ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು: ಕಾಂಗ್ರೆಸ್ ನಾಯಕರಿಗೆ ಖರ್ಗೆ ಖಡಕ್ ಸಂದೇಶ

By
1 Min Read

ಬೆಂಗಳೂರು: ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು. ನಿಮಗೆ ಕೊಟ್ಟ ಕೆಲಸ ಮೊದಲು ಮಾಡಿ. ಯಾವಾಗ ಏನು ಮಾಡಬೇಕು ಎಂದು ಹೈಕಮಾಂಡ್‌ಗೆ ಗೊತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಾಂಗ್ರೆಸ್ ನಾಯಕರಿಗೆ ಖಡಕ್ ಸಂದೇಶ ನೀಡಿದ್ದಾರೆ.

ಕಾಂಗ್ರೆಸ್‌ನಲ್ಲಿ (Congress) ಬಹಿರಂಗ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ. ಯಾವಾಗ ಏನು ನಿರ್ಣಯ ತೆಗೆದುಕೊಳ್ಳಬೇಕು ಅದು ನಮಗೆ ಬಿಟ್ಟಿದ್ದು. ಇದೆಲ್ಲ ಮಾತನಾಡುವುದರಿಂದ ಪ್ರಯೋಜನ ಆಗುವುದಿಲ್ಲ. ಹೈಕಮಾಂಡ್ ಇದೆ, ನಾವೆಲ್ಲಾ ಇದ್ದೇವೆ. ನಾವು ನಿರ್ಣಯ ತೆಗೆದುಕೊಳ್ಳುತ್ತೇವೆ. ಹೈಕಮಾಂಡ್ ಯಾವಾಗ ನಿರ್ಣಯ ತೆಗೆದುಕೊಳ್ಳಬೇಕು ಆಗ ತೆಗೆದುಕೊಳ್ಳುತ್ತದೆ. ಪಕ್ಷಕ್ಕೆ ದೊಡ್ಡ ಹಾನಿಯಾಗುತ್ತದೆ. ದಯವಿಟ್ಟು ಕಾಂಟ್ರವರ್ಸಿ ರಾಜ್ಯದಲ್ಲಿ ನಡೆಯಬಾರದು ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ನನ್ನ ಹಲವು ಪ್ರಶ್ನೆಗಳಿಗೆ ಸನಾತನ ಧರ್ಮದಲ್ಲಿ ಉತ್ತರ ಸಿಕ್ಕಿತು – ಕುಂಭಮೇಳದಲ್ಲಿ ಆಫ್ರಿಕಾದ ಸಾಧು

ಆಗ, ಈಗ, ಯಾವಾಗ ಅದೆಲ್ಲ ಇಲ್ಲ. ಯಾವಾಗ ಮಾಡಬೇಕು ಬಿಡಬೇಕು ಹೈಕಮಾಂಡ್‌ಗೆ ಗೊತ್ತಿದೆ. ಆಗ ಸಿಎಂ ಚೇಂಜ್ ಆಗುತ್ತಾರೆ, ಈಗ ಡಿಸಿಎಂ ಚೇಂಜ್ ಆಗುತ್ತಾರೆ ಅದೆಲ್ಲ ಹೇಳಬೇಡಿ. ನಾನಿದ್ದೇನೆ, ರಾಹುಲ್ ಗಾಂಧಿ ಇದ್ದಾರೆ. ಯಾವಾಗ ಏನು ಮಾಡಬೇಕು ಅಂತ ನಮಗೆ ಟಾರ್ಗೆಟ್ ಇರುತ್ತದೆ. ಅದನ್ನು ನೋಡಿಕೊಂಡು ನಾವೇ ನಿರ್ಣಯ ಮಾಡುತ್ತೇವೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಮುಡಾ ಹಗರಣ – ಇಡಿಯಿಂದ 300 ಕೋಟಿ ಮೌಲ್ಯದ 142 ಸ್ಥಿರ ಆಸ್ತಿ ಜಪ್ತಿ

Share This Article