ರೋ`ಹಿಟ್’ ಭರ್ಜರಿ ಶತಕ, ಪಾಂಡ್ಯ ಆಲ್‍ರೌಂಡರ್ ಆಟಕ್ಕೆ ಒಲಿಯಿತು ಸರಣಿ!

Public TV
2 Min Read

ಬ್ರಿಸ್ಟಲ್: ರೋಹಿತ್ ಶರ್ಮಾ ಭರ್ಜರಿ ಅಜೇಯ ಶತಕ, ಹಾರ್ದಿಕ್ ಪಾಂಡ್ಯ ಆಲ್‍ರೌಂಡರ್ ಆಟದಿಂದಾಗಿ ಭಾರತ ಇಂಗ್ಲೆಂಡ್ ವಿರುದ್ಧ 7 ವಿಕೆಟ್‍ಗಳ ಜಯ ಸಾಧಿಸಿದ್ದು 2-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿದೆ.

ಇಂಗ್ಲೆಂಡ್ ನೀಡಿದ 199 ರನ್‍ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತ 18.4 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತು. 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ರೋಹಿತ್ ಶರ್ಮಾ ಅಂತಿಮವಾಗಿ ಅಜೇಯ 100 ರನ್(56 ಎಸೆತ, 11 ಬೌಂಡರಿ, 2 ಸಿಕ್ಸರ್) ಸಿಡಿಸಿದರೆ, ಹಾರ್ದಿಕ್ ಪಾಂಡ್ಯ ಅಜೇಯ 33 ರನ್(14 ಎಸೆತ, 4 ಬೌಂಡರಿ, 2 ಸಿಕ್ಸರ್) ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.

5.2 ಓವರ್ ಗಳಲ್ಲಿ 62 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ರೋಹಿತ್ ಮತ್ತು ಕೊಹ್ಲಿ ಮೂರನೇ ವಿಕೆಟ್ ಗೆ 89 ರನ್ ಜೊತೆಯಾಟವಾಡಿದರು. ಕೊನೆಗೆ ಕೇವಲ 23 ಎಸೆತಗಳಲ್ಲಿ ಪಾಂಡ್ಯ ಮತ್ತು ರೋಹಿತ್ ಮುರಿಯದ ನಾಲ್ಕನೇಯ ವಿಕೆಟ್ ಗೆ 50 ರನ್ ಸಿಡಿಸಿದರು.

ಕೊಹ್ಲಿ 43 ರನ್(29 ಎಸೆತ, 2 ಬೌಂಡರಿ, 2 ಸಿಕ್ಸರ್) ಕೆಎಲ್ ರಾಹುಲ್ 19 ರನ್(10 ಎಸೆತ, 1 ಬೌಂಡರಿ, 2 ಸಿಕ್ಸರ್) ಹೊಡೆದರೆ ಶಿಖರ್ ಧವನ್ 5 ರನ್ ಗಳಿಸಿ ಔಟಾದರು. ಜಸನ್ ರಾಯ್ 67 ರನ್(31 ಎಸೆತ, 4 ಬೌಂಡರಿ, 7 ಸಿಕ್ಸರ್) ಬಟ್ಲರ್ 34, ಹೇಲ್ಸ್, 30, ಬೇನ್‍ಸ್ಟೋ 25 ರನ್ ಸಿಡಿಸಿದ ಪರಿಣಾಮ ಇಂಗ್ಲೆಂಡ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿತ್ತು. ಹಾರ್ದಿಕ್ ಪಾಂಡ್ಯ 38 ರನ್ ನೀಡಿ 4 ವಿಕೆಟ್ ಕಬಳಿಸಿದರು. ಶತಕ ಸಿಡಿಸಿದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಯ ಜೊತೆಗೆ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಂಗ್ಲೆಂಡ್ ರನ್ ಏರಿದ್ದು ಹೇಗೆ?
50 ರನ್ – 27 ಎಸೆತ
100 ರನ್ – 55 ಎಸೆತ
150 ರನ್ – 91 ಎಸೆತ
198 ರನ್ – 120 ಎಸೆತ

ಭಾರತದ ರನ್ ಏರಿದ್ದು ಹೇಗೆ?
50 ರನ್ – 29 ಎಸೆತ
100 ರನ್ – 61 ಎಸೆತ
150 ರನ್ – 85 ಎಸೆತ
201 ರನ್ – 112 ಎಸೆತ

Share This Article
Leave a Comment

Leave a Reply

Your email address will not be published. Required fields are marked *