ನಾವು ಶಾಶ್ವತವಾಗಿ ನೋವು ಅನುಭವಿಸುವ ಕಾಲ ಮುಗಿಯಿತು: ಉಗ್ರರ ವಿರುದ್ಧ ಮೋದಿ ಕಿಡಿ

Public TV
1 Min Read

ಲಕ್ನೋ: ಉಗ್ರರ ದಾಳಿಯನ್ನು ಸಹಿಸಿಕೊಂಡು ಕೂರುವ ಕಾಲ ಮುಗಿದು ಹೋಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಭಾರತದ ಮೇಲೆ ದಾಳಿ ನಡೆಸುವ ಉಗ್ರ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದ ಕೇಂದ್ರ ಕೈಗಾರಿಕಾ ರಕ್ಷಣಾ ಪಡೆಯ (ಸಿಐಎಸ್‍ಎಫ್) 50ನೇ ಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ಸಾಕು ಸಾಕಿನ್ನು. ನಾವು ಶಾಶ್ವತವಾಗಿ ನೋವು ಅನುಭವಿಸುತ್ತ ಕೂರುವ ಕಾಲ ಮುಗಿದು ಹೋಯಿತು ಎಂದು ಉರಿ ಹಾಗೂ ಪುಲ್ವಾಮಾ ದಾಳಿಯನ್ನು ಮೋದಿ ಪ್ರಸ್ತಾಪಿಸಿದರು.

ನೆರೆಯ ಶತ್ರು ರಾಷ್ಟ್ರ ಹಾಗೂ ದೇಶದಲ್ಲಿ ಸಂಚು ರೂಪಿಸುವ ಕೆಲವು ವೈರಿಗಳಿಗೆ ಹೊರಗಿನ ಶಕ್ತಿಗಳ ಸಹಕಾರ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಿಐಎಸ್‍ಎಫ್ ನಂತಹ ಭದ್ರತಾ ಪಡೆಗಳ ಪಾತ್ರ ಮಹತ್ವದ್ದಾಗಿದೆ. ನಮ್ಮೊಂದಿಗೆ ಶತ್ರು ದೇಶಗಳು ನೇರವಾಗಿ ಯುದ್ಧ ಮಾಡುವ ಸಾಮಥ್ರ್ಯ ಹೊಂದಿಲ್ಲ. ಹೀಗಾಗಿ ದೇಶದಲ್ಲಿರುವ ಶತ್ರುಗಳಿಗೆ ಕುಮ್ಮಕ್ಕು, ಸಹಕಾರ ನೀಡುತ್ತಿವೆ ಎಂದು ಪರೋಕ್ಷಾಗಿ ಪಾಕಿಸ್ತಾನವನ್ನು ಕುಟುಕಿದರು.

ಸಿಐಎಸ್‍ಎಫ್ ದೇಶದ ಜನರನ್ನು ರಕ್ಷಿಸುತ್ತಿದೆ. ಸುರಕ್ಷತೆಗೆ ಅನೇಕ ತಂತ್ರಗಳಿವೆ. ಅವು ಸಮಯಕ್ಕೆ ತಕ್ಕಂತೆ ಬದಲಾಗುತ್ತವೆ. ಹಾಗೇ ಸಿಐಎಸ್‍ಎಫ್ ವರ್ಷದಿಂದ ವರ್ಷಕ್ಕೆ ಅನೇಕ ರಕ್ಷಣಾ ತಂತ್ರಗಳನ್ನು ಬಳಿಸಿಕೊಂಡು ಬೆಳೆಯುತ್ತಿದೆ. ಒಬ್ಬ ವ್ಯಕ್ತಿಯ ರಕ್ಷಣೆ ಸುಲಭ; ಆದರೆ ಒಂದು ಸಂಸ್ಥೆಯ ರಕ್ಷಣೆ ಬಹಳ ಕಷ್ಟ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *