ನಿಮಗೆ ತಾಕತ್ ಇದ್ದರೆ ಕರಸೇವಕರನ್ನು ಬಂಧಿಸಿ: ಸಿಎಂ ವಿರುದ್ಧ ಸುನೀಲ್ ಕುಮಾರ್ ಕಿಡಿ

Public TV
2 Min Read

ಬೆಂಗಳೂರು: ಶುಭ ಸಂದರ್ಭದಲ್ಲಿ ಸಿದ್ದರಾಮಯ್ಯ (Siddaramaiah) ಅಪಶಕುನ ಆರಂಭಿಸಿದ್ದಾರೆ. ರಾವಣ ಮಾತ್ರ ರಾಮ ವಿರೋಧಿ ಅಲ್ಲ. ಸಿದ್ದರಾಮಯ್ಯ ಕೂಡ ರಾಮ ವಿರೋಧಿ. ನಿಮಗೆ ತಾಕತ್ ಇದ್ದರೆ ಕರಸೇವಕರ ಬಂಧನ ಮಾಡಿ, ನಾನು ಪಟ್ಟಿ ಕೊಡುತ್ತೇನೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ (Sunil Kumar) ಸವಾಲ್ ಹಾಕಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ರಾಮಜನ್ಮಭೂಮಿ (Ram Janmabhoomi) ಹೋರಾಟಗಾರರ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನೂ ಕರಸೇವಕ, ನಿಮಗೆ ತಾಕತ್ ಇದ್ದರೆ ಕರಸೇವಕರ ಬಂಧನ ಮಾಡಿ. ಇನ್ನೂ ಕಾಲ ಮಿಂಚಿಲ್ಲ, ಬದ್ಧತೆ ಇದ್ರೆ ಹಿಂದುತ್ವದ ಮೇಲೆ ನಂಬಿಕೆ ಇದ್ರೆ ರಾಮಮಂದಿರ ಉದ್ಘಾಟನೆಗೆ ಬನ್ನಿ. ಅಲ್ಪಸಂಖ್ಯಾತರಿಗೆ ಹತ್ತು ಸಾವಿರ ಕೋಟಿ ಕೊಡುವ ಬದ್ಧತೆ ರಾಜ್ಯದ ಹಿಂದೂ ದೇವಾಲಯಗಳ ಅಭಿವೃದ್ಧಿ ಕಡೆಗೂ ತೋರಿಸಿ. ರಾಜ್ಯದ ನೂರು ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಸಿದ್ದರಾಮಯ್ಯ ಆದೇಶ ಹೊರಡಿಸಲಿ ಎಂದರು.

ರಾವಣ ಮಾತ್ರ ರಾಮ ವಿರೋಧಿ ಅಲ್ಲ. ಸಿದ್ದರಾಮಯ್ಯ ಕೂಡ ರಾಮ ವಿರೋಧಿ ಎನ್ನೋದನ್ನು ತೋರಿಸಿದ್ದಾರೆ. ನಿಮ್ಮ ಸರ್ಕಾರಕ್ಕೆ ತಾಕತ್ ಇದ್ದರೆ, ಸಿದ್ದರಾಮಯ್ಯ ನಿಮಗೆ ತಾಕತ್ ಇದ್ದರೆ, ಕರ ಸೇವಕರ ಬಂಧನ ಮಾಡಿ. ನಾನು ಪಟ್ಟಿ ಕೊಡುತ್ತೇನೆ. ನಾನು ಕರ ಸೇವೆಯಲ್ಲಿ ಭಾಗಿಯಾಗಿದ್ದೆ. ತಾಕತ್ತಿದ್ದರೆ ಬಂಧನ ಮಾಡಿ. ಸಿದ್ದರಾಮಯ್ಯ ನಿಮಗೆ ನನ್ನ ಸವಾಲು ಎಂದಿದ್ದಾರೆ.

ಬಂಧನ ಮಾಡಿದಾಕ್ಷಣ ಹಿಂದುತ್ವಕ್ಕೆ ಧಕ್ಕೆ ಮಾಡಲು ಸಾಧ್ಯವಿಲ್ಲ. ರಾಮ ಮಂದಿರ ಉದ್ಘಾಟನೆಗೆ ದೇಶ ಖುಷಿ ಪಡುತ್ತಿದೆ. ಆದರೆ ಸಿದ್ದರಾಮಯ್ಯ ನೀವು ಅಪಶಕುನ ತರಲು ಹೊರಟಿದ್ದೀರಿ. ಬಂಧನದ ಮೂಲಕ ಅಪಶಕುನ ಮಾಡುತ್ತಾ ಇದ್ದೀರಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ದಿನ ಸಾರ್ವತ್ರಿಕ ರಜೆ ಘೋಷಿಸುವಂತೆ ಸಿಎಂಗೆ ಪತ್ರ: ಯಶ್‌ಪಾಲ್‌ ಸುವರ್ಣ

ಸಿಎಂ ಹಾಗೂ ಕ್ಯಾಬಿನೆಟ್ ಸಚಿವರು ಮನೆಯಲ್ಲಿ ನಂದಾ ದೀಪ ಬೆಳಗಿಸಲಿ. ಜನವರಿ 22ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಆಗ್ತಿದೆ. ಈಗಾಗಲೇ ಪ್ರಧಾನಿಗಳು ಮನೆ ಮನೆಗಳಲ್ಲಿ ದೀಪ ಬೆಳಗಿಸುವಂತೆ ಕರೆ ಕೊಟ್ಟಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಕೂಡ ತಮ್ಮ ಕುಟುಂಬ ಸದಸ್ಯರ ಜೊತೆಗೂಡಿ ದೀಪ ಹಚ್ಚಲಿ. ಜೊತೆಗೆ ಅವರ ಕ್ಯಾಬಿನೆಟ್ ಮಂತ್ರಿಗಳು ಕೂಡ ಅವರ ಮನೆ ಮನೆಗಳಲ್ಲಿ ದೀಪ ಬೆಳಗಿಸಲಿ.

Share This Article