Gadar 2: ಮುನಿಸು ಮರೆತು 16 ವರ್ಷಗಳ ನಂತರ ಒಂದಾದ ಶಾರುಖ್-ಸನ್ನಿ ಡಿಯೋಲ್

By
2 Min Read

ಸ್ಯಾಂಡಲ್‌ವುಡ್ ಸ್ಟಾರ್ಸ್ ಸುದೀಪ್- ದರ್ಶನ್ (Darshan) ಮತ್ತೆ ಜೊತೆಯಾಗ್ತಾರಾ ಎಂಬ ಕಾಯುವಿಕೆಯ ನಡುವೆ ಬಾಲಿವುಡ್‌ನ ಸ್ಟಾರ್‌ಗಳ ನಡೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಮುನಿಸು ಮರೆತು 16 ವರ್ಷಗಳ ನಂತರ ಶಾರುಖ್ ಖಾನ್- ಸನ್ನಿ ಡಿಯೋಲ್ (Sunny Deol) ಮತ್ತೆ ಜೊತೆಯಾಗಿದ್ದಾರೆ. ಗದರ್ 2 ಸಕ್ಸಸ್‌ಗೆ ಶಾರುಖ್, ಸನ್ನಿ ಡಿಯೋಲ್‌ನ ತಬ್ಬಿಕೊಂಡು ಶುಭಹಾರೈಸಿರುವ ವಿಡಿಯೋ ಸಖತ್ ಸದ್ದು ಮಾಡ್ತಿದೆ.

 

View this post on Instagram

 

A post shared by Viral Bhayani (@viralbhayani)

ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ ಗದರ್ 2 (Gadar 2) ಸಿನಿಮಾ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸನ್ನಿ ಡಿಯೋಲ್- ಆಮೀಷಾ ಪಟೇಲ್ ಜೋಡಿಯಾಗಿ ಸಿನಿಮಾದಲ್ಲಿ ಮೋಡಿ ಮಾಡಿದ್ದಾರೆ. ಗದರ್ 2 ಸಕ್ಸಸ್ ಆಗಿರೋದ್ದಕ್ಕೆ ಬಾಲಿವುಡ್ (Bollywood) ಸ್ಟಾರ್ ನಟ-ನಟಿಯರ ಜೊತೆ ಚಿತ್ರತಂಡ ಪಾರ್ಟಿ ಮಾಡಿದೆ. ಈ ಸಂಭ್ರಮದಲ್ಲಿ ಪಠಾಣ್ (Pathaan) ಸ್ಟಾರ್ ಶಾರುಖ್ ಖಾನ್ ದಂಪತಿ ಕೂಡ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಕಮಲ್‌ ಹಾಸನ್‌ ಆಪ್ತ, ನಟ ಆರ್‌.ಎಸ್ ಶಿವಾಜಿ ನಿಧನ

ಗದರ್ 2 ಸಕ್ಸಸ್ ಪಾರ್ಟಿಗೆ ಶಾರುಖ್ ಸಾಕ್ಷಿಯಾಗುವ ಮೂಲಕ ಸನ್ನಿ ಡಿಯೋಲ್ ಜೊತೆಗಿನ 16 ವರ್ಷಗಳ ಮುನಿಸಿಗೆ ಅಂತ್ಯ ಹಾಡಿದ್ದಾರೆ. ಸನ್ನಿ ಕೆರಿಯರ್ ಸಕ್ಸಸ್‌ಗೆ ತಬ್ಬಿಕೊಂಡು ಶಾರುಖ್ ಖಾನ್ (Sharukh Khan) ಶುಭಕೋರಿದ್ದಾರೆ. ಇಬ್ಬರ ಖುಷಿ ನೋಡಿ ಬಿಟೌನ್ ಮಂದಿ ಭೇಷ್ ಎಂದಿದ್ದಾರೆ.

1993ರಲ್ಲಿ ‘ಡರ್’ (Darr) ಎಂಬ ಸಿನಿಮಾ ಸನ್ನಿ ಡಿಯೋಲ್, ಶಾರುಖ್ ಖಾನ್, ಜೂಹ್ಲಿ ಚಾವ್ಲಾ (Juhi Chawla) ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಸನ್ನಿ ಹೀರೋ ಆಗಿ ಮಿಂಚಿದ್ದರು. ಶಾರುಖ್ ರೋಲ್‌ಗೆ ಅಷ್ಟಾಗಿ ಮನ್ನಣೆ ಸಿಗಲಿಲ್ಲ. ವೈಯಕ್ತಿಕ ಮನಸ್ತಾಪಗಳಿಂದ ಅಂದು ಶಾರುಖ್- ಸನ್ನಿ ದೂರವಾಗಿದ್ದರು. ಡರ್ ಸಿನಿಮಾದಲ್ಲಿ ಇಬ್ಬರು ಕೊನೆಯದಾಗಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಈಗ ಇಬ್ಬರು ಒಂದಾಗುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್