ತವರಿಗೆ ಹೂವು ತರುವೆ ಹೊರತು ಹುಲ್ಲು ತರಲ್ಲ: ಬೊಮ್ಮಾಯಿ

Public TV
1 Min Read

– ನಾನು ನಿಮ್ಮವನು, ನಿಮ್ಮೂರಿನ ಹುಡುಗ

ಧಾರವಾಡ: ನಾನು ನಿಮ್ಮವನು, ನಿಮ್ಮೂರಿನ ಹುಡುಗ. ತವರಿಗೆ ಹೂವು ತರುವೆ ಹೊರತು ಹುಲ್ಲು ತರಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾವುಕ ಭಾಷಣ ಮಾಡಿದ ಅವರು, ನಿಮ್ಮೆಲ್ಲರ ಆಶೀರ್ವಾದದಿಂದ ಸಿಎಂ ಆಗಿದ್ದೇನೆ. ಪಕ್ಷದ ಶಾಸಕರು, ಸಚಿವರು ಸಂಪೂರ್ಣ ಸಹಕಾರ ಕೊಡುತ್ತಿದ್ದಾರೆ, ನನ್ನ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಪ್ರತಿ ದಿನ 10ರಿಂದ 15 ಗಂಟೆ ಕೆಲಸ ಮಾಡುತ್ತಿರುವೆ, ಅಮೂಲಾಗ್ರವಾದ ಬದಲಾವಣೆ ಈ ನಾಡಿನಲ್ಲಿ ಮಾಡುವೆ ಎಂದರು.

ಹುಬ್ಬಳ್ಳಿ-ಧಾರವಾಡ ಸಮಗ್ರ ಅಭಿವೃದ್ಧಿ ಆಗಬೇಕಿದೆ, ಬಜೆಟ್‍ನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗುವುದು. ಬೆಳಗಾವಿ-ಧಾರವಾಡ-ಹುಬ್ಬಳ್ಳಿ ಚೆನ್ನೈ ಕಾರಿಡಾರನಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಮುಂದಿನ ದಿನಗಳಲ್ಲಿ ಮೂರು ನಗರ ಪ್ರಮುಖ ಪಾತ್ರ ವಹಿಸಲಿವೆ. ದೊಡ್ಡ ದೊಡ್ಡ ಉದ್ಯಮಗಳು, ಕ್ಲಸ್ಟರ್‍ಗಳು ಈ ಭಾಗದಲ್ಲಿ ಬರಲಿವೆ ಎಂದು ಹೇಳಿದರು. ಇದನ್ನೂ ಓದಿ: ಸೋಂಕು ವೇಗವಾಗಿ ಹರಡುತ್ತಿದೆ, ನಾಳೆ ಸಂಜೆ ತಜ್ಞರ ಜೊತೆ ಸಭೆ ಮಾಡುತ್ತೇವೆ: ಬೊಮ್ಮಾಯಿ

ಇದೇ ವೇಳೆ ಇತಿಹಾಸ ತಿರುಚುವವರು ಹೆಚ್ಚಾಗಿದ್ದಾರೆ, ನೀವು ಚರಿತ್ರೆ ಒಂದು ಭಾಗ ಆಗಬೇಕು ಎಂದ ಅವರು, ಇಲ್ಲದಿದ್ದರೇ ಹೊಸ ಚರಿತ್ರೆ ನಿರ್ಮಾಣ ಮಾಡಬೇಕು. ಇತಿಹಾಸ ಗೊತ್ತಿದ್ದವರು ಮಾತ್ರ ಭವಿಷ್ಯ ಬರೆಯುತ್ತಾರೆ, ಇತ್ತೀಚೆಗೆ ಇತಿಹಾಸ ತಿರುಚುವ ಕೆಲಸ ಬಹಳ ಆಗಿದೆ. ಅನೇಕ ಉದಾಹರಣೆ ನಾ ಕೊಡಬಲ್ಲೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *