ಹುಬ್ಬಳ್ಳಿ | ಅಮೆರಿಕನ್ ಡೈಮಂಡ್‌ನಿಂದ ಸಿದ್ಧವಾದ ದುಬಾರಿ ಗಣಪ

Public TV
1 Min Read

– ಅಮೆರಿಕನ್ ಡೈಮಂಡ್‌ಗೆ 6 ಲಕ್ಷ ವೆಚ್ಚ!

ಹುಬ್ಬಳ್ಳಿ: ನಾಡಿನೆಲ್ಲೆಡೆ ಗಣೇಶ ಹಬ್ಬದ (Ganesha Chathurti) ಸಂಭ್ರಮ ಜೋರಾಗಿದೆ. ವಿವಿಧ ರೂಪದಲ್ಲಿ ಗಣೇಶ ಮತ್ತೆ ಬಂದಿದ್ದಾನೆ. ಹುಬ್ಬಳ್ಳಿಯಲ್ಲಿ (Hubballi) ಒಂದು ಹೆಜ್ಜೆ ಮುಂದೆ ಹೋಗಿ, ಡೈಮಂಡ್‌ನಲ್ಲಿ ಗಣೇಶ ಮೂರ್ತಿ ಸಿದ್ಧವಾಗಿದ್ದು, ಈ ಗಣಪ ರಾಮನಗರದತ್ತ ಹೆಜ್ಜೆ ಹಾಕಿದ್ದಾನೆ.

ಹುಬ್ಬಳ್ಳಿ ಕಲಾವಿದ ಮಹೇಶ್ ಮುರಗೋಡ 6 ಲಕ್ಷ ವೆಚ್ಚದಲ್ಲಿ ಅಮೆರಿಕನ್ ವಿವಿಧ ಬಣ್ಣದ ಡೈಮಂಡ್ ಬಳಸಿ ಈ ಗಣೇಶ ಮೂರ್ತಿಯನ್ನು ನಿರ್ಮಿಸಿದ್ದಾರೆ. ಸುಮಾರು 50 ಕೆಜಿ ತೂಕವನ್ನು ಈ ಮೂರ್ತಿ ಹೊಂದಿದೆ. ರಾಮನಗರದ (Ramanagara) ಐಜೂರ ಮಲ್ಲೇಶ್ವರ ಬಡಾವಣೆಯ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿಯಿಂದ ಈ‌ ಬಾರಿ ಡೈಮಂಡ್ ಗಣಪನ ಪ್ರತಿಸ್ಥಾಪನೆ ನಡೆಯಲಿದೆ. ಇದನ್ನೂ ಓದಿ: ಮಕ್ಕಳಿಗೆ ಗಣೇಶ ಅಂದ್ರೆ ಯಾಕಿಷ್ಟ ಗೊತ್ತಾ…? ಗಣಪನಿಗೂ ಪುಟಾಣಿಗಳಿಗೂ ಇದೆ ತುಂಟ ಸಂಬಂಧ!

ಮಹೇಶ್ ಕುಟುಂಬ ವಜ್ರದಲ್ಲಿ ಗಣೇಶ ಮೂರ್ತಿ ತಯಾರಿಸುವ ಕಲೆ ಕರಗತ ಮಾಡಿಕೊಂಡಿದೆ. ಸುಮಾರು 15 ವರ್ಷಗಳಿಂದ ಇಂತಹ ವಿಶೇಷ ಮೂರ್ತಿಯನ್ನು ನಿರ್ಮಿಸಿ, ಭಕ್ತರಿಗೆ ನೀಡುತ್ತಿದೆ. ಇನ್ನೂ ಈ ಬಾರಿ ರಾಮನಗರದಲ್ಲಿ ಆನೆ ಅಂಬಾರಿ ಮೂಲಕ ಗಣೇಶ ಮೆರವಣಿಗೆ ಮಾಡಲು ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿ ನಿರ್ಧಾರ ಮಾಡಿದೆ. ಇದನ್ನೂ ಓದಿ: ಶ್ರೀಮಂತ ಗಣಪನಿಗೆ ಈ ಬಾರಿ 474 ಕೋಟಿ ರೂ. ವಿಮೆ – ಏನಿದ್ರ ವಿಶೇಷತೆ ಅಂತೀರಾ?

Share This Article