ಸಿಂಗಲ್ ರೂಂನಲ್ಲಿ ಕನಕಪುರದ ಬಂಡೆ ಫುಲ್ ಸೈಲೆಂಟ್

Public TV
2 Min Read

– ನಿದ್ದೆ ಬರದೆ ಕನಲಿ ಹೋದ ಮಾಜಿ ಸಚಿವ

ನವದೆಹಲಿ: ಟ್ರಬಲ್ ಶೂಟರ್, ಕನಕಪುರದ ಬಂಡೆ ಡಿ.ಕೆ ಶಿವಕುಮಾರ್ ಬಂಧನ ಕೊನೆಗೂ ಆಗಿದೆ. ನೂರಾರು ಕೋಟಿ ಒಡೆಯನಾಗಿದ್ದ ಮಾಜಿ ಸಚಿವ ಈಗ ನಾಲ್ಕು ಗೋಡೆ ನಡುವೆ ಕಾಲ ಕಳೆಯುಂತಾಗಿದೆ.

ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಡಿಕೆಶಿಯನ್ನು ಇಡಿ ಅಧಿಕಾರಿಗಳು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಕಳೆದ ನಾಲ್ಕು ದಿನಗಳ ಕಾಲ ವಿಚಾರಣೆ ನಡೆಸಿದ್ದ ಅಧಿಕಾರಿಗಳು ಮಂಗಳವಾರ ರಾತ್ರಿ ಅವರನ್ನ ಬಂಧಿಸಿದ್ದರು. ಬುಧವಾರ ಇಡಿ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ 9 ದಿನಗಳ ಕಾಲ ವಶಕ್ಕೆ ಪಡೆದುಕೊಂಡರು.

ಹೀಗೆ ವಶಕ್ಕೆ ಪಡೆದುಕೊಂಡಿರುವ ಡಿಕೆ ಶಿವಕುಮಾರ್ ಅವರನ್ನ ಇಡಿ ಅಧಿಕಾರಿಗಳು ತಘಲಕ್ ರೋಡ್ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಿದ್ರು. ಮುಂದಿನ 9 ದಿನಗಳ ಕಾಲ ತಘಲಕ್ ರೋಡ್ ಪೊಲೀಸ್ ಠಾಣೆಯಲ್ಲೇ ಡಿಕೆ ನವರಾತ್ರಿಗಳನ್ನು ಕಳೆಯ ಬೇಕಿದೆ. ನೂರಾರು ಕೋಟಿಗಳ ಒಡೆಯನಾಗಿದ್ದ ಡಿಕೆಶಿಗೆ ಇದು ಸಂಕಷ್ಟಕ್ಕೆ ಈಡು ಮಾಡಿದೆ. ಬುಧವಾರ ಇಡೀ ರಾತ್ರಿ ಡಿಕೆ ನಿದ್ದೆ ಮಾಡಿಲ್ಲ ಎನ್ನಲಾಗಿದೆ.

ಪ್ರತಿನಿತ್ಯ ಐಶಾರಾಮಿ ರೂಂಗಳಲ್ಲಿ ಲಕ್ಷಾಂತರ ರೂ ಮೌಲ್ಯದ ಬೆಡ್ ಮೇಲೆ ರಾಜ ನಿದ್ದೆ ಮಾಡುತ್ತಿದ್ದ ಡಿಕೆಗೆ ಆ ರೂಂ ನಲ್ಲಿ ರಾತ್ರಿ ಪೂರ್ತಿ ನಿದ್ದೆ ಬಂದಿಲ್ವಂತೆ. ರಾತ್ರಿ ಪೂರ್ತಿ ಎಚ್ಚರವಾಗಿದ್ದ ಡಿಕೆ ತೀವ್ರ ಆಲೋಚನೆಯಲ್ಲಿ ಮಗ್ನವಾಗಿದ್ದರು. ತಮಗೆ ನೀಡಿದ್ದ ಕೋಠಡಿಯಲ್ಲಿ ಯಾರೊಂದಿಗೂ ಮಾತನಾಡದೆ ಸೈಲೆಂಟಾಗೇ ರಾತ್ರಿ ಕಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ನ್ಯಾಯಾಲಯದ ಆವರಣದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಡಿಕೆಶಿ ಸಹೋದರ ಡಿಕೆ ಸುರೇಶ್

ಬಿಪಿ ಶುಗರ್ ಸಮಸ್ಯೆ ಎದುರಿಸುತ್ತಿರುವ ಡಿಕೆ ಮೊನ್ನೆಯಿಂದಲೂ ಸರಿಯಾದ ನಿದ್ದೆ ಮಾಡಿಲ್ಲ. ಆಸ್ಪತ್ರೆಯಲ್ಲಿ ಒಂದೆರಡು ಗಂಟೆ ಮಲಗಿದ್ದರು ಬಿಟ್ಟರೆ, ಡಿಕೆ ಏನಾಗುತ್ತೊ ಏನೋ ಅನ್ನೋ ಭೀತಿಯಲ್ಲಿ ಬಿಟ್ಟ ಕಣ್ಣು ಬಿಟ್ಟುಕೊಂಡಿದ್ದರು. ಬುಧವಾರ ಮಧ್ಯಾಹ್ನದ ಬಳಿಕ ಚೇತರಿಸಿಕೊಂಡಿರುವ ಡಿಕೆ, ನಿನ್ನೆ ರಾತ್ರಿಯೂ ನಿದ್ದೆ ಮಾಡದ ಹಿನ್ನೆಲೆಯಲ್ಲಿ ಮತ್ತೆ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಂದು ಬೆಳಗ್ಗೆ 11 ಗಂಟೆಗೆ ಕಸ್ಟಡಿಗೆ ಪಡೆದ ಬಳಿಕ ಇಡಿ ಮೊದಲ ದಿನದ ವಿಚಾರಣೆ ಆರಂಭಿಸಲಿದೆ. ಒಂದು ಕಡೆ ಡಿಕೆಶಿಗೆ ಇಡಿ ಸಂಕಷ್ಟ ಆದರೆ ಮತ್ತೊಂದು ಕಡೆ ಇಡಿ ಅಧಿಕಾರಿಗಳು ಕೊಟ್ಟ ರೂಂ ಅಜೆಸ್ಟ್ ಆಗದೆ ಪರಿತಪಿಸುತ್ತಿದ್ದಾರೆ. ಇದನ್ನೂ ಓದಿ: ಇಡಿ ಕಚೇರಿಯಿಂದ ತುಘಲಕ್ ರೋಡ್ ಪೊಲೀಸ್ ಠಾಣೆಗೆ ಡಿಕೆಶಿ ಶಿಫ್ಟ್

Share This Article
Leave a Comment

Leave a Reply

Your email address will not be published. Required fields are marked *