ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿಯ ಶವ ಪತ್ತೆ

Public TV
1 Min Read

ಆನೇಕಲ್‌: ಅನುಮಾನಾಸ್ಪದ ರೀತಿಯಲ್ಲಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿ (Engineering College Student) ಹಾಸ್ಟೆಲ್‌ನಲ್ಲಿ (Hostel) ಮೃತಪಟ್ಟ ಘಟನೆ ಆನೇಕಲ್ ತಾಲೂಕಿನ ಚಂದಾಪುರ ಸಮೀಪ ನಡೆದಿದೆ.

ಅರಸೀಕೆರೆ ಮೂಲದ ಕರಡಿಹಳ್ಳಿ ಗ್ರಾಮದ ಹರ್ಷಿತಾ(18) ಮೃತ ವಿದ್ಯಾರ್ಥಿನಿ. ಗುರುವಾರ ರಾತ್ರಿ ಹಾಸ್ಟೆಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.  ಇದನ್ನೂ ಓದಿ: ವಿಶ್ವನಿಗೂ ನಮ್ಮ ಅಕ್ಕನಿಗೂ ಯಾವುದೇ ಸಂಬಂಧ ಇಲ್ಲ, ನರಳಿ ನರಳಿ ಸಾಯಬೇಕು. ಚಿಕಿತ್ಸೆ ಯಾಕೆ ನೀಡಬೇಕು: ಅಂಜಲಿ ಸಹೋದರಿ ಪ್ರಶ್ನೆ

 

ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಹಾಸ್ಟೆಲ್ ವಿದ್ಯಾರ್ಥಿಗಳು ಪ್ರತಿಭಟನೆ (Protest) ನಡೆಸಿದ್ದು, ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಇದು ಆತ್ಮಹತ್ಯೆಯೋ? ಕೊಲೆಯೋ ಎನ್ನುವುದು ತಿಳಿದು ಬರಬೇಕಿದೆ.

Share This Article