ಪ್ಯಾಡಿಂಗ್ ಧರಿಸುವುದರ ಹಿಂದಿನ ಕಾರಣ ಬಿಚ್ಚಿಟ್ಟ ‘ನಿನ್ನಿಂದಲೇ’ ಹೀರೋಯಿನ್

Public TV
2 Min Read

ಮುಂಬೈ: ನನಗೆ ನನ್ನ ತೆಳ್ಳಗಿನ ದೇಹ ನೋಡಿ ತುಂಬಾ ನಾಚಿಕೆಯಾಗುತ್ತಿತ್ತು. ಅದಕ್ಕೆ ನಾನು ಹೆಚ್ಚು ಪ್ಯಾಡಿಂಗ್ ಧರಿಸುತ್ತೇನೆ ಎಂದು ದಕ್ಷಿಣ ಭಾರತ ನಟಿ ಎರಿಕಾ ಫೆರ್ನಾಂಡಿಸ್ ತಮ್ಮ ದೇಹದ ಮೇಲೆ ಬರುತ್ತಿದ್ದ ಕೆಟ್ಟ ಕಾಮೆಂಟ್ ಕುರಿತು ಮಾತನಾಡಿದರು.

ಎರಿಕಾ 2014 ರಲ್ಲಿ ಬಿಡುಗಡೆಯಾದ ದಿವಂಗತ ನಟ ಪುನೀತ್ ರಾಜ್‍ಕುಮಾರ್ ಅವರ ‘ನಿನ್ನಿಂದಲೇ’ ಸಿನಿಮಾ ಮೂಲಕ ಸಿನಿಲೋಕಕ್ಕೆ ಪಾದಾರ್ಪಣೆಯನ್ನು ಮಾಡಿದ್ದರು. ಆದರೆ ಎರಿಕಾ ತುಂಬಾ ತೆಳ್ಳಗಿದ್ದ ಕಾರಣ ಸಿನಿಮಾ ಆಫರ್‌ಗಳು ಅಷ್ಟು ಬರುತ್ತಿರಲಿಲ್ಲ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ತುಂಬಾ ತೆಳ್ಳಗೆ ಇರುವುದಕ್ಕೆ ನಾಚಿಕೆಯಾಗುತ್ತೆ. ಅದಕ್ಕೆ ನಾನು ಹೆಚ್ಚು ಪ್ಯಾಡಿಂಗ್ ಧರಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿಕೊಂಡರು. ಇದನ್ನೂ ಓದಿ: ಅಬುಧಾಬಿಯಲ್ಲಿ 44.75 ಕೋಟಿ ರೂ. ಲಾಟರಿ ಗೆದ್ದ ಭಾರತೀಯ ಮಹಿಳೆ!

ನಾನು ತೆಳ್ಳಗಿರುವುದನ್ನು ನೋಡಿದ ಜನರು ಕೆಟ್ಟದಾಗಿ ಕಾಮೆಂಟ್ ಮಾಡಿರುವುದನ್ನು ನಾನು ನೋಡಿದ್ದೇನೆ. ಇನ್ನೂ ಕೆಲವರು ನೇರವಾಗಿ ನನ್ನ ದೇಹದ ಬಗ್ಗೆ ಹೇಳುವುದನ್ನು ಕೇಳಿಸಿಕೊಂಡಾಗ ನನಗೆ ತುಂಬಾ ನೋವಾಗುತ್ತಿತ್ತು ಎಂದು ಹೇಳಿದರು.

ಈ ವಿಚಾರವಾಗಿ ದಕ್ಷಿಣ ಭಾರತದ ಹಲವು ನಟಿಯರು ನನಗೆ ಸಾಥ್ ನೀಡಿದ್ದಾರೆ. ನನ್ನನ್ನು ಉತ್ತೇಜಿಸಿದ್ದಾರೆ. ನನ್ನ ದೇಹದ ಬಗ್ಗೆ ಇರುವ ನೆಗೆಟಿವ್ ಅಂಶಗಳನ್ನು ತೆಗೆದು ಹಾಕಿ ಪಾಸಿಟಿವ್ ಆಗಿ ಇರಲು ತುಂಬಾ ಸಹಾಯ ಮಾಡಿದ್ದಾರೆ. ಈ ಹಿಂದೆ ನನ್ನ ದೇಹದ ಬಗ್ಗೆ ನನಗೆ ಕೆಟ್ಟ ಅನುಭಾವಗಳಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗ ನಾನು ಹೆಚ್ಚು ಪಾಸಿಟಿವ್ ಆಗಿದ್ದೇನೆ. ಅಲ್ಲದೆ ಇಂಡಸ್ಟ್ರಿ ಸಹ ಬದಲಾಗಿದೆ ಎಂಬುದಕ್ಕೆ ಖುಷಿಯಾಗಿದೆ. ವ್ಯಕ್ತಿಯ ಪ್ರತಿಭೆಯನ್ನು ಕೇವಲ ದೇಹದ ಮೇಲೆ ತೀರ್ಮಾನಿಸುತ್ತಿದ್ದ ಜನರ ಮನಸ್ಥಿತಿ ಸಹ ಬದಲಾಗಿರುವುದು ತುಂಬಾ ಖುಷಿಯಾಗಿದೆ ಎಂದು ವಿವರಿಸಿದರು. ಇದೇ ವೇಳೆ ಕಿರುತೆರೆಗೆ ಮತ್ತೆ ಹೋಗಲು ಇಷ್ಟವಿದೆಯೇ ಎಂದು ಕೇಳಿದಾಗ, ನಾನು ಎಂದಿಗೂ ಕೆಲಸದ ನಡುವೆ ವ್ಯತ್ಯಾಸವನ್ನು ಹೊಂದಿಲ್ಲ. ಕಿರುತೆರೆಗೆ ಹೋದರೆ ಮತ್ತೆ ಸಿನಿಮಾಗೆ ಬರಲಾಗುವುದಿಲ್ಲ ಎಂದು ನಾನು ಆತಂಕಗೊಂಡಿಲ್ಲ. ನನಗೆ ಎಲ್ಲವೂ ಕೆಲಸವಾಗಿದೆ ಎಂದರು. ಇದನ್ನೂ ಓದಿ: ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ವಿವಾಹಿತನಿಗೆ 10 ವರ್ಷ ಜೈಲು, 25 ಸಾವಿರ ದಂಡ

ಎರಿಕಾ ಕನ್ನಡದಲ್ಲಿ ಪುನೀತ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿದ್ದು, ನಂತರ ಹಿಂದಿ ಕಿರುತೆರೆಗೆ ಹಾರಿದ್ದರು. ನಂತರ ಅವರಿಗೆ ‘ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ’ ಸಿನಿಮಾ ಬಾಲಿವುಡ್ ನಲ್ಲಿ ಹೆಸರು ತಂದುಕೊಟ್ಟಿದ್ದು, ಪ್ರಸ್ತುತ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *