ಪಾಟ್ನಾ | ಐಸಿಯುಗೆ ನುಗ್ಗಿ ಗ್ಯಾಂಗ್‌ಸ್ಟರ್ ಹತ್ಯೆ – ಇಬ್ಬರು ಆರೋಪಿಗಳ ಮೇಲೆ ಫೈರಿಂಗ್

Public TV
2 Min Read

ಪಾಟ್ನಾ: ಇಲ್ಲಿನ ಆಸ್ಪತ್ರೆಯ ಐಸಿಯುಗೆ ನುಗ್ಗಿ ಪೆರೋಲ್ ಮೇಲೆ ಬಂದಿದ್ದ ಖೈದಿಯನ್ನ ಕೊಲೆ ಮಾಡಿದ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಬಿಹಿಯಾ ಪೊಲೀಸ್ (Bihia police) ಠಾಣೆ ವ್ಯಾಪ್ತಿಯ ಕಟಿಯಾ ರಸ್ತೆಯಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಈ ಎನ್‌ಕೌಂಟರ್ ನಡೆದಿದೆ. ವಿಶೇಷ ಕಾರ್ಯಪಡೆ (STF) ಮತ್ತು ಸ್ಥಳೀಯ ಪೊಲೀಸರ ಜಂಟಿ ತಂಡ ಮೂವರು ಮೂವರು ಆರೋಪಿಗಳನ್ನು ಬಂಧಿಸಲು ತೆರಳಿದ್ದರು. ಈ ವೇಳೆ, ಆರೋಪಿಗಳು ಪೋಲೀಸರ ಮೇಲೆಯೇ ಗುಂಡು ಹಾರಿಸಲು ಯತ್ನಿಸಿದ್ದರು. ಇದನ್ನೂ ಓದಿ: ಬಾಂಗ್ಲಾದೇಶದ ವಾಯುಪಡೆ ವಿಮಾನ ದುರಂತ – ಸಾವಿನ ಸಂಖ್ಯೆ 27ಕ್ಕೆ ಏರಿಕೆ

ಶರಣಾಗುವಂತೆ ಸೂಚಿಸಿದರು, ಆರೋಪಿಗಳು ದಾಳಿ ನಡೆಸಿದರು. ಈ ವೇಳೆ, ಪೊಲೀಸರು ಆತ್ಮರಕ್ಷಣೆಗಾಗಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದು, ಮತ್ತೋರ್ವನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ರಾಯಚೂರು | ಫುಡ್ ಪಾಯಿಸನ್‌ನಿಂದ ತಂದೆ, ಇಬ್ಬರು ಮಕ್ಕಳು ಸಾವು

ಇಬ್ಬರು ಆರೋಪಿಗಳಾದ ಬಲ್ವಂತ್ ಕುಮಾರ್ ಸಿಂಗ್ ಮತ್ತು ರವಿರಂಜನ್ ಕುಮಾರ್ ಸಿಂಗ್‌ಗೆ ಕಾಲಿಗೆ ಗುಂಡು ತಗುಲಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೋರ್ವ ಆರೋಪಿ ಅಭಿಷೇಕ್ ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಪೆರೋಲ್ ಮೇಲೆ ಹೊರಗಿದ್ದ ದರೋಡೆಕೋರ ಚಂದನ್ ಮಿಶ್ರಾನನ್ನ (Chandan Mishtra) ಪಾಟ್ನಾದ (Patna) ಆಸ್ಪತ್ರೆಯ ಐಸಿಯುನಲ್ಲೇ ಗುಂಡು ಹಾರಿಸಿ ಐವರು ದುಷ್ಕರ್ಮಿಗಳು ಕೊಂದಿದ್ದರು. ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಗ್ಯಾಂಗ್‌ಸ್ಟಾರ್ ಚಂದನ್ ಮಿಶ್ರಾನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಪೆರೋಲ್ ಮೇಲೆ ಪಾಟ್ನಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ದರ್ಶನ್‌ ಕೇಸ್‌ – ಸುಪ್ರೀಂ ಕೋರ್ಟ್‌ಗೆ ಹಿರಿಯ ವಕೀಲ ಕಪಿಲ್ ಸಿಬಲ್ ಗೈರು

ಇದನ್ನರಿತ ಎದುರಾಳಿ ಗ್ಯಾಂಗ್‌ನವರು ಗನ್ ಸಮೇತ ಆಸ್ಪತ್ರೆಗೆ ನುಗ್ಗಿ ಮನಸೋ ಇಚ್ಛೆ ಗುಂಡಿನ ಸುರಿಮಳೆಗೈದಿದ್ದರು. ಚಂದನ್ ಮಿಶ್ರಾ ದೇಹಕ್ಕೆ 12 ಬುಲೆಟ್ ಹೊಕ್ಕಿದ್ದು, ಆಸ್ಪತ್ರೆಯಲ್ಲೆ ಹತನಾಗಿದ್ದ. ಫೈರಿಂಗ್ ಬಳಿಕ ದಾಳಿಕೋರರು ಎಸ್ಕೇಪ್ ಆಗಿದ್ದರು. ಪಾಟ್ನಾದಿಂದ ಪರಾರಿಯಾಗಿ ಕೋಲ್ಕತ್ತಾದ ನ್ಯೂ ಟೌನ್ ವಸತಿ ಪ್ರದೇಶದಲ್ಲಿ ಅಡಗಿಕೊಂಡಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡಿದ್ದ ಬಿಹಾರ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನಾಧರಿಸಿ ತನಿಖೆ ಆರಂಭಿಸಿದ್ದರು.

ಈ ಮಧ್ಯೆ ಎಲ್ಲಾ ಆರೋಪಿಗಳು ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದ ವಸತಿ ಸಂಕೀರ್ಣದ ಫ್ಲಾಟ್‌ನಲ್ಲಿ ಅಡಗಿರುವುದಾಗಿ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಬಳಿಕ ಬಂಗಾಳ ಪೊಲೀಸರ ಸಹಾಯ ಪಡೆದು ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

Share This Article