CSK ಮುಖ್ಯಸ್ಥರಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ನೇಮಕ

By
1 Min Read
CSK ಮುಖ್ಯಸ್ಥರಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ನೇಮಕ

ನವದೆಹಲಿ: ಬಿಸಿಸಿಐ, ಐಸಿಸಿ ಮಾಜಿ ಮುಖ್ಯಸ್ಥರಾಗಿದ್ದ ಎನ್.ಶ್ರೀನಿವಾಸನ್ (N. Srinivasan) ಇದೀಗ ತಮ್ಮ 80ನೇ ವಯಸ್ಸಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ (Chennai Super Kings) ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ಈ ಮೊದಲು ಬಿಸಿಸಿಐ (BCCI) ಹಾಗೂ ಐಸಿಸಿ (ICC) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್‌ನ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್‌ನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.ಇದನ್ನೂ ಓದಿ:ಜಿಎಸ್‌ಟಿ ಪರಿಷ್ಕರಣೆ ಬೆನ್ನಲ್ಲೇ ದುಬಾರಿಯಾಗಲಿದೆ ಆರ್‌ಸಿಬಿ ಟಿಕೆಟ್‌ ದರ

ಸಿಎಸ್‌ಕೆ ಮಾಹಿತಿ ಪ್ರಕಾರ, ಶ್ರೀನಿವಾಸನ್ ಅವರು 2025ರ ಫೆಬ್ರವರಿಯಲ್ಲಿಯೇ ಅಧಿಕೃತವಾಗಿ ಸಿಎಸ್‌ಕೆ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಬಳಿಕ ಮೇ.10ರಂದು ಮುಖ್ಯಸ್ಥರಾಗಿ ಬಡ್ತಿ ನೀಡಲಾಯಿತು ಎಂದು ತಿಳಿದುಬಂದಿದೆ.

ಸದ್ಯ ಆರ್ ಶ್ರೀನಿವಾಸನ್, ರಾಕೇಶ್ ಸಿಂಗ್, ಪಿಎಲ್ ಸುಬ್ರಮಣಿಯನ್, ಸಂಜಯ್ ಪಟೇಲ್, ವಿ ಮಾಣಿಕ್ಕಂ ಮತ್ತು ರೂಪಾ ಗುರುನಾಥ್ ಸಿಎಸ್‌ಕೆ ಕ್ರಿಕೆಟ್ ಲಿಮಿಟೆಡ್‌ನ ಸದಸ್ಯರ ಪಟ್ಟಿಯಲ್ಲಿದ್ದಾರೆ. ಮುಂಬರುವ 2026ರ ಐಪಿಎಲ್‌ಗೂ ಮುನ್ನ ಸಿಎಸ್‌ಕೆ ಕ್ರಿಕೆಟ್ ಲಿಮಿಟೆಡ್ ಎನ್.ಶ್ರೀನಿವಾಸನ್ ಅವರನ್ನು ಮುಖ್ಯಸ್ಥರಾಗಿ ನೇಮಿಸಿದೆ.

ಈ ಮೊದಲು ಬಿಸಿಸಿಐನ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಐಸಿಸಿಯ ಅಧ್ಯಕ್ಷರಾಗಿದ್ದರು. ಅಷ್ಟೇ ಅಲ್ಲದೇ 15 ವರ್ಷಗಳ ಕಾಲ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದರು.ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್‌ ಆ್ಯಪ್ ಪ್ರಕರಣ – ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್‌ ಧವನ್‌ಗೆ ಇಡಿ ಸಮನ್ಸ್‌

Share This Article