ರಾಜೇಶ್ ಅವರ ಕೊನೆಯ ಸಿನಿಮಾದ ಎಕ್ಸ್‌ಕ್ಲೂಸಿವ್‌ ಫೋಟೋಸ್, ಮಾಹಿತಿ

Public TV
2 Min Read

ನ್ನಡದ ಹಿರಿಯ ಚೇತನ, ಕಲಾತಪಸ್ವಿ ರಾಜೇಶ್ ಅವರ ನಿಧನ ಕನ್ನಡ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟ. 88ರ ವಯಸ್ಸಿನಲ್ಲೂ ಅವರ ನಟನಾ ಉತ್ಸಾಹ ತಗ್ಗಿರಲಿಲ್ಲ. ಕಳೆದ ವರ್ಷವಷ್ಟೇ ಅವರು ಶ್ರೀನಿ ನಿರ್ದೇಶನ ಮಾಡಿ ನಟಿಸಿರುವ ಓಲ್ಡ್ ಮಾಂಕ್ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈ ಕುರಿತು ನಿರ್ದೇಶಕ ಶ್ರೀನಿ ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿ, ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ರವೀಂದ್ರ ಕಲಾಕ್ಷೇತ್ರದಲ್ಲಿ ನಟ ರಾಜೇಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ

ನೆಗಟಿವ್ ಪಾತ್ರ ಮಾಡಲ್ಲ
ನಿರ್ದೇಶಕ ಶ್ರೀನಿ ಅವರು ರಾಜೇಶ್ ಅವರನ್ನು ಭೇಟಿ ಮಾಡಲು ಮನೆಗೆ ಹೋದಾಗ, ಮೊದಲು ರಾಜೇಶ್ ಕೇಳಿದ್ದು ತಮ್ಮದು ಯಾವ ರೀತಿಯ ಪಾತ್ರ? ಎಂದು. ಕಥೆ ಹೇಳಿದ ಮೇಲೆ, ನಾನು ಯಾವುದೇ ಕಾರಣಕ್ಕೂ ನೆಗೆಟಿವ್ ರೀತಿಯ ಪಾತ್ರ ಮಾಡಲಾರೆ ಎಂದು ಬಿಟ್ಟಿದ್ದರಂತೆ. ಈ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುವಂತಹ ಕ್ಯಾರೆಕ್ಟರ್ ನಲ್ಲಿ ನಾನು ನಟಿಸಲಾರೆ ಎಂದಿದ್ದರು ರಾಜೇಶ್. ಅಷ್ಟರ ಮಟ್ಟಿಗೆ ಅವರು ಪಾತ್ರದ ಬಗ್ಗೆ ಎಚ್ಚರಿಕೆ ತಗೆದುಕೊಂಡಿದ್ದರು.  ಇದನ್ನೂ ಓದಿ : ಕಲಾ ತಪಸ್ವಿ ರಾಜೇಶ್‌ ವಿಧಿವಶ

ನೆನಪಿನ ಶಕ್ತಿ ಅದ್ಭುತ
ಈ ಇಳಿ ವಯಸ್ಸಿನಲ್ಲೂ ರಾಜೇಶ್ ಅವರು ಅದ್ಭುತ ನೆನಪಿನ ಶಕ್ತಿಯನ್ನು ಹೊಂದಿದ್ದರು ಎಂದು ಶ್ರೀನಿ ನೆನಪಿಸಿಕೊಳ್ಳುತ್ತಾರೆ. “ರಾಜೇಶ್ ಅವರ ಪಾತ್ರ ಅತಿಥಿಯಾಗಿದ್ದರೂ, ದೊಡ್ಡ ದೊಡ್ಡ ಡೈಲಾಗ್ ಗಳನ್ನು ಬರೆದಿದ್ದೆ. ಅವರದ್ದು ಅದ್ಭುತ ಮೆಮರಿ ಪವರ್. ಉದ್ದನೆಯ ಡೈಲಾಗ್ ಹೇಳಿದ ತಕ್ಷಣವೇ ಪಟ ಪಟ ಅಂತ ಹೇಳಿ ಬಿಡುತ್ತಿದ್ದರು. ಅದೆಷ್ಟೇ ದೊಡ್ಡ ಸಂಭಾಷಣೆ ಇದ್ದರೂ ಕ್ಷಣ ಮಾತ್ರದಲ್ಲೇ ತಯಾರಿ ಆಗುತ್ತಿದ್ದರು” ಎಂದರು ಶ್ರೀನಿ. ಇದನ್ನೂ ಓದಿ: ಬೈ ಟು ಲವ್ ಹೀರೋ ಧನ್ವೀರ್ ಮೇಲೆ ದೂರು ದಾಖಲಿಸಿದ ಅಭಿಮಾನಿ

ಹೀಗಿಯೇ ಗೆಟಪ್ ಇರಬೇಕು ಅಂತ ತಾಕೀತು
ರಾಜೇಶ್ ಅವರಿಗೆ ನಿರ್ದೇಶಕ ಶ್ರೀನಿ ಓಲ್ಡ್ ಮಾಂಕ್ ಸಿನಿಮಾದ ಕಥೆ ಹೇಳಿದ ಮೇಲೆ, ತಕ್ಷಣವೇ ಪಾತ್ರದಲ್ಲಿ ತಲ್ಲೀಣರಾದರಂತೆ ಹಿರಿಯ ಜೀವ. ಪಾತ್ರಕ್ಕೆ ಇಂಥದ್ದೇ ಗೆಟಪ್ ಇರಬೇಕು, ಲುಕ್ಸ್ ಕೂಡ ಹೀಗಿಯೇ ಆಗಿರಬೇಕು. ಅದಕ್ಕೆ ಕಾಸ್ಟ್ಯೂಮ್ ಈ ರೀತಿಯಲ್ಲಿ ಹೊಂದಾಣಿಕೆ ಆಗಬೇಕು ಎಂದು ತಮ್ಮ ಪಾತ್ರದ ಬಗ್ಗೆ ತಾವೇ ಚಹರಿ ಹೇಳುವ ಮೂಲಕ ಸ್ವತಃ ನಿರ್ದೇಶಕರನ್ನೇ ಅಚ್ಚರಿಗೆ ದೂಡಿದ್ದರಂತೆ ರಾಜೇಶ್.

Share This Article
Leave a Comment

Leave a Reply

Your email address will not be published. Required fields are marked *