PSI ಹಗರಣದಲ್ಲಿ ಜೆಡಿಎಸ್‌ನವರಿದ್ದರೂ ಬಲಿಹಾಕಿ – ಎಚ್.ಡಿ.ರೇವಣ್ಣ

Public TV
2 Min Read

ಹಾಸನ: ಪಿಎಸ್‌ಐ ಹಗರಣದಲ್ಲಿ ಜೆಡಿಎಸ್‌ನವರಿದ್ದರೂ ಬಲಿ ಹಾಕಿ. ಅದಕ್ಕೂ ಮುನ್ನ `ನನ್ನ ಮಕ್ಳು ಪೊಲೀಸ್ ಆಗ್ಲಿ’ ಅಂತ ಹೊಲ, ಮನೆ ಮಾರಿ ಬಡವರು ಕೊಟ್ಟಿರುವ ದುಡ್ಡನ್ನು ವಾಪಸ್ ಕೊಡಿಸಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ.

ಹಾಸನಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಿಎಸ್‌ಐ ಹಗರಣದಲ್ಲಿ ಜೆಡಿಎಸ್, ಕಾಂಗ್ರೆಸ್ ಯಾರೇ ಭಾಗಿಯಾಗಿದ್ದರೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ನಮ್ಮ ಪಾರ್ಟಿಯವರಿದ್ದರೂ ಅವರನ್ನು ಬಲಿ ಹಾಕಬೇಕು. ಆದರೆ, ಯಾರೋ ಬಡವರು `ನಮ್ಮ ಮಕ್ಕಳು ಎಸ್‌ಐ ಆಗ್ತಾರೆ’ ಅಂತ ಹೊಲ, ಮನೆ ಮಾರಿ ದುಡ್ಡು ಕೊಟ್ಟಿರುತ್ತಾರೆ. ಆ ದುಡ್ಡನ್ನು ವಾಪಸ್ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಒಂದೇ ಘಟಕವಾಗಿ ಚುನಾವಣೆ ಎದುರಿಸಬೇಕಲ್ಲವೇ? ಡಿಕೆಶಿಗೆ ನಟಿ ರಮ್ಯಾ ಪ್ರಶ್ನೆ

PSI ಹಗರಣದಲ್ಲಿ ಮಂತ್ರಿಗಳಿದ್ದಾರೋ, ಯಾರಿದ್ದಾರೋ ನನಗೆ ಗೊತ್ತಿಲ್ಲ. ಕಿಂಗ್ ಪಿನ್ನು ಅನ್ನೋದು ಗೊತ್ತಿಲ್ಲ, ನಾವು ಹಳ್ಳಿ ರೈತರು, SSLC ಓದಿದ್ದೀನಿ ಅಷ್ಟೇ. ಯಾರೇ ತಪ್ಪು ಮಾಡಿದ್ರು ಶಿಕ್ಷೆಯಾಗಲಿ ಎಂದು ನನ್ನ ಒತ್ತಾಯವಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ `ಸಮ್ಮಿಶ್ರ ಸರ್ಕಾರದಲ್ಲಿ ನಡೆದಿರುವ ಹಗರಣಗಳ ದಾಖಲೆ ಬಿಡುಗಡೆ ಮಾಡ್ತೇನೆ’ ಎಂಬ ಸಚಿವ ಅಶ್ವಥ್ ನಾರಾಯಣ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಸಮ್ಮಿಶ್ರ ಸರ್ಕಾರದಲ್ಲಿ ಯಾವ್ಯಾವ ಹಗರಣಗಳು ನಡೆದಿವೆ? ಕೂಡಲೇ ದಾಖಲೆ ಬಿಡುಗಡೆ ಮಾಡಲಿ. ನನ್ನನ್ನೂ ಸೇರಿದಂತೆ ತನಿಖೆ ನಡೆಸಲಿ, ಯಾರು ತಪ್ಪಿತಸ್ಥರಿದ್ದಾರೆ ಅವರನ್ನು ಬಲಿ ಹಾಕಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಗೊಂದಲ ಇಲ್ಲ: ಕಮಲ್ ಪಂತ್

Ashwath Narayan, HD Revanna,

ನಾನು ಲೋಕೋಪಯೋಗಿ ಸಚಿವನಾಗಿದ್ದೆ ನನ್ನನ್ನೂ ಸೇರಿಸಿ ತನಿಖೆ ನಡೆಸಿ. ಇವರೇ ಮುಖ್ಯಮಂತ್ರಿಗಳಿಗೆ ಅರ್ಜಿ ಕೊಟ್ಟು ತನಿಖೆ ಒಳಪಡಿಸಿಕೊಳ್ಳಲಿ. ಮುಖ್ಯಮಂತ್ರಿಗಳು ಸ್ವಯಂಪ್ರೇರಿತವಾಗಿ ತನಿಖೆ ಮಾಡಲು ಆದೇಶ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮ್ಮಿಶ್ರ ಸರ್ಕಾರದ್ದು, ಈಗಿನ ಸರ್ಕಾರದ ಹಗರಣಗಳನ್ನೂ ತನಿಖೆ ಮಾಡಲಿ. ಅವರದ್ದೇ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲೇ ಸಿಬಿಐ ಇದೆ. ಕೆಲವರಿಗೆ ಸಿಐಡಿ ಮೇಲೆ ನಂಬಿಕೆ ಇಲ್ಲ ಅಂತಾರೆ. ನಮ್ಮ ರಾಜ್ಯದ ಪೊಲೀಸ್ ಇಲಾಖೆ ಅಧಿಕಾರಿಗಳು ದಕ್ಷತೆಯಿಂದ ಇದ್ದಾರೆ. ಅವರು ಸಿಬಿಐಗಿಂತಲೂ ಚೆನ್ನಾಗಿ ತನಿಖೆ ಮಾಡ್ತಾರೆ. ನಾವು ರಾಜಕಾರಣಿಗಳು ಅವರಿಗೆ ಬೆಂಬಲ ಕೊಡಬೇಕು ಎಂದು ಸಲಹೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *