ರಾಜ್ಯದಲ್ಲಿ ಮದ್ಯದಂಗಡಿಗಳಿಗೆ ಹೊಸ ಲೈಸೆನ್ಸ್ ಇಲ್ಲ: ಪಬ್ಲಿಕ್‌ ಟಿವಿಗೆ ಕೊಟ್ಟ ಮಾತು ಉಳಿಸಿಕೊಂಡ ಸಿಎಂ

Public TV
2 Min Read

ಬೆಂಗಳೂರು: ಮದ್ಯದಂಗಡಿಗಳಿಗೆ ಹೊಸದಾಗಿ ಪರವಾನಗಿ (Nnew Liquor Shop) ನೀಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಘೋಷಣೆ ಮಾಡಿದ್ದಾರೆ.

ಬೆಳಕು (Belaku) 200ನೇ ಸಂಚಿಕೆಯ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಪಬ್ಲಿಕ್ ಟಿವಿ (PUBLiC TV) ಮುಖ್ಯಸ್ಥ ಹೆಚ್.ಆರ್.ರಂಗನಾಥ್ (HR Ranganath) ಅವರು ಯಾವುದೇ ಕಾರಣಕ್ಕೂ ಮದ್ಯದಂಗಡಿ ಹೊಸ ಲೈಸೆನ್ಸ್ ನೀಡಬೇಡಿ ಎಂದು ಮನವಿ ಮಾಡಿದ್ದರು.

ಈ ಮನವಿಗೆ ಸ್ಪಂದಿಸಿದ ಅವರು, ಮದ್ಯದಂಗಡಿ ಹೊಸ ಪರವಾನಗಿ ನೀಡುವುದಕ್ಕೆ ಮಹಿಳೆಯರ ವಿರೋಧ ಇದೆ. ಹಣಕಾಸಿನ ಕೊರತೆ ಇದ್ದರೂ ಮದ್ಯದಂಗಡಿ ಹೊಸ ಲೈಸೆನ್ಸ್‌ ನೀಡಲು ನಾನು ಅನುಮತಿ ನೀಡುವುದಿಲ್ಲ ಎಂದು ವಾಗ್ದಾನ ಮಾಡಿದರು.  ಇದನ್ನೂ ಓದಿ: ವೀಲಿಂಗ್‌ ಮಾಡಿದ ಬೈಕ್‌ ಸುಟ್ಟು ಹಾಕಿ, ಯೂಟ್ಯೂಬ್‌ ಚಾನೆಲನ್ನು ಕಿತ್ತಾಕಿ: ಹೈಕೋರ್ಟ್‌ ಚಾಟಿ

 

ಅಬಕಾರಿ ಇಲಾಖೆಯ ಪ್ರಸ್ತಾಪ ಏನು?
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನಿಗದಿಪಡಿಸಿರುವ ಗುರಿಯನ್ನು ಮೀರಿ ವರಮಾನ ಸಂಗ್ರಹಕ್ಕೆ ಅಬಕಾರಿ ಇಲಾಖೆ (Excise Department) ಯೋಜನೆ ರೂಪಿಸಿದ್ದು, ಮದ್ಯದಂಗಡಿಗಳೇ ಇಲ್ಲದ 600ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕನಿಷ್ಠ ತಲಾ ಒಂದು ಮದ್ಯದಂಗಡಿಗೆ ಪರವಾನಗಿ ನೀಡಲು ಪ್ರಸ್ತಾಪವನ್ನು ಸಿದ್ಧಪಡಿಸಿದೆ.

ಸಣ್ಣ ಗ್ರಾಮ ಪಂಚಾಯಿತಿಗಳು, ನಗರಗಳಲ್ಲಿನ ಸೂಪರ್ ಮಾರುಕಟ್ಟೆಗಳಲ್ಲಿ ಹೊಸ ಪರವಾನಗಿ ನೀಡಲು ಚಿಂತನೆ ನಡೆದಿದೆ. ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು ಹಾದು ಹೋಗಿರುವ ಪ್ರದೇಶಗಳು ಹಾ 5,000ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸ್ಟಾರ್‌ ಹೋಟೆಲ್, ಹೋಟೆಲ್ ಮತ್ತು ಬೋರ್ಡಿಂಗ್‌ಗೆ ಮದ್ಯದಂಗಡಿ ಪರವಾನಗಿ ನೀಡುವುದಕ್ಕೆ ನಿರ್ಬಂಧವಿದೆ. ಅದನ್ನು ತೆಗೆದು ಈ ಎಲ್ಲಾ ಪ್ರದೇಶಗಳಲ್ಲೂ ಮದ್ಯದಂಗಡಿ ಪರವಾನಗಿ ನೀಡುವ ಪ್ರಸ್ತಾವ ಅಬಕಾರಿ ಇಲಾಖೆಯ ಮುಂದಿದೆ.

ಹೊಸ ಪ್ರಸ್ತಾಪಗಳ ಸಂಬಂಧ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಇಲಾಖೆಯ ಅಧಿಕಾರಿಗಳ ಜತೆ ಪ್ರಾಥವಿಕ ಹಂತದ ಸಭೆ ನಡೆಸಿದ್ದರು. ಸೆಪ್ಟೆಂಬರ್ 14ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿತ್ತು.

 

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್