ಈಶ್ವರಪ್ಪ ಒಬ್ಬ ಮಹಾ ಸುಳ್ಳುಗಾರ: ಸಚಿವ ತಂಗಡಗಿ ವಾಗ್ದಾಳಿ

Public TV
2 Min Read

ಕೊಪ್ಪಳ: ಡಿ.ಕೆ.ಶಿವಕುಮಾರ್‌ (D.K.Shivakumar) ಜೈಲಿಗೆ ಹೋಗುತ್ತಾರೆ ಎಂದು ಹೇಳಲು ಈಶ್ವರಪ್ಪ ನ್ಯಾಯಾಧೀಶರಾ ಎಂದು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ವಾಗ್ದಾಳಿ ನಡೆಸಿದರು.

ಕೊಪ್ಪಳದ (Koppala) ಕಾರಟಗಿ ಪಟ್ಟಣದಲ್ಲಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಈಶ್ವರಪ್ಪ ಮೊದಲು ತಮ್ಮ ಭವಿಷ್ಯ ನೋಡಿಕೊಳ್ಳಲಿ. ಮತ್ತೊಬ್ಬರ ಭವಿಷ್ಯ ನಂತರ ಹೇಳಲಿ.‌ ಈಶ್ವರಪ್ಪ ದೊಡ್ಡ ಸುಳ್ಳುಗಾರ. ನಮ್ಮ ಕ್ಷೇತ್ರಕ್ಕೆ ಬಂದಾಗಲೇ ತಮ್ಮ ಕಾರ್ಯಕರ್ತರಿಗೆ ‘ಸುಳ್ಳ- ಪೊಳ್ಳು ಹೇಳಿ ರಾಜಕಾರಣ ಮಾಡಬೇಕು. ವೋಟ್ ಹಾಕಿಸಿಕೊಳ್ಳಬೇಕು’ ಎಂದು ಹೇಳಿದ್ದವನು ಅವ. ಅವರಿಂದ ನಾವು ಕಲಿಯಬೇಕಿಲ್ಲ ಎಂದು ಏಕವಚನದಲ್ಲೇ ತಿರುಗೇಟು ನೀಡಿದರು. ಇದನ್ನೂ ಓದಿ: ಜೂನ್ ಒಳಗೆ ಸಚಿವ ಸ್ಥಾನ ಕೊಡ್ತೀನಯ್ಯ ಅಂತ ಸಿಎಂ ಹೇಳಿದ್ದಾರೆ: ಶಾಸಕ ಪುಟ್ಟರಂಗಶೆಟ್ಟಿ

ಬಿಜೆಪಿ ಈಗ ಮುಳುಗುವ ಹಡಗು. ಬಿಜೆಪಿಗೆ ಕಾಂಗ್ರೆಸ್ ಎದುರಿಸುವ ಶಕ್ತಿ ಇಲ್ಲ. ಹೀಗಾಗಿ ಬಿಜೆಯಲ್ಲಿದ್ದವರು ನಮ್ಮ ಪಕ್ಷ ಸೇರುತ್ತಿದ್ದಾರೆ. ಹೀಗಾಗಿ ಬೇರೆ ಮೂಲದಿಂದ ನಮ್ಮನ್ನು ಕುಗ್ಗಿಸಲು ಬಿಜೆಪಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಹಿಂದೆ ನಮ್ಮ ಅಧ್ಯಕ್ಷರನ್ನು ಅರೆಸ್ಟ್ ಮಾಡಿಸಿದ್ದ ಬಿಜೆಪಿ 68 ಸ್ಥಾನಕ್ಕೆ ಬಂದಿದೆ. ಈಗ ಮತ್ತೇ ಮುಟ್ಟಿದರೆ 38 ಬರೋದು ಗ್ಯಾರಂಟಿ ಎಂದು ವಾಗ್ದಾಳಿ ನಡೆಸಿದರು.

ಸಿಬಿಐ ಏಕೆ ಬಿಜೆಪಿಗರ ಮನೆ ಮೇಲೆ ದಾಳಿ ಮಾಡುವುದಿಲ್ಲ. ಸಿಬಿಐಗೆ ಬೇರೆ ಪಕ್ಷದವರು ಮಾತ್ರ ಕಾಣುತ್ತಾರೆ. ಬಿಜೆಪಿಗರ ಮನೆ ಮೇಲೆ ರೇಡ್ ಮಾಡಿದಾಗ ಮಾತ್ರ ಅವರ ಭ್ರಷ್ಟಾಚಾರದ ಬಗ್ಗೆಯೂ ಗೊತ್ತಾಗೋದು. ಇದುವರೆಗೂ ಬಿಜೆಪಿಯವರ ಮನೆ ಮೇಲೆ ರೇಡ್ ಮಾಡಿದ ಉದಾಹರಣೆ ಇಲ್ಲ. ಕೇಂದ್ರ ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಇದು ಪ್ರಜಾಪ್ರಭುತ್ವ. ನಮ್ಮನ್ನು ಹೆದರಿಸುವ ಕೆಲಸ ಮಾಡಿದರೆ ನಾವು ಹೆದರುವುದಿಲ್ಲ. ಇಂಥ ಬಹಳ ಜನರನ್ನು ನಾವು ನೋಡಿದ್ದೇವೆ. ಇಂಥವರಿಗೆ ನಮ್ಮ ದೇಶದ ಜನರು ಅವಕಾಶ ಕೊಡುವುದಿಲ್ಲ. ಇದಕ್ಕೆ ಮತದಾರರೇ ಉತ್ತರ ಕೊಡುತ್ತಾರೆ ಎಂದರು. ಇದನ್ನೂ ಓದಿ: ಪರಶುರಾಮನ ಮೂರ್ತಿಯ ಕಂಚಿನ ಲೇಪನ ಹರಿದ ಕಾಂಗ್ರೆಸ್ – ಕಾರ್ಕಳ ನಗರ ಠಾಣೆಗೆ ಬಿಜೆಪಿ ದೂರು

ರಾಜ್ಯೋತ್ಸವ ಪ್ರಶಸ್ತಿ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ.‌ ಈಗಾಗಲೇ ಪಟ್ಟಿ ಸಿದ್ಧಗೊಳ್ಳುತ್ತಿದೆ.‌ ಸಿಎಂ ಹಾಗೂ ಸಮಿತಿ ನೇತೃತ್ವದಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಶಾಸಕರಿಂದ ಶಿಫಾರಸು ಬರುವುದು ಸಾಮಾನ್ಯ. ‌ಕೊನೆಯಲ್ಲಿ ಅರ್ಹತೆ ಆಧಾರದ ಮೇಲೆಯೇ ನಾವು ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಡಿಸಿಎಂ ಡಿಕೆಶಿ ಶಾಸಕರಿಗೆ ವಾರ್ನಿಂಗ್ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಪಕ್ಷದ ಹೈಕಮಾಂಡ್ ಶಕ್ತಿಯುತವಾಗಿದೆ.‌ ಬಂದ ಸೂಚನೆಯನ್ನು ನಾವು ಚಾಚೂ ತಪ್ಪದೆ ಪಾಲನೆ ಮಾಡುತ್ತೇವೆ. ಯಾರು ಕೂಡಾ ಹೇಳಿಕೆ ಕೊಡಬೇಡಿ ಎಂದು ಎಲ್ಲರಿಗೂ ಸೂಚನೆ ನೀಡಿದ್ದಾರೆ. ಇದರಲ್ಲಿ ತಪ್ಪೇನಿದೆ? ಒಂದು ಸಿದ್ದಾಂತ, ಶಿಸ್ತು ಇರುವ ಪಕ್ಷ ನಮ್ಮದು.‌ ಅಧಿಕಾರ ಹಂಚಿಕೆ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಮ್ಮಲ್ಲಿ ಯಾವುದೇ ಬಣ ಇಲ್ಲ. ನಾವೆಲ್ಲರೂ ಪ್ರೀತಿ ವಿಶ್ವಾಸದಿಂದ ಇದ್ದೇವೆ ಎಂದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್