ರಾಜ್ಯದಲ್ಲಿ ಪಟ್ಟಾಭದ್ರ ಹಿತಾಸಕ್ತಿಗಳಿಂದ ಗೊಂದಲ ಸೃಷ್ಟಿ: ಕೆ.ಎಸ್ ಈಶ್ವರಪ್ಪ

Public TV
2 Min Read

ಶಿವಮೊಗ್ಗ: ರಾಜ್ಯದಲ್ಲಿ ಕೆಲವು ಪಟ್ಟಾಭದ್ರ ಹಿತಾಸಕ್ತಿಗಳು ಗೊಂದಲ ಸೃಷ್ಟಿ ಮಾಡುವ ಪ್ರಯತ್ನ ನಡೆಸುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಇಎಸ್ ಅವರ ಪುಂಡಾಟಿಕೆ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸವನ್ನು ಖಂಡಿಸುತ್ತೇನೆ. ಈ ಬಗ್ಗೆ ಬೇರೆ ಬೇರೆ ರೀತಿಯ ಕುತಂತ್ರ ನಡೆಯುತ್ತಿದೆ. ಅದನ್ನು ನಿಭಾಯಿಸುವ ಶಕ್ತಿ ಗೃಹ ಸಚಿವರಿಗೆ ಇದೆ. ರಾಜ್ಯದಲ್ಲಿ ವಿದ್ವಂಸಕಾರಿ ನಡೆಸುತ್ತಿರುವ ಕೃತ್ಯಕ್ಕೆ ಸರಕಾರ ಸರಿಯಾದ ಉತ್ತರ ಕೊಡುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ತಿಳಿಸಿದರು.

ಸಿ.ಟಿ.ರವಿ ಅವರಿಗೆ ಡಿಕೆಶಿ ಲೂಟಿ ರವಿ ಎಂದು ಹೇಳಿಕೆ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿ ಅವರು ತಿಹಾರ್ ಜೈಲಿಗೆ ಹೋಗಿದ್ದರು. ನೀವು ತಿಹಾರ್ ಜೈಲಿಗೆ ಏಕೆ ಹೋಗಿದ್ದೀರಿ ಎನ್ನುವುದನ್ನು ಸ್ಪಷ್ಟವಾಗಿ ಹೇಳಬೇಕು. ಯಾವುದೇ ಕೇಸ್ ಇಲ್ಲದ ಸಿ.ಟಿ.ರವಿಯನ್ನು ಲೂಟಿ ರವಿ ಎಂದು ಕರೆದಿದ್ದೀರಾ, ನೀವು ಈಗಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಸರ್ಕಾರದಲ್ಲಿ ಸಮಸ್ಯೆ ಇದ್ದರೆ ಟೀಕೆ ಮಾಡಿ ಅದಕ್ಕೆ ಉತ್ತರ ಕೊಡುತ್ತೇವೆ. ಪಕ್ಷದಲ್ಲಿ ಗೊಂದಲ ಇದ್ದರೆ ಅದನ್ನು ಟೀಕೆ ಮಾಡಬಹುದು. ಆದರೆ ವೈಯಕ್ತಿಕವಾಗಿ ಸಿ.ಟಿ.ರವಿ ವಿರುದ್ಧ ಮಾತನಾಡಿದ್ದು, ಬಿಪಿಯ ಕಾರ್ಯಕರ್ತರಿಗೆ ನೋವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: 10 ಲಕ್ಷ ರೂ. ವರದಕ್ಷಿಣೆ ಕೇಳಿದ ವರನಿಗೆ ಮದುವೆ ಮನೆಯಲ್ಲೇ ಬಿತ್ತು ಗುಸಾ

ಈ ಸರ್ಕಾರ ಬಿಟ್ ಕಾಯಿನ್, 40% ಸರ್ಕಾರ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬರಿ ಬಾಯಿಯಲ್ಲಿ ಹೇಳೋದನ್ನು ಬಿಟ್ಟು, ವಿಧಾನಸಭೆಯಲ್ಲಿ ಚರ್ಚೆಗೆ ಬನ್ನಿ. ಅಧಿವೇಶನ ಆರಂಭವಾಗಿ ಒಂದು ವಾರ ಕಳೆಯಿತು. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಬೇಕಿತ್ತು. ಇವರು ಬಿಟ್ ಕಾಯಿನ್, 40% ಎಂದು ಹೇಳ್ತಾನೆ ಇರುತ್ತಾರೆ. ಯಾವುದನ್ನು ನಿಖರವಾಗಿ ಆಗಿ ಹೇಳುತ್ತಿಲ್ಲ. ದಾಖಲೆ ಸಮೇತ ಕೊಟ್ಟರೆ ಅದಕ್ಕೆ ಎಲ್ಲಿ ಉತ್ತರಿಸಬೇಕೋ ಅಲ್ಲಿ ಉತ್ತರ ಕೊಡುತ್ತೇವೆ ಎಂದರು. ಇದನ್ನೂ ಓದಿ: ಸಾವರ್ಕರ್‌ರನ್ನು ಭಾರತದಲ್ಲಿ ಬಿಟ್ಟರೆ ನಾವು ದೇಶ ಬಿಡಬೇಕಾಗುತ್ತೆ ಅನ್ನೋದು ಬ್ರಿಟಿಷರಿಗೆ ಗೊತ್ತಿತ್ತು: ಬೊಮ್ಮಾಯಿ

ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯದಲ್ಲಿ ಏನು ರಾಮರಾಜ್ಯ ಇತ್ತಾ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಲ್ಲಿಯೂ ಒಂದೇ ಒಂದು ಗಲಾಟೆ ಆಗಲಿಲ್ಲವಾ. ರಾಮನಗರದಲ್ಲಿ ಹಿಂದೂ ಮುಸ್ಲಿಂ ಗಲಾಟೆ ಮಾಡಿ ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಇಳಿಸಿದ್ದು ಕಾಂಗ್ರೆಸ್ ಸರ್ಕಾರವೇ ಆಗಿತ್ತು ಎಂದು ವ್ಯಂಗ್ಯವಾಡಿದರು.

Share This Article
Leave a Comment

Leave a Reply

Your email address will not be published. Required fields are marked *