ಪಲ್ಲಕೆಲೆ: ನಾಯಕ ಹ್ಯಾರಿ ಬ್ರೂಕ್(Harry Brook) ಅವರ ಸ್ಫೋಟಕ ಶತಕದ ನೆರವಿನಿಂದ ಸೂಪರ್-8 ಪಾಕಿಸ್ತಾನದ (Pakistan) ವಿರುದ್ಧ ಇಂಗ್ಲೆಂಡ್ (England) ರೋಚಕ 2 ವಿಕೆಟ್‌ಗಳ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಪಾಕಿಸ್ತಾನ 9 ವಿಕೆಟ್ ನಷ್ಟಕ್ಕೆ 164 ರನ್ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಇನ್ನು 5 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್ ನಷ್ಟಕ್ಕೆ 166 ರನ್ ಹೊಡೆಯಿತು.
ಹಾಗೆ ನೋಡಿದರೆ ಇಂಗ್ಲೆಂಡ್ 58 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಸಂಕಷ್ಟದ ಸಮಯದಲ್ಲಿ ತಂಡಕ್ಕೆ ನೆರವಾದ ಹ್ಯಾರಿ ಬ್ರೂಕ್ 100 ರನ್(51 ಎಸೆತ, 10 ಬೌಂಡರಿ, 4 ಸಿಕ್ಸ್) ಹೊಡೆದು ಔಟಾದರೆ ವಿಲ್ ಜಾಕ್ಸ್ 28 ರನ್ ಹೊಡೆದು ಔಟಾದರು. ಪಾಕ್ ಪರ ಫರ್ಹನ್ 63 ರನ್(45 ಎಸೆತ, 7 ಬೌಂಡರಿ, 2 ಸಿಕ್ಸ್) ಹೊಡೆದು ಔಟಾದರು.
The first captain to score a CENTURY in the ICC Men’s #T20WorldCup! 👏
Harry Brook brings up a carefully crafted century to put England in pole position to qualify for the semi-finals. 🙌
ICC Men’s #T20WorldCup | SUPER 8, #ENGvPAK ➡️ LIVE NOW 👉 https://t.co/BmGBktbFCX pic.twitter.com/tJokiYhD7y
— Star Sports (@StarSportsIndia) February 24, 2026
ಸೆಮಿಗೆ ಎಂಟ್ರಿ ಹೇಗೆ?
ಶ್ರೀಲಂಕಾ ವಿರುದ್ಧ 51 ರನ್ ಜಯ ಪಡೆದಿದ್ದ ಇಂಗ್ಲೆಂಡ್ ಈಗ ಪಾಕ್ ವಿರುದ್ಧ ಜಯ ಸಾಧಿಸುವ ಮೂಲಕ ಗ್ರೂಪ್ 2ನಲ್ಲಿ ಸೆಮಿ ಪ್ರವೇಶಿಸಿದೆ. ನ್ಯೂಜಿಲೆಂಡ್- ಪಾಕ್ ಪಂದ್ಯ ಮಳೆಯಿಂದ ರದ್ದಾಗಿರುವ ಕಾರಣ ಬಿ ಗ್ರೂಪಿನಲ್ಲಿ ಸೆಮಿ ಪ್ರವೇಶಿಸುವ ಮತ್ತೊಂದು ತಂಡದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಪಾಕಿಸ್ತಾನಕ್ಕೆ ಶ್ರೀಲಂಕಾ ವಿರುದ್ಧ ಒಂದು ಪಂದ್ಯ ಬಾಕಿಯಿದೆ. ಶ್ರೀಲಂಕಾ ವಿರುದ್ಧ ಉತ್ತಮ ರನ್ ರೇಟ್‌ನಿಂದ ಗೆದ್ದರೂ ನ್ಯೂಜಿಲೆಂಡ್ ಫಲಿತಾಂಶದ ಮೇಲೆ ಪಾಕ್ ಸೆಮಿ ಭವಿಷ್ಯ ನಿಂತಿದೆ.
ಇಂಗ್ಲೆಂಡ್ ಆಡಿದ 2 ಪಂದ್ಯವನ್ನು ಗೆದ್ದುಕೊಂಡಿದೆ. ಶ್ರೀಲಂಕಾ ಒಂದು ಪಂದ್ಯವಾಡಿ ಸೋತಿದೆ. ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಪಂದ್ಯ ಮಳೆಯಿಂದ ರದ್ದಾಗಿರುವ ಕಾರಣ ಇತ್ತಂಡಗಳಿಗೆ ತಲಾ 1 ಅಂಕ ಸಿಕ್ಕಿದೆ.
Strong reactions from fans after Saim Ayub departs! 😳
Jofra Archer’s constant variations proved to be too much for the Pakistani opener.
ICC Men’s #T20WorldCup | SUPER 8, #ENGvPAK ➡️ LIVE NOW 👉 https://t.co/BmGBktbFCX pic.twitter.com/ygjzWfqIDw
— Star Sports (@StarSportsIndia) February 24, 2026
ಇಂಗ್ಲೆಂಡ್ ನೆಟ್ ರನ್ ರೇಟ್ 1.491 ಇದ್ದರೆ ಪಾಕಿಸ್ತಾನದ್ದು -0.461, ಶ್ರೀಲಂಕಾದ್ದು -2.550, ನ್ಯೂಜಿಲೆಂಡ್ 0.000 ಇದೆ. ಉತ್ತಮ ರನ್ ರೇಟ್ ಇರುವ ಕಾರಣ ಇಂಗ್ಲೆಂಡ್ ಸುಲಭವಾಗಿ ಸೆಮಿ ಪ್ರವೇಶಿಸಿದೆ.
ನ್ಯೂಜಿಲೆಂಡ್, ಪಾಕಿಸ್ತಾನದ ವಿರುದ್ಧ ಶ್ರೀಲಂಕಾ ಗೆದ್ದರೆ ಸೆಮಿ ಪ್ರವೇಶಿಸಲಿದೆ. ಒಂದು ವೇಳೆ ಒಂದು ಪಂದ್ಯ ಸೋತರೆ ಶ್ರೀಲಂಕಾ ಟೂರ್ನಿಯಿಂದ ನಿರ್ಗಮಿಸಲಿದೆ. ನ್ಯೂಜಿಲೆಂಡ್ ಎರಡೂ ಪಂದ್ಯವನ್ನು ಗೆದ್ದರೆ ಸೆಮಿ ಪ್ರವೇಶಿಸಲಿದೆ. ಒಂದು ವೇಳೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಒಂದು ಪಂದ್ಯ ಗೆದ್ದು ಒಂದು ಪಂದ್ಯ ಸೋತರೆ ನೆಟ್ ರನ್ ರೇಟ್ ಆಧಾರದಲ್ಲಿ ಒಂದು ತಂಡ ಸೆಮಿ ಪ್ರವೇಶ ಮಾಡಲಿದೆ.

