RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ

Public TV
2 Min Read

 ಲವ್‌ಬರ್ಡ್ಸ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿ ಬಿ’ಟೌನ್‌ನಲ್ಲಿ ಸಖತ್ ಫೇಮಸ್. ಈ ಜೋಡಿಯ ಮದುವೆ ಯಾವತ್ತು ನಡೆಯತ್ತೆ? ದಿನಾಂಕ ಅನೌನ್ಸ್ ಆಗುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಏಪ್ರಿಲ್‌ನಲ್ಲಿ ಜೋಡಿಯು ಹಸೆಮಣೆ ಏರಲಿದ್ದು, ಆರ್‌ಕೆ ಹೌಸ್‌ನಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆರ್‌ಕೆ ಹೌಸ್‌ನಲ್ಲಿಯೇ ಮದುವೆ ಏಕೆ ಎನ್ನುವುದಕ್ಕೆ ಅದರ ಹಿಂದೆ ಇಂಟ್ರಸ್ಟಿಂಗ್ ಕಹಾನಿ ಇದೆ.


ಅಂತಿಮವಾಗಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೆಲವೇ ದಿನಗಳಲ್ಲಿ ಸತಿಪತಿಗಳಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಜೋಡಿ ಏಪ್ರಿಲ್‌ನಲ್ಲಿ ತಮ್ಮ ಆಪ್ತರು ಮತ್ತು ಪ್ರೀತಿಪಾತ್ರರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಾಲಿವುಡ್‌ನಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್‌ಗಳು ಟ್ರೆಂಡ್ ಆಗಿದ್ದು, ಆಲಿಯಾ – ರಣಬೀರ್ ಯಾವ ರೀತಿ ಜಾಗ ಸೆಲೆಕ್ಟ್ ಮಾಡುತ್ತಾರೆ ಎಂಬುದು ಎಲ್ಲಕಡೆ ಚರ್ಚೆಯಾಗುತ್ತಿತ್ತು. ಇದನ್ನೂ ಓದಿ: ಸಿನಿಮಾರಂಗ ಬಿಟ್ಟು ಕೃಷಿಯತ್ತ ಮುಖ ಮಾಡಿದ್ರಾ ಸ್ಟಾರ್ ನಟಿ ಸಾಯಿ ಪಲ್ಲವಿ?

ಆರ್‌ಕೆ ಹೌಸ್ ಇತಿಹಾಸವೇನು?
ರಣಬೀರ್ ಮತ್ತು ಆಲಿಯಾ ಕೂಡ ನಗರದ ಪಂಚತಾರಾ ಹೋಟೆಲ್ನಲ್ಲಿ ಸೆಲೆಬ್ರೇಷನ್‌ಗೆ ಸಿದ್ಧವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ನಡುವೆ ಕಪೂರ್ ಅವರ ಪೂರ್ವಜರ ಮನೆಯಾದ ಆರ್‌ಕೆ ಹೌಸ್‌ನಲ್ಲಿ ಈ ತಾರ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. ರಣಬೀರ್ ಅವರೇ ಆ ಸ್ಥಳವನ್ನು ಅಂತಿಮಗೊಳಿಸಿದ್ದಾರೆ.

ರಣಬೀರ್ ಕಪೂರ್ ಹೆತ್ತವರಾದ ರಿಷಿ ಕಪೂರ್ ಮತ್ತು ನೀತು ಕಪೂರ್ ಅವರು ಜನವರಿ 20, 1980 ರಂದು ಆರ್ಕೆ ಹೌಸ್‌ನಲ್ಲೇ ವಿವಾಹವಾಗಿದ್ದರು. ಆದ್ದರಿಂದ, ರಣಬೀರ್ ಕೂಡ ಚೆಂಬೂರ್ ಮನೆಯಲ್ಲಿ ತನ್ನ ಹುಡುಗಿಗೆ ತಾಳಿ ಕಟ್ಟಬೇಕು ಎಂದು ಬಯಸಿದ್ದಾರಂತೆ. 450 ಜನರನ್ನು ಮದುವೆಗಾಗಿ ಆಹ್ವಾನಿಸುತ್ತಿದ್ದು, ಆ ಅತಿಥಿಗಳ ಪಟ್ಟಿಯೂ ಸಿದ್ಧವಾಗಿದೆ ಅಂತೆ. ಇದನ್ನೂ ಓದಿ: ಜುಲೈ 28ರಂದು ಗುಮ್ಮನ ಕಥೆ – ಯುಗಾದಿ ದಿನ ಡಬಲ್ ಖುಷಿ ಕೊಟ್ಟ ‘ವಿಕ್ರಾಂತ್ ರೋಣ’ ಟೀಮ್

Alia Bhatt On Confessing Her Love For Ranbir Kapoor On The Stage, Says 'I Don't Need To Defend It'

ಆಪ್ತ ಬಳಗದಿಂದ ಈ ಜೋಡಿ ಏಪ್ರಿಲ್‌ನಲ್ಲಿ ಹಸೆಮಣೆ ಏರುತ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಮದುವೆ ದಿನಾಂಕದ ಬಗ್ಗೆ ಇನ್ನೂ ಸರಿಯಾಗಿ ಯಾವುದೇ ಮಾಹಿತಿಯಿಲ್ಲ. ಆದರೆ ಏಪ್ರಿಲ್ ವಾರಾಂತ್ಯದಲ್ಲಿ ಆಲಿಯಾ ಮತ್ತು ಕಪೂರ್ ಮದುವೆ ಸಿದ್ಧತೆ ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಆಲಿಯಾ ಭಟ್ ಅವರ ಅಜ್ಜ ನರೇಂದ್ರ ನಾಥ್ ರಜ್ದಾನ್ ಅವರ ಆರೋಗ್ಯ ಸಮಸ್ಯೆಯಿಂದ ಈ ಮದುವೆ ಬೇಗ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *