ಗಣೇಶ ಹಬ್ಬ ಮುಗಿಯೋ ತನಕ ರೇಣುಕಾಚಾರ್ಯರನ್ನ ಜೈಲಿಗೆ ಹಾಕಿ – ಮಾಜಿ ಶಾಸಕ ರಾಮಪ್ಪ ಆಗ್ರಹ

Public TV
1 Min Read

ದಾವಣಗೆರೆ: ಗಣೇಶ ಹಬ್ಬ (Ganesh Chaturthi) ಮುಗಿಯುವ ತನಕ ಮಾಜಿ ಸಚಿವ ರೇಣುಕಾಚಾರ್ಯ (M.P Renukacharya) ಅವರನ್ನು ಜೈಲಿಗೆ ಹಾಕಿ ಎಂದು ಮಾಜಿ ಶಾಸಕ ಎಸ್.ರಾಮಪ್ಪ (Ex MLA Ramappa) ಆಗ್ರಹಿಸಿದ್ದಾರೆ.

ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಗಣೇಶ ಹಬ್ಬದ ಮೆರವಣಿಗೆಯಲ್ಲಿ ಡಿಜೆ ಬಳಕೆ ನಿಷೇಧಿಸಿದ್ದಾರೆ.
ಇದಕ್ಕೆ ನಮ್ಮ ಸ್ವಾಗತವಿದೆ. ಆದರೆ, ಜಿಲ್ಲಾಧಿಕಾರಿಗಳ ಅಧಿಕೃತ ಆದೇಶಕ್ಕೆ ರೇಣುಕಾಚಾರ್ಯ ಸವಾಲ್ ಹಾಕಿದ್ದಾರೆ. ಓರ್ವ ಮಾಜಿ ಸಚಿವರಾಗಿ ರೇಣುಕಾಚಾರ್ಯ ಅವರಿಗೆ ಇಂತಹ ಹೇಳಿಕೆ ಗೌರವ ತರುವಂತಹದ್ದಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಗಣೇಶ ಹಬ್ಬ ಆಚರಣೆಗೆ ಷರತ್ತು – ಬಿಜೆಪಿಯಿಂದ ವಿಧಾನ ಪರಿಷತ್‌ನಲ್ಲಿ ಪ್ರತಿಭಟನೆ

ರೇಣುಕಾಚಾರ್ಯ ಅವರು ಜಿಲ್ಲಾಧಿಕಾರಿಗಳು ತಾಕತ್ ಇದ್ದರೆ ಡಿಜೆ ಪರವಾನಿಗೆ ನಿಷೇಧಿಸಿ ಎನ್ನುತ್ತಿದ್ದಾರೆ. ಈ ರೀತಿ ಹೇಳಿಕೆ ಸರಿಯಲ್ಲ, ಡಿಜೆಯಿಂದ ಶಾಲಾ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಬಿಜೆಪಿಯವರು ವಿಶೇಷವಾಗಿ ರೇಣುಕಾಚಾರ್ಯ ಅಂತವರು ಇಂತಹ ವಿಚಾರ ಇಟ್ಟುಕೊಂಡು ಪರಸ್ಪರ ಜಗಳ ಹಚ್ಚುವ ರಾಜಕೀಯ ಮಾಡಿತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇಂತವರನ್ನು ಗಣೇಶ ಹಬ್ಬ ಮಗಿಯುವ ತನಕ ಜೈಲಿಗೆ ಹಾಕಬೇಕು. ಆಗ ಎಲ್ಲರೂ ಶಾಂತಿಯುತವಾಗಿ ಹಬ್ಬ ಮಾಡಬಹುದು ಎಂದಿದ್ದಾರೆ. ಇದನ್ನೂ ಓದಿ: ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಬಿಬಿಎಂಪಿಯಿಂದ ಮಾರ್ಗಸೂಚಿ ಪ್ರಕಟ

Share This Article