ಕರ್ಣನಿಗೆ ಗ್ರೀನ್ ಸಿಗ್ನಲ್ – ಭವ್ಯಾ, ನಮ್ರತಾ, ಕಿರಣ್ ರಾಜ್ ತ್ರಿವಳಿ ಆಟ

Public TV
2 Min Read

ಜೀ ಕನ್ನಡ ವಾಹಿನಿಯ (Zee Kannada Serial) ಬಹುನಿರೀಕ್ಷಿತ ಮತ್ತು ಬಿಡುಗಡೆಗೆ ಮೊದಲೇ ಅತೀ ಸದ್ದು ಮಾಡಿದ ಧಾರಾವಾಹಿ ಕರ್ಣ. ಆದರೆ ಹುಟ್ಟುವ ಮೊದಲೇ ಶಾಪಗ್ರಸ್ತನಾದ ಈ ‘ಕರ್ಣ’ ಈಗ ಶಾಪಮುಕ್ತನಾಗಿದ್ದಾನೆ. ಎಲ್ಲಾ ಅಡೆತಡೆಗಳನ್ನು ಎದುರಿಸಿ ಕೊಟ್ಟ ಮಾತಿಗೆ ತಪ್ಪದೇ ಮನರಂಜಿಸಲು ʻಕರ್ಣʼ (Karna Serial) ಇದೇ 3 ಜುಲೈರಿಂದ ಬರಲಿದ್ದಾನೆ.

ʻಕರ್ಣʼ ಧಾರಾವಾಹಿಯ ಮೊದಲ ಪ್ರೊಮೊ ಬಿಡುಗಡೆ ಆದ ಸ್ವಲ್ಪ ಹೊತ್ತಿಗೆ ಸಖತ್‌ ವೈರಲ್ ಆಗಿದ್ದು ಕನ್ನಡಿಗರ ಮನಗೆದ್ದಿದೆ. ಸಿನೆಮಾಟೋಗ್ರಫಿ, ನಿರ್ದೇಶನ, ಕಿರಣ್ ರಾಜ್ ನಟನೆ ಬಗ್ಗೆ ಪ್ರೇಕ್ಷಕರು ಅತಿಯಾದ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಸರ್ಪ್ರೈಸ್ ಎಂಬಂತೆ ವಾಹಿನಿ ಭವ್ಯ ಗೌಡ (Bhavya Gowda) -ಕಿರಣ್ ರಾಜ್ ಹಾಡನ್ನು ಬಿಟ್ಟಿದ್ದು ಇವರಿಬ್ಬರ ಕೆಮಿಸ್ಟ್ರಿ ಪ್ರೇಕ್ಷಕರ ಮನದಲ್ಲಿ ಕಚಗುಳಿ ಎಬ್ಬಿಸಿದೆ. ಅಷ್ಟೇ ಅಲ್ಲದೇ ಪ್ರೊಮೊ ಮತ್ತು ಹಾಡು ಎರಡೂ ಸಖತ್ ಆಗಿ ಮೂಡಿ ಬಂದಿದ್ದು ಧಾರಾವಾಹಿಯನ್ನು ನೋಡಲು ಜನರು ಹಾತೊರೆಯುತ್ತಿದ್ದಾರೆ.

ಇನ್ನೂ ವರುಷಗಳ ನಟ ಕಿರಣ್ ರಾಜ್ ಮರಳಿ ಕಿರುತೆರೆಗೆ ಬರುತ್ತಿರುವುದು ಅವರ ಅಭಿಮಾನಿಗಳಲ್ಲಿ ಉತ್ಸುಕತೆ ಹೆಚ್ಚಿಸಿದೆ. ಅಷ್ಟೇ ಅಲ್ಲದೇ ಕಿರುತೆರೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಭವ್ಯ ಗೌಡ ಮತ್ತು ನಮ್ರತಾ ಗೌಡ (Namratha Gowda) ಅವರು ಕಿರಣ್ ರಾಜ್ ಅವರಿಗೆ ಜೋಡಿಯಾಗಿ ನಟಿಸಲಿದ್ದಾರೆ. ಈ ಫ್ರೆಶ್ ಜೋಡಿಯ ಮೋಡಿ ಹೇಗಿರಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಕರ್ಣ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದು ಅಲ್ಲದೇ ಕಾಮೆಂಟ್ ಸೆಕ್ಷನ್‌ಗಳು ಪಾಸಿಟಿವ್ ಕಾಮೆಂಟ್‌ಗಳಿಂದ ತುಂಬಿವೆ. ಶ್ರುತಿ ನಾಯ್ಡು ಪ್ರೊಡ್ಯೂಸ್ ಮಾಡುತ್ತಿರುವ ಈ ಧಾರಾವಾಹಿಯಲ್ಲಿ ಹಿರಿಯ ನಟರಾದ ಅಶೋಕ್, ನಾಗಾಭರಣ ಸೇರಿ ಹಲವಾರು ದಿಗ್ಗಜರು ಅಭಿನಯಿಸಿದ್ದಾರೆ.

ಅನಾಥವಾಗಿ ಬಿದ್ದಿದ್ದ ತಾತನಿಗೆ ಕೊಟ್ಟ ಮಾತಿನಂತೆ ದೊಡ್ಡವನಾದ ಮೇಲೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞನಾಗಿ ತಾತ ಕಟ್ಟಿಸಿದ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಾನೆ. ಅಷ್ಟೇ ಅಲ್ಲದೇ ಯಾವ ತಾಯಿಯು ಮಗುವನ್ನು ಕಳೆದುಕೊಳ್ಳಬಾರದು ಮತ್ತು ಯಾವ ಮಗುವು ಅಮ್ಮನಿಲ್ಲದ ತಬ್ಬಲಿಯಾಗಬಾರದು ಎಂಬುದು ಇವನ ಸಿದ್ದಾಂತ. ಸದಾ ಬಡವರ ಸೇವೆಗೆ ತುಡಿಯುವ ಈ ನಿಷ್ಕಲ್ಮಶ ಮನಸ್ಸಿನ ಕರ್ಣನಿಗೆ ಮನೆಯಲ್ಲಿ ಸಿಕ್ಕಿದ್ದು ಮಾತ್ರ ತಿರಸ್ಕಾರ. ಎಲ್ಲಾ ಆಸ್ತಿಯೂ ತನ್ನ ಹೆಸರಿನಲ್ಲೇ ಇದ್ದರೂ ಕರ್ಣ ಬಯಸುತ್ತಿರುವುದು ಮಾತ್ರ ಅಪ್ಪನ ಪ್ರೀತಿ, ಮಾಯೆಯವರ ವಾತ್ಸಲ್ಯದ ಅಪ್ಪುಗೆ. ಅಜ್ಜಿ ಬಿಟ್ಟು ಮನೆಯಲ್ಲಿರೋ ಎಲ್ಲರಿಗೂ ಕರ್ನನ್ನು ಕಂಡ್ರೆ ಅಷ್ಟಕಷ್ಟೇ. ಕರ್ಣನಿಗೆ ಮನೆಯವರ ಪ್ರೀತಿ ಸಿಗೋದು ಯಾವಾಗ? ಇನ್ನೇನು ಸದ್ಯದಲ್ಲೇ ನಿಮಗೆ ಸಿಗತ್ತೆ!

ನಿಷ್ಕಲ್ಮಶ ಮನಸ್ಸಿನ ಕರ್ಣನಿಗೆ ನಿಷ್ಕಲ್ಮಶ ಪ್ರೀತಿ, ಅಪ್ಪನ ಪ್ರೀತಿ, ಮನೆಯವರ ಒಪ್ಪಿಗೆಯ ಅಪ್ಪುಗೆ ಸಿಗುತ್ತಾ? ತಿಳ್ಕೊಳೋಕೆ ವೀಕ್ಷಿಸಿ ಕರ್ಣ ಇದೇ ಜುಲೈ 03 ರಿಂದ ರಾತ್ರಿ 8 ಗಂಟೆಗೆ.

Share This Article