Breaking- ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಎಕ್ಸ್‌ಕ್ಲೂಸಿವ್ ಸೆಲೆಬ್ರಿಟಿಗಳು

Public TV
2 Min Read

ಬಿಗ್ ಬಾಸ್ ಸೀಸನ್ 9 (Bigg Boss Season 9) ಇಂದಿನಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಿನ್ನೆಯಿಂದಲೇ ಕಿಚ್ಚ ಸುದೀಪ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಈಗಾಗಲೇ ಹಲವು ಅಚ್ಚರಿಯ ಸ್ಪರ್ಧೆಗಳು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಅದರಲ್ಲಿ ಹಲವು ಅಚ್ಚರಿಯ ಹೆಸರುಗಳು ಕೇಳಿ ಬಂದಿದ್ದವು. ಆದರೂ, ಅಳೆದು ತೂಗಿ ಕೆಲವರನ್ನು ಆಕೆ ಮಾಡಿಕೊಂಡು ಈಗಾಗಲೇ ಬಿಗ್ ಬಾಸ್ ಮನೆಗೆ ಕಳುಹಿಸಲಾಗಿದೆ.

ಪ್ರಶಾಂತ್ ಸಾಂಬರಗಿ

ಕಳೆದ ಬಾರಿ ಬಿಗ್ ಬಾಸ್ ಮನೆಯಲ್ಲಿ ಇದ್ದ ಪ್ರಖರ ಹೋರಾಟಗಾರ ಪ್ರಶಾಂತ್ ಸಾಂಬರಗಿ (Prashant Sambaragi) ಈ ಬಾರಿಯೂ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಡ್ರಗ್ಸ್ ಕೇಸ್ ನಲ್ಲಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳನ್ನು ಕಟೆಕಟೆಯಲ್ಲಿ ನಿಲ್ಲಿಸಿದ್ದ ಪ್ರಶಾಂತ್, ಒಂದು ರೀತಿಯಲ್ಲಿ ತಮ್ಮದೇ ಆದ ಹೋರಾಟದ ಮೂಲಕ ಬಣ್ಣದ ಜಗತ್ತಿನ ಕರಾಳ ಮುಖವನ್ನು ಬಿಚ್ಚಿಟ್ಟವರು. ಅಲ್ಲದೇ, ಹಿಂದೂಪರ ಸಂಘಟನೆಗಳ ಜೊತೆಯೂ ಗುರುತಿಸಿಕೊಂಡವರು. ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದರೂ, ಮೀಟೂ ಮತ್ತು ಡ್ರಗ್ಸ್ ಕೇಸುಗಳಿಂದಾಗಿ ಹೆಚ್ಚು ಸುದ್ದಿಯಾದವರು. ಇದನ್ನೂ ಓದಿ: `ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ

ಮಯೂರಿ

ನಟಿ ಮಯೂರಿ ಕೂಡ ಈ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಹೆಚ್ಚು ಜನರಿಗೆ ಪರಿಚಯವಾದ ಮಯೂರಿ (Mayuri), ಆ ನಂತರ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರು. ಮದುವೆಯ ನಂತರ ಸಿನಿಮಾ ರಂಗದಿಂದ ದೂರವಿದ್ದಾರೆ. ಪುಟ್ಟ ಮಗುವಿನೊಂದಿಗೆ ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದವರು, ಇದೀಗ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಉತ್ತರ ಕರ್ನಾಟಕದ ಹುಡುಗಿ, ಬೆಳೆದದ್ದು ಬೆಂಗಳೂರಿನಲ್ಲಿ. ತಮ್ಮ ಮುಗುಳು ನಗೆ ಮೂಲಕವೇ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದವರು.

ಅರುಣ್ ಸಾಗರ್

ನಟ, ಕಲಾ ನಿರ್ದೇಶಕ, ರಂಗಭೂಮಿ ಪ್ರತಿಭೆ ಅರುಣ್ ಸಾಗರ್ (Arun Sagar) ಕೂಡ ಈಗಾಗಲೇ ಬಿಗ್ ಬಾಸ್ ಮನೆ ಸೇರಿದ್ದಾರೆ. ಬಿಗ್ ಬಾಸ್ ಸೀಸನ್ 1ರಲ್ಲೂ ಅರುಣ್ ಸಾಗರ್ ದೊಡ್ಮನೆ ಪ್ರವೇಶ ಮಾಡಿದವರು. ಎರಡನೇ ಸ್ಥಾನವನ್ನೂ ಪಡೆದವರು. ಈ ಬಾರಿಯೂ ಅವರಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ. ನಟನಾಗಿ, ಕಲಾ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಅರುಣ್, ತಮ್ಮ ಮಾತುಗಳ ಮೂಲಕವೇ ಮೋಡಿ ಮಾಡಿದವರು. ಕಿಚ್ಚ ಸುದೀಪ್ (Sudeep) ಅವರಿಗೆ ತೀರಾ ಆಪ್ತರು ಕೂಡ. ಸೀಸನ್ 1ರಲ್ಲಿ ಬಿಗ್ ಬಾಸ್ ಪಟ್ಟ ಇವರಿಗೆ ಒಲಿಯುತ್ತದೆ ಎಂದು ಹೇಳಲಾಗಿತ್ತು. ಆದರೆ, ಅದು ಫಲ ಕೊಡಲಿಲ್ಲ. ಈ ಬಾರಿಯಾದರೂ ಗೆದ್ದು ಬರುತ್ತಾರಾ ಕಾದು ನೋಡಬೇಕು.

ದೀಪಿಕಾ ದಾಸ್

ರಾಕಿಂಗ್ ಸ್ಟಾರ್ ಯಶ್ ಅವರ ಚಿಕ್ಕಮ್ಮನ ಮಗಳಾದ ದೀಪಿಕಾ ದಾಸ್ (Deepika Das) ಕೂಡ ಈಗಾಗಲೇ ಬಿಗ್ ಬಾಸ್ ಮನೆ ಸೇರಿಕೊಂಡಿದ್ದಾರೆ. ಸೀಸನ್ 7ರಲ್ಲೂ ದೀಪಿಕಾ ದೊಡ್ಮನೆ ಸೇರಿದ್ದರು. ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದಿರುವ ದೀಪಿಕಾ, ಸಿನಿಮಾ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದರು. ಆದರೆ, ದೊಡ್ಡ ಪರದೇ ಅವರ ಕೈ ಹಿಡಿಯಲಿಲ್ಲ. ಕಿರುತೆರೆ ಅಪ್ಪಿಕೊಂಡಿತು. ಜೀ ವಾಹಿನಿಯಲ್ಲಿ ಪ್ರಸಾರವಾದ ನಾಗಿಣಿ ಸೀರಿಯಲ್ ಇವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಈ ಮನಸೇ, ಡ್ರೀಮ್ ಗರ್ಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ದೀಪಿಕಾ ನಟಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *