Maharashtra Exit Polls: ಮಹಾರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಮುನ್ನಡೆ

Public TV
1 Min Read

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮತದಾನ ಅಂತ್ಯಗೊಂಡಿದ್ದು, ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಮಹಾರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, ಮತ್ತೆ ಅಧಿಕಾರದ ಗದ್ದುಗೆ ಏರುವುದು ನಿಚ್ಚಳವಾಗಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

ಮ್ಯಾಟ್ರಿಜ್‌
ಮಹಾಯುತಿ 150-170, ಎಂವಿಎ 110-130 (ಮಹಾರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರಲಿದೆ ಎಂದು ಮ್ಯಾಟ್ರಿಜ್‌ ಸಮೀಕ್ಷೆ ತಿಳಿಸಿದೆ)

ಪೀಪಲ್ಸ್‌ ಪಲ್ಸ್‌
ಮಹಾಯುತಿ 175-195, ಎಂವಿಎ 85-112, ಇತರೆ 7-12

ಚಾಣಕ್ಯ ಸ್ಟ್ರ್ಯಾಟಜೀಸ್‌
ಬಿಜೆಪಿ+ 150-170, ಕಾಂಗ್ರೆಸ್‌+ 110-130, ಇತರೆ 8-10

ಪಿ-ಮಾರ್ಕ್
ಮಹಾಯುತಿ 137-157, ಎಂವಿಎ 126-146

ಲೋಕಶಾಹಿ ಮರಾಠಿ-ರುದ್ರ
ಬಿಜೆಪಿ+ 128-142, ಎಂವಿಎ 125-140

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಬಹುಮತಕ್ಕೆ 145 ಸ್ಥಾನಗಳು ಬೇಕು. 2019 ರ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗೆದ್ದಿತ್ತು. ಅವಿಭಜಿತ ಶಿವಸೇನೆ 62, ಕಾಂಗ್ರೆಸ್‌ 39 ಮತ್ತು ಎನ್‌ಸಿಪಿ 50 ಸ್ಥಾನಗಳನ್ನು ಗೆದ್ದಿದ್ದವು. ಆಗ ಶಿವಸೇನೆ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆ ಸೇರಿಕೊಂಡು ಸರ್ಕಾರ ರಚಿಸಿತ್ತು. ಬಳಿಕ ಶಿವಸೇನೆ ವಿಭಜನೆಗೊಂಡು (ಉದ್ಧವ್‌ ಠಾಕ್ರೆ ಬಣ ಮತ್ತು ಏಕನಾಥ್‌ ಶಿಂಧೆ ಬಣ) ಶಿಂಧೆ ಬಣ ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸಿತ್ತು.

Share This Article