ಎಜ್ಬಾಸ್ಟನ್: ಇಂಗ್ಲೆಂಡ್ (England) ವಿರುದ್ಧ 336 ರನ್‌ಗಳ ಭರ್ಜರಿ ಜಯವನ್ನು ಸಾಧಿಸುವ ಮೂಲಕ ಭಾರತ (Team India) ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದೆ.
ಭಾರತದ ಹೊರಗಡೆ ದಾಖಲಾದ ಅತ್ಯಧಿಕ ಮೊತ್ತದ ಜಯ. ಇದಕ್ಕೂ ಮೊದಲು 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಾರ್ಥ್ ಸೌಂಡ್‌ನಲ್ಲಿ 318 ರನ್‌ಗಳ ಜಯವನ್ನು ದಾಖಲಿಸಿತ್ತು.
ಇಲ್ಲಿಯವರೆಗೆ ಎಜ್ಬಾಸ್ಟನ್ ಮೈದಾನದಲ್ಲಿ ಏಷ್ಯಾ ಖಂಡದ ಯಾವುದೇ ತಂಡ ಗೆದ್ದ ಸಾಧನೆ ಮಾಡಿಲ್ಲ. ಆದರೆ ಈ ಬಾರಿ ಶುಭಮನ್ ಗಿಲ್ (Shubman Gill) ನೇತೃತ್ವದಲ್ಲಿ ಯಂಗ್ ಟೀಂ ಇಂಡಿಯಾ ಗೆಲ್ಲುವ ಮೂಲಕ ವಿಶಿಷ್ಟ ದಾಖಲೆ ಮಾಡಿದೆ. ಇದನ್ನೂ ಓದಿ: ಡಿಕ್ಲೇರ್ ವೇಳೆ ಎಡವಟ್ಟು – ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗ್ತಾರಾ ಗಿಲ್?
ಎರಡನೇ ಇನ್ನಿಂಗ್ಸ್‌ನಲ್ಲಿ 608 ರನ್‌ಗಳ ಗುರಿಯನ್ನು ಪಡೆದ ಇಂಗ್ಲೆಂಡ್ (England) 5ನೇ ದಿನದಾಟದಲ್ಲಿ ಒಟ್ಟು 68.1 ಓವರ್‌ಗಳಲ್ಲಿ 271 ರನ್‌ಗಳಿಸಿ ಸರ್ವಪತನ ಕಂಡಿತು. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇತ್ತಂಡಗಳು ಒಂದೊಂದು ಪಂದ್ಯವನ್ನು ಗೆದ್ದುಕೊಂಡು ಸಮಬಲ ಸಾಧಿಸಿವೆ.
ಇದನ್ನೂ ಓದಿ: ತೂಫಾನ್ ಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್ ಸೂರ್ಯವಂಶಿ
ಭಾರತದ ಪರ ಆಕಾಶ್ ದೀಪ್ ಮೊದಲ ಬಾರಿಗೆ 6 ವಿಕೆಟ್ ಕಿತ್ತರು. ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ -587/10
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ -407/10
ಭಾರತ ಎರಡನೇ ಇನ್ನಿಂಗ್ಸ್ – 427/6 ಡಿಕ್ಲೇರ್
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ – 271/10