ಸರಯೂ ನದಿ ತಟದಲ್ಲಿ ವಿಶೇಷ ದೈವಿಕ ಅನುಭವ ಹಂಚಿಕೊಂಡ ಪಿ.ಟಿ ಉಷಾ

Public TV
1 Min Read

ಅಯೋಧ್ಯೆ: ಸರಯೂ ನದಿ ತಟದಲ್ಲಿ ವಿಶೇಷವಾದ ದೈವಿಕ ಶಕ್ತಿಯ ಅನುಭವವನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ (ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ಹಂಚಿಕೊಂಡಿದ್ದಾರೆ.

ಅಯೋಧ್ಯೆಯ ರಾಮಮಂದಿರಕ್ಕೆ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಗಮಿಸಿರುವ ಅವರು, ಸರಯೂ ನದಿ ತೀರಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಸರಯೂ ನದಿಯ ದಡದಲ್ಲಿ ವಿಶೇಷವಾದ ಶಾಂತಿಯನ್ನು ಅನುಭವಿಸಿದೆ. ದೈವಿಕ ಶಕ್ತಿಯ ಅನುಭವವಾಗಿದೆ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಹೊತ್ತಲ್ಲೇ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಮತ್ತೊಂದು ರಾಮನ ಮೂರ್ತಿ ಪ್ರತಿಷ್ಠಾಪನೆ

&

nbsp;

ಸರಯೂ ತಟದಲ್ಲಿ ದೈವಿಕ ಶಾಂತಿಯನ್ನು ಅನುಭವಿಸಿದೆ. ನದಿಯು ಅಯೋಧ್ಯೆ ಮತ್ತು ಭಗವಾನ್ ರಾಮನ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಇಂದಿಗೂ ತನ್ನ ದೈವಿಕ ಶಕ್ತಿಯಿಂದ ಜನರನ್ನು ಆಶೀರ್ವದಿಸುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಸರಯೂ ನದಿಯ ದಡದಲ್ಲಿ ನೆರೆದಿದ್ದ ಸ್ಥಳೀಯರು ಮತ್ತು ಭಕ್ತರೊಂದಿಗೆ ಅವರು ಸಂವಾದ ನಡೆಸಿದ್ದಾರೆ ಈ ವೀಡಿಯೋವನ್ನು ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ರಾಮನ ಪ್ರಾಣಪ್ರತಿಷ್ಠಾಪನೆ ಇನ್ನೇನು ಕೆಲವೇ ಕ್ಷಣದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಕ್ರೀಡಾ ದಿಗ್ಗಜರಾದ ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಮಿಥಾಲಿ ರಾಜ್, ಹರ್ಮನ್‍ಪ್ರೀತ್ ಕೌರ್ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಆಹ್ವಾನಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮೋತ್ಸವ-LIVE Updates | Ayodhya Ram Mandir Updates

Share This Article