EXCLUSIVE: ಬಿಬಿಎಂಪಿ ಕಸ ದಂಧೆ ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆ

Public TV
2 Min Read

ಬೆಂಗಳೂರು: ಬಿಬಿಎಂಪಿ ವತಿಯು ಕಸದ ಮೂಲಕ ಕಾಸು ಸಂಗ್ರಹಣೆ ಮಾಡುತ್ತಿರುವ ವಿಚಾರ ಪಬ್ಲಿಕ್ ಟಿವಿ ಕ್ಯಾಮೆರಾ ಮುಂದೆ ಬೆಳಕಿಗೆ ಬಂದಿದೆ.

ಬಿಬಿಎಂಪಿ ಅಪಾರ್ಟ್ ಮೆಂಟ್ ಕಸ ತೆಗೆದುಕೊಂಡು ಹೋಗಲು ಒಬ್ಬೊಬ್ಬರಿಗೆ ಒಂದೊಂದು ರೇಟ್ ಫಿಕ್ಸ್ ಮಾಡುವ ಮೂಲಕ ಕಸದ ದಂಧೆ ನಡೆಸುತ್ತಿದೆ. ಕಸ ಹಾಕಲು ಹೋದವರಿಗೆ ಹಸಿ ,ಒಣ ಕಸ ಬೇರ್ಪಡಿಸಿ ಎಂದು ಹೇಳುತ್ತಾರೆ. ಆದರೆ ಹಣ ನೀಡುವವರಿಗೆ ಮಾತ್ರ ಕಸವನ್ನು ಮಿಕ್ಸ್ ಮಾಡಿ ಕೊಟ್ಟರು ಕೂಡ ಪರವಾಗಿಲ್ಲ ಎಂದು ಹೇಳುವ ಮೂಲಕ ಹಣ ಸಂಗ್ರಹಣೆ ಮಾಡುತ್ತಿದ್ದಾರೆ.

ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಕಾಯ್ದೆ ಪ್ರಕಾರ ಬಲ್ಕ್ ಜನರೇಟರ್ ಕಸ ಸಂಗ್ರಹಿಸುವಂತಿಲ್ಲ. 100 ಕೆಜಿ ಗಿಂತ ಹೆಚ್ಚು ಕಸ ಬಿದ್ದರೆ ಅದು ವಾಣಿಜ್ಯ ಕಸ ಆಗುತ್ತದೆ. ಬಿಬಿಎಂಪಿ ವಸತಿ ಕಸಗಳನ್ನು ಮಾತ್ರ ಸಂಗ್ರಹ ಮಾಡಲಿದ್ದು, ಒಂದು ಮನೆಯ ಕಸ 10 ಕೆಜಿಗಿಂತ ಮೀರಬಾರದು. ಆದರೆ ಬೊಮ್ಮನಹಳ್ಳಿ, ಬೆಳ್ಳಂದೂರು ಸಮೀಪದ ಅಪಾರ್ಟ್ ಮೆಂಟ್‍ಗಳಲ್ಲಿ ನಿತ್ಯ 100 ಕೆಜಿಗೂ ಹೆಚ್ಚು ಕಸ ಸಂಗ್ರಹ ಮಾಡುವ ಮೂಲಕ ಕಸದ ದಂಧೆ ನಡೆಯುತ್ತಿದೆ. ಅಲ್ಲದೆ ಈ ಕಸವನ್ನು ನಗರದ ಹೊರವಲಯಗಳಿಗೆ ವಾಣಿಜ್ಯ ಕಸ ಸಂಗ್ರಹಣೆ ಮಾಡಲಾಗುತ್ತದೆ.

ನಗರದ ಹೊರವಲಯ ಬೆಳ್ಳಂದೂರಿನ ಖಾಸಗಿ ಅಪಾರ್ಟ್‍ಮೆಂಟ್ ಹಿಂಬಾಗಿಲಿನಿಂದ ಕಸ ತೆಗೆದುಕೊಳ್ಳುತ್ತಾರೆ. ಅಲ್ಲದೆ ಬಿನ್ನಿಮಿಲ್ ಅಪಾರ್ಟ್‍ಮೆಂಟ್ ಕಸ ತೆಗೆದುಕೊಂಡು ಹೋಗಲು ಬಿಬಿಎಂಪಿ ಸಿಬ್ಬಂದಿ , ಪಬ್ಲಿಕ್ ಟಿವಿ ಪ್ರತಿನಿಧಿಯೊಂದಿಗೆ ರೇಟ್ ಫಿಕ್ಸ್ ಮಾಡುವ ಅಸಲಿ ಸತ್ಯ ಬಯಲಾಗಿದೆ.

ಪ್ರತಿನಿಧಿ – ನಮ್ ಅಪಾರ್ಟ್ ಮೆಂಟ್ ಕಸ ತಗೊಳ್ಳಿ
ಸಿಬ್ಬಂದಿ – ಯಾವ್ ಏರಿಯಾ
ಪ್ರತಿನಿಧಿ – ಇಲ್ಲಿ 12 ನೇ ಕ್ರಾಸ್ ಸ್ಟಾರ್ ಬಿಲ್ಡಿಂಗ್
ಸಿಬ್ಬಂದಿ – ಹೌದಾ , ಎಷ್ಟ್ ಅಪಾರ್ಟ್ ಮೆಂಟ್ ಇದೇ ಹೇಳಿ ರೇಟ್ ಫಿಕ್ಸ್ ಮಾಡ್ತಿವಿ
ಪ್ರತಿನಿಧಿ – 120 ಪ್ಲಾರ್ಟ್ ಇದೆ ,100 ಕೆಜಿಗಿಂತ ಜಾಸ್ತಿ ಕಸ .. 4 ಆಟೋ ಬೇಕೆ ಬೇಕು
ಸಿಬ್ಬಂದಿ – ಆಗಲಿ ತಿಂಗಳಿಗೆ 100 ರೂ ಒಂದೊಂದು ಮನೆಗೆ ಕೊಡಿಸಿ
ಪ್ರತಿನಿಧಿ – 50 ಮಾಡಿಕೊಳ್ಳಿ
ಸಿಬ್ಬಂದಿ – ಆಗಲಿ ಓಕೆ,ಇವತ್ತೆ ಕಸ ತೆಗೆಯಬೇಕಾ
ಪ್ರತಿನಿಧಿ – ಸೋಮವಾರದಿಂದ ಕಸ ತೆಗೆಯಿರಿ
ಸಿಬ್ಬಂದಿ – ಹಂಗ ಆಗಲಿ , ಹಸಿ ,ಒಣ ಕಸ ಬೇರೆ ಮಾಡಿ . ಪೊಲೀಸವ್ರೇ ಮಾಡ್ತಾರೆ
ಪ್ರತಿನಿಧಿ – ಅಯ್ಯೊ ಮಾಡಲ್ಲ ಅಂತಾರೆ
ಸಿಬ್ಬಂದಿ – ಹೋಗಲಿ ಒಂದೊಂದು ಕವರ್ ನಲ್ಲಂತೂ ಕಟ್ಟಿ ಹಾಕಿರಬೇಕು
ಪ್ರತಿನಿಧಿ – ಸರಿ ,ಡ್ರಮ್ ಗೆ ತುಂಬಿಸಿ ಇಡ್ತಿವಿ

ಗುತ್ತಿಗೆದಾರ ಕೆಲಸದವರ ಮೇಲೆ ಹೆಲ್ತ್ ಇನ್ಸ್ ಪೆಕ್ಟರ್ ಇದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಸಿಬ್ಬಂದಿ ಪುಡಿಗಾಸಿನ ಆಸೆಗಾಗಿ ಬಿಬಿಎಂಪಿ ನಿಯಮಗಳನ್ನು ಗಾಳಿಗೆ ತೂರಿ ಕಸದ ದಂಧೆಯ ಮೂಲಕ ಹಣ ಸಂಗ್ರಹಣೆ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *