ಟಚ್‌ ಸ್ಕ್ರೀನ್‌ ಯಾವ ರೀತಿ ಇರುತ್ತೆ? ಏನೇನು ಹೊಸ ವಿಶೇಷತೆ ನೀಡಲಾಗಿದೆ ಎನ್ನುವ  ಕುತೂಹಲ ಆಟೋ ಪ್ರೇಮಿಗಳಲ್ಲಿ ಇರುತ್ತದೆ. ಆದರೆ ಇನ್ನು ಮುಂದೆ ಹೊಸ ಕಾರುಗಳು  ಹಳೆಯ ಬಟನ್‌ ಫೀಚರ್‌ ಜೊತೆ  ಬರುವ ಸಾಧ್ಯತೆಯಿದೆ.

ಹೌದು. ಆರಂಭದಲ್ಲಿ ದುಬಾರಿ ಬೆಲೆಯ ಕಾರುಗಳಲ್ಲಿ ಡ್ಯಾಶ್‌ಬೋರ್ಡ್‌ ಉದ್ದಕ್ಕೂ ಟಚ್‌ಸ್ಕ್ರೀನ್‌ ಬರುತ್ತಿತ್ತು. ಆದರೆ ಈಗ ಬಜೆಟ್‌ ಕಾರಿನಲ್ಲೂ ಟಚ್‌ಸ್ಕ್ರೀನ್‌ ಸೌಲಭ್ಯವಿದೆ. ಸುಲಭವಾಗಿ ಆಪರೇಟ್‌ ಮಾಡಲು ಸಾಧ್ಯವಾಗುತ್ತಿದ್ದ ಕಾರಣ ಬಹಳಷ್ಟು ವಿಶೇಷತೆಗಳು ಟಚ್‌ಸ್ಕ್ರೀನ್‌ನೊಂದಿಗೆ ಬರುತ್ತಿದ್ದವು. ಒಟ್ಟಿನಲ್ಲಿ ಈಗ ಡ್ಯಾಶ್‌ಬೋರ್ಡ್‌ ಒಂದು ಮಿನಿ ಕಂಪ್ಯೂಟರ್‌ ರೀತಿ ಕಾರ್ಯನಿರ್ವಹಿಸುತ್ತಿದೆ. ಆದರೆ ಈಗ ಈ ಟಚ್‌ಸ್ಕ್ರೀನ್‌ ಚಾಲಕರಿಗೆ ಅಪಾಯಕಾರಿ ಎಂಬ ಅಧ್ಯಯನಗಳು ಪ್ರಕಟವಾದ ಬೆನ್ನಲ್ಲೇ ಕಾರು ಕಂಪನಿಗಳು ಹಳೆ ಬಟನ್‌ ಫೀಚರ್‌ ನೀಡಲು ಮುಂದಾಗಿವೆ.

ಯಾಕೆ ಈ ಬದಲಾವಣೆ?
ಈ ಮೊದಲು ಬಟನ್‌ ಇದ್ದಾಗ ಹೆಚ್ಚಿನ ಕಮಾಂಡ್‌ಗಳನ್ನು ಸ್ಟೇರಿಂಗ್‌ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿದ್ದ ಬಟನ್‌ ಮೂಲಕ ಸುಲಭವಾಗಿ ನೀಡಬಹುದಾಗಿತ್ತು. ಆದರೆ ಟಚ್‌ಸ್ಕ್ರೀನ್‌ನಲ್ಲಿ ಈ ರೀತಿ ಸುಲಭವಾಗಿ ಕಮಾಂಡ್‌ ನೀಡಲು ಸಾಧ್ಯವಿಲ್ಲ. ಒಂದು ಕೈಯಲ್ಲಿ ಸ್ಟೇರಿಂಗ್‌ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಬಟನ್‌ ಒತ್ತಬೇಕಾಗುತ್ತದೆ. ಟಚ್‌ ಸ್ಕ್ರೀನ್‌ನಿಂದ ಪ್ರಕ್ರಿಯೆ ನಿಧಾನವಾಗುತ್ತಿದೆ. ಇದರಿಂದಾಗಿ ಮುಂದೆ ರಸ್ತೆಯನ್ನು ನೋಡಬೇಕಾದ ಚಾಲಕನ ಗಮನ ಡ್ಯಾಶ್‌ಬೋರ್ಡ್‌ ಟಚ್‌ಸ್ಕ್ರೀನ್‌ ಕಡೆ ಹೋದಾಗ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ಈ ಕಾರಣಕ್ಕೆ ಕಂಪನಿಗಳು ಮರಳಿ ಹಳೆಯ ಬಟನ್‌ ವ್ಯವಸ್ಥೆಗೆ ಹೋಗಲು ಚಿಂತನೆ ನಡೆಸಿವೆ.

ಯಾವ ದೇಶಗಳಲ್ಲಿ ಬದಲಾವಣೆ?
ಯುರೋಪ್‌, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ದೇಶಗಳು ಈಗಾಗಲೇ ಕಾರು ತಯಾರಕಾ ಕಂಪನಿಗಳಿಗೆ ಈ ಹಿಂದೆ ಬರುತ್ತಿದ್ದಂತೆ ಬಟನ್‌ ನೀಡಬೇಕೆಂದು ಸೂಚಿಸಿವೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಸ್ವತಂತ್ರ ಕಾರು ಸುರಕ್ಷತಾ ಮೌಲ್ಯಮಾಪನ ಕಾರ್ಯಕ್ರಮವಾದ ANCAP ಸೇಫ್ಟಿ, 2026 ರಿಂದ ಹೆಡ್‌ಲೈಟ್‌ಗಳು ಮತ್ತು ವಿಂಡ್‌ಸ್ಕ್ರೀನ್ ವೈಪರ್‌ಗಳು ಸೇರಿದಂತೆ ಪ್ರಮುಖ ಚಾಲಕ ನಿಯಂತ್ರಣಗಳಿಗೆ ಬಟನ್‌ ಫೀಚರ್‌ ನೀಡಬೇಕೆಂದು ಕಂಪನಿಗಳಿಗೆ ಸೂಚಿಸಿವೆ. ಅಷ್ಟೇ ಅಲ್ಲದೇ ಮತ್ತೆ ಬಟನ್‌ ಪರಿಚಯಿಸುವ ಕಾರುಗಳಿಗೆ ಹೆಚ್ಚಿನ ಸುರಕ್ಷತಾ ರೇಟಿಂಗ್‌ ನೀಡುವುದಾಗಿ ಹೇಳಿವೆ.  ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ ಕಮಾಲ್‌ – ಮಾರಾಟವಾದ ಕಾರುಗಳ ಪೈಕಿ ಅರ್ಧದಷ್ಟು ಭಾರತದ್ದು!

ಸಮೀಕ್ಷೆಗಳು ಹೇಳೋದು ಏನು?

ಅಮೆರಿಕ JD. Power’s 2025 Initial Quality Study ಸುಮಾರು 92 ಸಾವಿರ ಜನರನ್ನು ಸಮೀಕ್ಷೆ ಮಾಡಿ ಟಚ್‌ಸ್ಕ್ರೀನ್‌ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಿತ್ತು. ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಪೈಕಿ 42% ಜನರು ಕಾರು ಖರೀದಿಸಿದ 100 ದಿನದಲ್ಲಿ ಸಮಸ್ಯೆಯಾಗಿತ್ತು ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಟಚ್‌ಸ್ಕ್ರೀನ್‌ನ್‌ಗಿಂತಲೂ ಈ ಹಿಂದೆ ಬರುತ್ತಿದ್ದ ಬಟನ್‌ ಕಂಟ್ರೋಲ್‌ ಚೆನ್ನಾಗಿತ್ತು ಎಂದಿದ್ದಾರೆ.

ಆಡಿಯೋ ಪರಿಹಾರವೇ?
ಟಚ್‌ಸ್ಕ್ರೀನ್‌ನಿಂದ ಸಮಸ್ಯೆಯಾಗುತ್ತದೆ ಹೌದು ಇದಕ್ಕೆ ಧ್ವನಿಯಿಂದ ಕಮಾಂಡ್‌ ನೀಡುವ ಫೀಚರ್‌ ಉತ್ತಮವೇ ಎಂಬುದರ ಬಗ್ಗೆಯೂ ಅಧ್ಯಯನ ನಡೆಸಲಾಗಿದೆ. ಈ ವೇಳೆ ಮೊಬೈಲಿಗೆ ನೀಡುವಂತೆ ಆಡಿಯೋ ಕಮಾಂಡ್‌ ಇದ್ದರೆ ಚಾಲಕನ ಗಮನ ಮತ್ತೆ ಟಚ್‌ಸ್ಕ್ರೀನ್‌ ಕಡೆಗೆ ತಿರುಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಮಸ್ಯೆ ಜಾಸ್ತಿ:
ಟಚ್‌ ಸ್ಕ್ರೀನ್‌ ಅನ್ನು ಮಕ್ಕಳು, ದೊಡ್ಡವರು ಎಲ್ಲರೂ ಒತ್ತಬಹುದು. ಇದರಿಂದಾಗಿ ಜಾಸ್ತಿ ಒತ್ತಡ ಹಾಕಿದರೆ ಟಚ್‌ ಸ್ಕ್ರೀನ್‌ ಹಾಳಾಗುವ ಸಾಧ್ಯತೆಯಿದೆ. ಮುಖ್ಯವಾಗಿ ಅಪಘಾತದ ಸಂದರ್ಭದಲ್ಲಿ ಟಚ್‌ಸ್ಕ್ರೀನ್‌ಗೆ ಪೆಟ್ಟಾದರೆ ಸಂಪೂರ್ಣ ಟಚ್‌ಸ್ಕ್ರೀನ್‌ಗಳನ್ನೇ ಬದಲಾಯಿಸಬೇಕಾಕುತ್ತದೆ. ಮತ್ತೆ ಇದು ದುಬಾರಿಯೂ ಹೌದು. ಈ ಕಾರಣಕ್ಕೆ 2026 ರಲ್ಲಿ ಬಿಡುಗಡೆಯಾಗುವ ಕಾರುಗಳು ಬಟನ್‌ನೊಂದಿಗೆ ಬರಲಿದೆ.  ಇದನ್ನೂ ಓದಿ: 2026ರ ಅಂತ್ಯಕ್ಕೆ ದೇಶಾದ್ಯಂತ ಉಪಗ್ರಹ ಆಧಾರಿತ ಟೋಲ್‌: ಗಡ್ಕರಿ ಘೋಷಣೆ

 

View this post on Instagram

 

A post shared by Volkswagen (@volkswagen)

ಇವಿ ಕಾರುಗಳಿಂದ ಕ್ರಾಂತಿ:
ಕಾರುಗಳಲ್ಲಿ ಟಚ್‌ ಸ್ಕ್ರೀನ್‌ ಈ ಹಿಂದಿನಿಂದೂ ಇತ್ತು. ಆದರೆ ಯಾವಾಗ ಇವಿ ಕಾರುಗಳು ಮಾರುಕಟ್ಟೆಗೆ ಬರತೊಡಗಿದವೋ ಆಗ ಟಚ್‌ಸ್ಕ್ರೀನ್‌ ಕ್ರಾಂತಿಯೇ ಆರಂಭವಾಯಿತು. ಅದರಲ್ಲೂ ಚೀನಿ ಕಂಪನಿಗಳು ದೊಡ್ಡ ಟಚ್‌ಸ್ಕ್ರೀನ್‌ ನೀಡಿ ಡ್ಯಾಶ್‌ಬೋರ್ಡ್‌ ಅನ್ನೇ ಮಿನಿ ಕಂಪ್ಯೂಟರ್‌ನಂತೆ ಬದಲಾಯಿಸಿದ್ದವು. ಕಡಿಮೆ ಬೆಲೆಯಲ್ಲಿ ಸಿಗವ ಚೀನಿ ಕಾರುಗಳಲ್ಲಿರುವ ಈ ವಿಶೇಷತೆ ನಂತರ ಉಳಿದ ಕಾರು ಕಂಪನಿಗಳು ಈ ಫೀಚರ್‌ ಅನ್ನು ಸೇರಿಸಲು ಆರಂಭಿಸಿದವು.

ಜರ್ಮನಿಯ ಪ್ರಸಿದ್ಧ ಕಾರು ತಯಾರಿಕಾ ಕಂಪನಿ ವೋಕ್ಸ್‌ವ್ಯಾಗನ್ ತನ್ನ ಮುಂದಿನ ID Polo ಕಾರು ಬಟ್‌ನೊಂದಿಗೆ ಬರಲಿದೆ ಎಂದು ಈಗಾಗಲೇ ಪ್ರಕಟಿಸಿದೆ. ಜನರ ಪ್ರತಿಕ್ರಿಯೆ ಆಧಾರಿಸಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದೆ.

Share This Article