ಎಪ್‌ಸ್ಟೀನ್‌ ಜೊತೆ ಕಳೆದ ಪ್ರತಿ ನಿಮಿಷದ ಬಗ್ಗೆ ವಿಷಾದವಿದೆ – ಕ್ಷಮೆಯಾಚಿಸಿದ ಬಿಲ್‌ ಗೇಟ್ಸ್‌

2 Min Read

ಸಿಡ್ನಿ: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌(Jeffrey Epstein) ಜೊತೆ ಕಳೆದ ಪ್ರತಿ ನಿಮಿಷದ ಬಗ್ಗೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್‌ ಗೇಟ್ಸ್‌ (Bill Gates) ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ.

9 ನ್ಯೂಸ್ ಆಸ್ಟ್ರೇಲಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಆ ಇಮೇಲ್ ಅನ್ನು ಎಂದಿಗೂ ಕಳುಹಿಸಿಲ್ಲ. ಆತನ ಆಲೋಚನೆ ಏನು ಎನ್ನುವುದು ನನಗೆ ತಿಳಿದಿಲ್ಲ ಎಂದು ಹೇಳಿದರು.

2011 ರಲ್ಲಿ ಎಪ್‌ಸ್ಟೀನ್‌ ನಾನು ಭೇಟಿಯಾಗಿದ್ದೆ. ಮೂರು ವರ್ಷಗಳಲ್ಲಿ ನಾವು ಹಲವಾರು ಬಾರಿ ಆತನ ಜೊತೆ ಭೋಜನ ಮಾಡಿದ್ದೇನೆ. ಆದರೆ ಆತನ ಕುಖ್ಯಾತ ದ್ವೀಪಕ್ಕೆ ಎಂದಿಗೂ ಭೇಟಿ ನೀಡಿಲ್ಲ ಮತ್ತು ಮಹಿಳೆಯರೊಂದಿಗೆ ನಾನು ಸಂಬಂಧ ಹೊಂದಿಲ್ಲ ಎಂದು ತಿಳಿಸಿದರು.

ವಿಶ್ವದ ಶ್ರೀಮಂತ ವ್ಯಕ್ತಿಗಳ ಜೊತೆ ಆತನಿಗೆ ಪರಿಚಯವಿತ್ತು. ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ಹಣವನ್ನು ನೀಡಬೇಕು ಎಂದು ಆತ ಹೇಳಿದ್ದ ಎಂದು ಹೇಳಿದರು.

ಅಮೆರಿಕದ ನ್ಯಾಯಾಂಗ ಇಲಾಖೆ ಕಳೆದ ವಾರ ಎಪ್‌ಸ್ಟೀನ್‌ಗೆ ಸಂಬಂಧಿಸಿದ 30 ಲಕ್ಷಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಈ ದಾಖಲೆಯಲ್ಲಿ ಬಿಲ್ ಗೇಟ್ಸ್ ರಷ್ಯಾದ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ ನಂತರ ಲೈಂಗಿಕವಾಗಿ ಹರಡುವ ರೋಗ (STD) ಗೆ ತುತ್ತಾಗಿದ್ದರು. ಇದಕ್ಕೆ ಹೆದರಿ, ಗೇಟ್ಸ್ ಎಪ್ಸ್ಟೀನ್ ಅವರನ್ನು ಮೆಲಿಂಡಾಗೆ ರಹಸ್ಯವಾಗಿ ನೀಡಬಹುದಾದ ಆ್ಯಂಟಿಬಯೋಟಿಕ್‌ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ.

ಜೆಫ್ರಿ ಎಪ್‌ಸ್ಟೀನ್ 2019ರಲ್ಲಿ 30 ದಿನಗಳ ಸೆರೆವಾಸ ಅನುಭವಿಸಿದ್ದಾಗಲೇ ಸಾವನ್ನಪ್ಪಿದ್ದ. ತನಿಖೆ ನಡೆಸಿರುವ ಎಫ್‌ಐಬಿ ಎಪ್‌ಸ್ಟೀನ್ ಎಸ್ಟೇಟ್‌ನಿಂದ 20 ಸಾವಿರ ಪುಟಗಳ ದಾಖಲೆಯನ್ನು ವಶಕ್ಕೆ ಪಡೆದಿತ್ತು. ಈ ದಾಖಲೆಯಲ್ಲಿ ಟ್ರಂಪ್‌ಗೆ ಸಂಬಂಧಿಸಿದ 2018 ಮೆಸೇಜ್‌ಗಳು ಇವೆ. ಅ

ಯಾರು ಜೆಫ್ರಿ ಎಪ್‌ಸ್ಟೀನ್?
ಅಮೆರಿಕದ ಶ್ರೀಮಂತ ಫೈನಾನ್ಶಿಯರ್. ದೊಡ್ಡ ಉದ್ಯಮಿಗಳು, ರಾಜಕಾರಣಿಗಳು, ಶಿಕ್ಷಣ ತಜ್ಞರು, ಸೆಲೆಬ್ರಿಟಿಗಳಿಗೆ ಹುಡುಗಿಯರನ್ನು ಕಳ್ಳಸಾಗಣೆ ಮಾಡುತ್ತಿದ್ದ. ಇಂಥ ಎಪ್‌ಸ್ಟೀನ್ ಜೊತೆ ಟ್ರಂಪ್‌ಗೆ ದೀರ್ಘಕಾಲದ ಒಡನಾಟ ಇತ್ತು.

ಅಕ್ರಮ ದಂಧೆ ಪ್ರಕರಣ ಹೊರಗೆ ಬರುತ್ತಿದ್ದಂತೆ 2019 ರ ಜುಲೈ 6 ರಲ್ಲಿ ಎಪ್‌ಸ್ಟೀನ್‌ನನ್ನು ಬಂಧಿಸಲಾಗಿತ್ತು. ನ್ಯೂಯಾರ್ಕ್ ಜೈಲಿನಲ್ಲಿರುವಾಗಲೇ ಆಗಸ್ಟ್‌ 10 ರಂದು ಈತ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ. ಬಂಧನಕ್ಕೆ ಒಳಗಾದ ಒಂದು ತಿಂಗಳ ಒಳಗಡೆ ಈತ ಸಾವನ್ನಪ್ಪಿದ್ದು ವ್ಯಾಪಕ ಚರ್ಚೆ, ಅನುಮಾನ ಎದ್ದಿತ್ತು. ಎಪ್‌ಸ್ಟೀನ್ ಸಾವಿನ ಹಿಂದೆ ಟ್ರಂಪ್ (Donald Trump) ಕೈವಾಡ ಇದೆ ಎಂದಿದ್ದ ಡೆಮಾಕ್ರೆಟಿಕ್ ಸದಸ್ಯರು, ತನಿಖೆ ನಡೆದರೆ ಟ್ರಂಪ್ ಪಾತ್ರ ಹೊರ ಬರುತ್ತದೆ ಎಂದಿದ್ದರು.

Share This Article