ಬೆಂಗಳೂರು: ಬ್ರ್ಯಾಂಡ್ ಫ್ಯಾಕ್ಟರಿಯಲ್ಲಿ ಐದು ದಿನಗಳ ಆಫರ್ ನಲ್ಲಿ ಸುಲಿಗೆ ಶುರುವಾಗಿದೆ. ಬ್ರ್ಯಾಂಡ್ ಫ್ಯಾಕ್ಟರಿ ಒಳಗೆ ಎಂಟ್ರಿ ಪಡೆಯೋಕೂ 100 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಈ ಮೂಲಕ ಬ್ರ್ಯಾಂಡ್ ಫ್ಯಾಕ್ಟರಿ ಹೊಸದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದೆ.
ಇದು ಸಾರ್ವಜನಿಕರು ಮತ್ತು ಗ್ರಾಹಕರ ಆಕ್ಷೇಪಕ್ಕೆ ಕಾರಣವಾಗಿದೆ. ಅಲ್ಲದೆ ಎಂಟ್ರಿ ಫೀಸ್ ಕೊಟ್ಟು ಹೋಗೋಕೆ ಇದೇನು ಎಂಟರ್ ಟೈನ್ ಈವೆಂಟಾ..? ಇಷ್ಟ ಆದ್ರೆ ಪರ್ಚೇಸ್ ಮಾಡ್ತೀವಿ. ಇಲ್ಲದಿದ್ರೆ ವಾಪಸ್ ಬರ್ತೀವಿ. ದುಡ್ಡು ಕೊಟ್ಟು ಒಳಗೆ ಹೋಗಿ ನಮಗೆ ಯಾವುದೂ ಇಷ್ಟ ಆಗದಿದ್ರೆ ಏನ್ಮಾಡೋದು ಅಂತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 18ರಿಂದ 31ರ ವರೆಗೆ ಇಲ್ಲಿಗೆ ಬಂದು ಬಿಲ್ ಮಾಡಿದ್ದಲ್ಲಿ 100 ರೂ. ಕಡಿತ ಮಾಡುತ್ತೇವೆ. ಆದ್ರೆ ಮಿನಿಮಮ್ 5 ಸಾವಿರ ರೂ. ವಸ್ತುವನ್ನು ಖರೀದಿ ಮಾಡಲೇಬೇಕು. ನಿಮ್ಮ ಬಳಿ 2 ಸಾವಿರ ಇದ್ದು, 5 ಸಾವಿರ ಪರ್ಚೇಸ್ ಮಾಡಿದ್ರೆ ಫ್ಲ್ಯಾಟ್ ಶೇ.60ರಷ್ಟು ಕಡಿತ ಆಗುತ್ತದೆ. ಇಲ್ಲಿ ಎಲ್ಲಾ ರೀತಿಯ ಬ್ರ್ಯಾಂಡ್ ಗಳು ಇವೆ. ಈ ಆಫರನ್ನು ನಾವು ವರ್ಷಕ್ಕೆ 2 ಬಾರಿ ಮಾಡ್ತೀವಿ ಅಂತ ಸಿಬ್ಬಂದಿಯೊಬ್ಬರು ವಿವರಿಸಿದ್ದಾರೆ.
ಒಂದು ಪಾಸ್ ತಗೊಂಡ್ರೆ 5 ದಿನಗಳ ವ್ಯಾಲಿಡ್ ಇದೆಯಾ ಅಂತ ಗ್ರಾಹಕರೊಬ್ಬರು ಕೇಳಿದಾಗ, ಇಲ್ಲ ಡೈಲಿ ಪಾಸ್ ಇದಾಗಿದ್ದು, ಒಂದು ದಿನಕ್ಕೆ ಮಾತ್ರ ಸೀಮಿತವಾಗಿರುತ್ತದೆ ಅಂತ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv