ಅಪ್ಪು ನಿಧನರಾದಾಗ Life is Unpreditable ಎಂದು ಸ್ಪಂದನಾ ಕಣ್ಣೀರಿಟ್ಟಿದ್ದರು- ಸ್ನೇಹಿತೆ ನೇತ್ರಾ

Public TV
2 Min Read

ಚಿತ್ರರಂಗದಲ್ಲಿ ಸೂತಕದ ವಾತಾವರಣ ಮನೆ ಮಾಡಿದೆ. ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್, ಪುನೀತ್ ರಾಜ್‌ಕುಮಾರ್ (Puneeth Rajkumar) ನಿಧನ ವಿಚಾರ ಕುಟುಂಬಸ್ಥರಿಗೆ ಆಪ್ತರಿಗೆ ಶಾಕ್ ಕೊಟ್ಟಿದೆ. ಹೀಗಿರುವಾಗ ವಿಜಯ್ ರಾಘವೇಂದ್ರ (Vijay Raghavendra) ಪತ್ನಿ ಸಾವು ಅನೇಕರಿಗೆ ಆಘಾತವುಂಟು ಮಾಡಿದೆ. ವಿಜಯ್ ಪತ್ನಿ ಸ್ಪಂದನಾ (Spadana) ಇನ್ನಿಲ್ಲ. ಮುದ್ದಾದ ಸೌಮ್ಯ ಸ್ವಭಾವದ ಹೆಣ್ಣು ಮಗಳನ್ನು ಕಳೆದುಕೊಂಡಿರುವ ಕುಟುಂಬಸ್ಥರು ಮತ್ತು ಸ್ನೇಹಿತರು ದುಖಃದಲ್ಲಿದ್ದಾರೆ. ಸ್ಪಂದನಾ ಜೊತೆ ಕಾಲೇಜ್ ದಿನಗಳಿಂದ ಒಟ್ಟಿಗೆ ಕಳೆದ ಮಾಜಿ ಕಾಪೋರೇಟರ್ ನೇತ್ರಾ ಪಲ್ಲವಿ ರಿಯಾಕ್ಟ್ ಮಾಡಿದ್ದಾರೆ.

ಸ್ಪಂದನಾ ಸಾವು ವಿಜಯ್ ಕುಟುಂಬಕ್ಕೆ ಮತ್ತು ಆಪ್ತರಿಗೆ ಬರಸಿಡಿಲು ಬಡಿದಂತೆ ಆಗಿದೆ. ಸ್ಪಂದನಾ ಇಲ್ಲದೇ ವಿಜಯ್ ಜೀವನ ಹೇಗೋ ಏನೋ ಎಂದು ಚಿಂತಿಸುವಂತೆ ಆಗಿದೆ. ಚೆಂದದ ಜೋಡಿ ಬದುಕಿಲ್ಲಿ ವಿಧಿ ಆಟ ನೋಡಿ ಶಾಕ್ ಆಗಿದ್ದಾರೆ. ಈಗ ಸ್ನೇಹಿತೆ ಸ್ಪಂದನಾ ಬಗ್ಗೆ ನೇತ್ರಾ ಪಲ್ಲವಿ ಅವರು ಮಾತನಾಡಿದ್ದಾರೆ.

ಸ್ಪಂದನಾ ಹೈಪರ್ ಆಕ್ಟಿವ್ ಹುಡುಗಿಯಾಗಿದ್ದರು. ಆಕೆ ಜೊತೆ ನಾನು ಪಿಯುಸಿ ಮತ್ತು ಡಿಗ್ರಿ ವ್ಯಾಸಂಗ ಮಾಡಿರುವೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ಆಕೆ ಭಾಗಿಯಾಗುತ್ತಿದ್ದರು. ಯಾರೇ ಸಮಸ್ಯೆಯಲ್ಲಿದ್ದರೂ ಆಕೆ ಹೋಗಿ ಸ್ಪಂದಿಸುತ್ತಿದ್ದಳು. ೧೫ ದಿನಗಳ ಹಿಂದೆ ಆಕೆ ನನಗೆ ಕರೆ ಮಾಡಿ ಯಾರಿಗೋ ಸಮಸ್ಯೆ ಆಗಿದೆ ನಿನ್ನ ಕ್ಷೇತ್ರದಲ್ಲಿ ಸಹಾಯ ಮಾಡಲು ಆಗುತ್ತಾ ನೋಡಿ ಎಂದು ಮನವಿ ಮಾಡಿದ್ದಳು. ಆ ಹುಡುಗನಿಗೆ ಸಣ್ಣ ಗಾಯ ಆಗಿತ್ತು ಅಷ್ಟು ಕೇರ್ ಮಾಡುತ್ತಾರೆ. ಪ್ರತಿಯೊಬ್ಬರಿಗೂ ಕಪಲ್ ಸ್ಪೂರ್ತಿಯಾಗುತ್ತಾರೆ. ೨೦ ವರ್ಷಗಳಿಂದ ಸಾವು ಸ್ನೇಹಿತರು’ ಎಂದು ನೇತ್ರಾ ಪಲ್ಲವಿ ಮಾತನಾಡಿದ್ದಾರೆ.

ಯಾರು ಹೇಗಿರುತ್ತಾರೆ ಹಾಗೇ ಇದ್ದರೆ ಚೆನ್ನ. ಆಕೆ ಮೊದಲಿನಿಂದಲೂ ಮುದ್ದು ಮುದ್ದಾಗಿದ್ದಳು. ನಾನು ಅವಳು ಮೊದಲಿನಿಂದಲೂ ದಪ್ಪನೇ ಇರುವುದು. ನಮ್ಮ ಗುಂಪಿನಲ್ಲಿ ಬಬ್ಲಿನೆಸ್ ಹೆಚ್ಚಿತ್ತು. ಸ್ಪಂದನಾ ಸಣ್ಣಗಾಗಲು ಅಡ್ಡ ದಾರಿ ಆಯ್ಕೆ ಮಾಡಿಕೊಂಡಿಲ್ಲ. ಆಕೆ ಹೇಗೆ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ. ಎಲ್ಲರಂತೆ ಜಿಮ್ ಮಾಡಿಕೊಂಡು ಇತ್ತೀಚಿಗೆ ಸಣ್ಣಗಾಗಿ ಸಖತ್ ಆಗಿದ್ದಳು ನೋಡಲು ನಾವೇ ಸ್ನೇಹಿತರು ಮಾತನಾಡುತ್ತಿದ್ವಿ. ಜಿಮ್ ಮಾಡುವುದರಿಂದ ಯಾರೂ ಸಾಯುವುದಿಲ್ಲ ಎಂದು ನೇತ್ರಾ ಪಲ್ಲವಿ (Nethra Pallavi) ಹೇಳಿದ್ದಾರೆ.

ಪುನೀತ್ ರಾಜ್‌ಕುಮಾರ್ ಅಗಲಿದ ದಿನ ತುಂಬಾ ಬೇಸರ ಮಾಡಿಕೊಂಡಿದ್ದಳು. ಯಾವುದೋ ಒಂದು ವಿಚಾರಕ್ಕೆ ನಾನು ಕರೆ ಮಾಡಿದೆ. ಆಗ ಪುನೀತ್ ಅವರ ವಿಚಾರ ತೆಗೆದಾಗ ನನಗ ಅದರ ಬಗ್ಗೆ ಮಾತನಾಡಲು ಶಕ್ತಿನೂ ಇಲ್ಲ. Life is Unpreditable ಯಾರಿಗೆ ಏನಾಗುತ್ತದೆ ಅನ್ನೋದು ಗೊತ್ತಿಲ್ಲ ಎಂದಳು. ಆಕೆಗೆ 14 ವರ್ಷದ ಮುದ್ದಾಗ ಮಗ ಇದ್ದಾನೆ. ಆತನಿಗೆ ಈ ನೋವು ತಡೆಯಲು ಶಕ್ತಿ ಕೊಡಬೇಕು. ತಾಯಿ ಕರಳು ಹೊಂದಿರುವ ವ್ಯಕ್ತಿ ಸ್ಪಂದನಾ ಎಂದು ನೇತ್ರಾ ಪಲ್ಲವಿ ಮಾತನಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಸ್ಪಂದನಾರನ್ನ ನೋಡಬೇಕು ಎಂದು ಕಣ್ಣೀರಿಟ್ಟಿದ್ದರು ಚಿನ್ನಾರಿಮುತ್ತ ವಿಜಯ್

ಆಗಸ್ಟ್ 26ಕ್ಕೆ ವಿಜಯ್-ಸ್ಪಂದನಾ ಮದುವೆ ವಾರ್ಷಿಕೋತ್ಸವವಾಗಿದೆ. ಮದುವೆ ಆ್ಯನಿವರ್ಸರಿಗೆ 18 ದಿನ ಬಾಕಿರುವಾಗ ಬಾರದ ಲೋಕಕ್ಕೆ ಸ್ಪಂದನಾ ಹೋಗಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್