ನಟ ದರ್ಶನ್ (Darshan) ಗುರುವಾರ ಕೋರ್ಟ್ ಗೆ ಹಾಜರಾಗಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ (Renukaswamy Murde ಆರೋಪ ಹೊತ್ತಿರುವ ಅವರು ಕೆಳಹಂತದ ನ್ಯಾಯಾಲಯಕ್ಕೆ ಹಾಜರಾಗಿ, ವಿಚಾರಣೆಯನ್ನು ಎದುರಿಸಿದರು. ಕೋರ್ಟ್ ಮುಗೀತಾ ಇದ್ದಂತೆ ಚಿತ್ರೀಕರಣಕ್ಕೆ ಹೊರಟು ನಿಂತಿದ್ದಾರೆ ದರ್ಶನ್.
ಅಂದುಕೊಂಡಂತೆ ಆಗಿದ್ದರೆ ಜುಲೈ 1ರಂದೇ ಅವರು ವಿದೇಶಕ್ಕೆ ಹಾರಬೇಕಿತ್ತು. ಕೋರ್ಟ್ ಕಾರಣದಿಂದಾಗಿ ಪೋಸ್ಟ್ ಪಾನ್ ಮಾಡಿಕೊಂಡಿದ್ದರು. ಈಗ ಕೋರ್ಟ್ ವಿಚಾರಣೆ ಮುಗಿಸಿಕೊಂಡು ಗುರುವಾರ ತಡರಾತ್ರಿ, ಅಂದರೆ ಮಧ್ಯರಾತ್ರಿ 1 ಗಂಟೆಗೆ ಥೈಲ್ಯಾಂಡ್ ವಿಮಾನ ಏರಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ಕುರಿತಂತೆ ಜುಲೈ 10ರಂದು ದರ್ಶನ್ ಮತ್ತು ಗ್ಯಾಂಗ್ ಕೋರ್ಟ್‌ಗೆ ಹಾಜರಾಗಬೇಕಿತ್ತು. ಹಾಗಾಗಿ ಪವಿತ್ರಾ ಗೌಡ ಹೊರತು ಪಡಿಸಿ, ಗುರುವಾರ ಎಲ್ಲರೂ ಕೋರ್ಟಿಗೆ ಹಾಜರಾಗಿದ್ದರು. ಕೋರ್ಟಿಗೆ ಹಾಜರಾದ ನಂತರ ದರ್ಶನ್ ಚಿತ್ರೀಕರಣಕ್ಕಾಗಿ ಥೈಲ್ಯಾಂಡ್‌ಗೆ ಪ್ರಯಾಣ ಬೆಳೆಸಿದ್ದಾರೆ.
ಡೆವಿಲ್ ಸಿನಿಮಾದ ಚಿತ್ರೀಕರಣ, ಥೈಲ್ಯಾಂಡ್ ನಲ್ಲಿ ನಡೆಯಲಿದ್ದು, ಹಾಡು ಮತ್ತು ಒಂದು ಸಾಹಸ ಸನ್ನಿವೇಶವನ್ನು ಆ ದೇಶದಲ್ಲಿ ಸೆರೆ ಹಿಡಿಯಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರಂತೆ. ಅದಕ್ಕಾಗಿ ಸರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಥೈಲ್ಯಾಂಡ್ ಶೂಟಿಂಗ್ ಮುಗೀತಾ ಇದ್ದಂತೆ, ಡೆವಿಲ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಯಲಿದೆಯಂತೆ. ಈಗಾಗಲೇ ಡಬ್ಬಿಂಗ್ ಕೆಲಸವನ್ನೂ ದರ್ಶನ್ ಮುಗಿಸಿದ್ದಾರೆ. ಸಣ್ಣಪುಟ್ಟ ಚಿತ್ರೀಕರಣ ಬಿಟ್ಟರೆ ಉಳಿದಂತ ಸಿನಿಮಾ ರೆಡಿಯಾಗಿದೆ ಅನ್ನೋದು ಚಿತ್ರತಂಡದಿಂದ ಬಂದಿರುವ ಮಾಹಿತಿ.