-ಬಕೆಟ್ ಹಿಡಿಯೋರಿಗೆ ಬಿಜೆಪಿಯಲ್ಲಿ ಟಿಕೆಟ್
ಕೊಪ್ಪಳ: ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಅವರಿಗೆ ಮೆದುಳಿಗೂ ಹಾಗೂ ನಾಲಿಗೆಗೂ ಕನೆಕ್ಷನ್ ಇಲ್ಲ. ಸಿದ್ದರಾಮಯ್ಯ ಕೂದಲಿಗೆ ಅವರು ಸಮವಲ್ಲ ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿಗೆ ನೆಗೆದು ಬೀಳಲಿ ಎನ್ನುವ ಈಶ್ವರಪ್ಪ ಅವರ ಹೇಳಿಕೆಗೆ ತಿರುಗೇಟು ಕೊಟ್ಟ ತಂಗಡಗಿ ಅವರು, ಸಿಎಂಗೆ ಈ ರೀತಿ ಹೇಳೋದು ಸರಿ ಅಲ್ಲ. ಈಶ್ವರಪ್ಪರನ್ನ ಬಿಜೆಪಿಯವರು ಹೇಗೆ ನಾಯಕರು ಎಂದು ಒಪ್ಪಿಕೊಂಡಿದ್ದಾರೆ ಅನ್ನೋದು ತಿಳಿಯುತ್ತಿಲ್ಲ. ಅದೇನೋ ಒಂದು ಗಾದೆ ಇದೆಯಲ್ಲಾ, `ತಿಮ್ಮ ಸಾಯಲಿ ತಿಮ್ಮ ಸಾಯಲಿ ಅಂದರೆ ತಮ್ಮ ಸತ್ತನಂತೆ’ ಹಾಗಾಯ್ತು ಇವರ ವಿಚಾರ. ಈಶ್ವರಪ್ಪರ ಮಾತಿನಿಂದ ಪಕ್ಷಕ್ಕೆ ಎಫೆಕ್ಟ್ ಆಗತ್ತೆ. ಈಶ್ವರಪ್ಪನವರೂ ಮಾತನಾಡಬೇಕಾದರೆ ಅವರ ಸ್ಥಾನ ಮಾನ ನೋಡಿ ಮಾತನಾಡಬೇಕು. ಅವರ ಮೆದುಳಿಗೆ-ನಾಲಿಗೆಗೆ ಕನೆಕ್ಷನ್ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:ಚುನಾವಣೆ ಮುಗಿದ ಬಳಿಕ ಕುಮಾರಸ್ವಾಮಿ ನೆಗೆದು ಬಿಳ್ತಾರೆ: ಈಶ್ವರಪ್ಪ
ಹಾಗೆಯೇ ಸಿದ್ದರಾಮಯ್ಯ ಕುರುಬರ ನಾಯಕ ಅಲ್ಲ ಎಂದು ಹೇಳಿದ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಕೂದಲಿಗೆ ಈಶ್ವರಪ್ಪ ಸಮವಲ್ಲ, ಸಿದ್ದರಾಮಯ್ಯರಂತಹ ಲೀಡರ್ ಪಡೆದುಕೊಂಡಿದ್ದಕ್ಕೆ ನಾವು ಹೆಮ್ಮೆ ಪಡುತ್ತೇವೆ. ಸಿದ್ದರಾಮಯ್ಯ ಬ್ಯಾಕ್ವರ್ಡ್ ಲೀಡರ್ ಅಂತಾರೆ, ಆದ್ರೆ ಸಿದ್ದರಾಮಯ್ಯ ಬ್ಯಾಕ್ವರ್ಡ್ ಲೀಡರ್ ಅಲ್ಲ. ಎಲ್ಲ ಸಮುದಾಯದ ಲೀಡರ್. ಕುರುಬರ ಬಗ್ಗೆ ಮತಾಡೋಕೆ ಈಶ್ವರಪ್ಪರಿಗೆ ಹಕ್ಕಿಲ್ಲ. ಸಮುದಾಯದ ಬಗ್ಗೆ ಮಾತಾಡಬೇಕಾದ್ರೆ ಈಶ್ವರಪ್ಪ ಪಕ್ಷ ಬಿಟ್ಟು ಬರಬೇಕು. ತಮ್ಮ ಸ್ವಾರ್ಥಕ್ಕೆ ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಕಟ್ಟಿದ್ದಾರೆ. ಸಿದ್ದರಾಮಯ್ಯರ ಬಗ್ಗೆ ಮಾತಾಡೋಕೆ ಈಶ್ವರಪ್ಪನವರಿಗೆ ಹಕ್ಕಿಲ್ಲ ಎಂದು ಕಿಡಿಕಾರಿದರು.
ಅಷ್ಟೇ ಅಲ್ಲದೆ ಬಿಜೆಪಿಯಲ್ಲಿ ಬಕೆಟ್ ಹಿಡಿಯೋರಿಗೆ ಮಾತ್ರ ಟಿಕೆಟ್ ನೀಡಲಾಗುತ್ತೆ. ಬಿಜೆಪಿಯಲ್ಲಿ ಸಂವಿಧಾನಕ್ಕೆ ಬೆಂಕಿ ಹಚ್ತೀನಿ ಅನ್ನೋರಿಗೆ ಟಿಕೆಟ್ ಕೊಡ್ತಾರೆ. ಗಿಮಿಕ್ ಮಾಡೋದು, ಮೋಸ ಮಾಡೋದು, ಸುಳ್ಳ ಹೇಳೊದು ಬಿಜೆಪಿಯ ಕೆಲಸ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹರಿಹಾಯ್ದರು.