ಈ ವಿಶಿಷ್ಟ ನಂಬರ್ ಪ್ಲೇಟ್ ಗೆ 5 ಕೋಟಿ ರೂ. ಖರ್ಚು ಮಾಡಿದ ಉದ್ಯಮಿ!

Public TV
2 Min Read

ದುಬೈ: ಕಾರಿಗೆ ಫ್ಯಾನ್ಸಿ ನಂಬರ್ ಪ್ಲೇಟ್ ಪಡೆಯಲು ಸಾಕಷ್ಟು ಹಣ ಖರ್ಚು ಮಾಡೋ ಬಗ್ಗೆ ಕೇಳಿರ್ತೀರ. ಹಾಗೆ ಇಲ್ಲಿನ ಉದ್ಯಮಿಯೊಬ್ಬರು 3.12 ದಿರ್ಹಮ್(ಅಂದಾಜು 5.46 ಕೋಟಿ ರೂ.) ಖರ್ಚು ಮಾಡಿ ವಿಶಿಷ್ಟ ನಂಬರ್ ಪ್ಲೇಟ್ ತಮ್ಮದಾಗಿಸಿಕೊಂಡಿದ್ದಾರೆ.

ಉದ್ಯಮಿ ಮಜೀದ್ ಮುಸ್ತಾಫಾ ಎಎ10 ನಂಬರ್ ಪ್ಲೇಟ್ ಮಾಲೀಕರಾಗಿದ್ದಾರೆ. ಶನಿವಾರದಂದು ನಡೆದ ರೋಡ್ಸ್ ಅಂಡ್ ಟ್ರಾನ್ಸ್ ಪೋರ್ಟ್ ಅಥಾರಿಟಿಯ 97ನೇ ಹರಾಜಿನಲ್ಲಿ ಎಎ ಕೋಡ್ ಇರೋ 12, 50, 100, 333, 786, 1000, 11111 ಹಾಗೂ 55555 ಎಂಬ ವಿಶೇಷ ನಂಬರ್ ಪ್ಲೇಟ್‍ ಗಳನ್ನು ಹರಾಜು ಹಾಕಲಾಯ್ತು.

ಈ ಕುರಿತು ಮಾತನಾಡಿದ ಪುಸ್ತಾಫಾ, ತಾನು ಈ ನಂಬರ್ ಪ್ಲೇಟನ್ನ ನನ್ನ ಕಾರೊಂದಕ್ಕೆ ಹಾಕಿಸುತ್ತೇನೆ ಎಂದು ಹೇಳಿದ್ದಾರೆ. 2002ರಿಂದಲೂ ಆರ್ ಟಿಐ ಹರಾಜಿನಲ್ಲಿ ಭಾಗಿಯಾಗುತ್ತಿದ್ದ ಮುಸ್ತಾಫಾ ಈವರೆಗೆ ಇಂತಹ 5 ಸಾವಿರ ವಿಶಿಷ್ಟ ನಂಬರ್ ಪ್ಲೇಟ್ ಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ಇವುಗಳಲ್ಲಿ ಐ10 ನಂಬರ್ ಪ್ಲೇಟ್ ಅತ್ಯಂತ ದುಬಾರಿಯಾಗಿದೆ. ಇದಕ್ಕೆ ಅವರು ಹರಾಜು ಪ್ರಕ್ರಿಯೆಯಲ್ಲಿ 6 ದಿರ್ಹಮ್ ಅಂದ್ರೆ (ಅಂದಾಜು 10.5 ಕೋಟಿ ರೂ.) ನೀಡಿದ್ದಾರೆ.

ಶನಿವಾರ ನಡೆದ ಹರಾಜಿನಲ್ಲಿ ಮುಸ್ತಾಫಾ ಅತ್ಯಂತ ದುಬಾರಿ ನಂಬರ್ ಪ್ಲೇಟ್ ತನ್ನದಾಗಿಸಿಕೊಂಡಿದ್ದು, ಎರಡನೇ ದುಬಾರಿ ನಂಬರ್ ಪ್ಲೇಟ್ ಆದ 2212 ಎಸ್ಸಾ ಅಲ್ ಹಬೈ ಎಂಬವರು 2.72 ಮಿಲಿಯನ್ ದಿರ್ಹಮ್ (ಅಂದಾಜು 4.7 ಕೋಟಿ ರೂ.) ಕೊಟ್ಟು ಪಡೆದಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಎಎ50 ನಂಬರ್ ಪ್ಲೇಟ್ ಪಡೆದ ಮತ್ತೊಬ್ಬರು ಸುಮಾರು ದಿರ್ಹಮ್ 1.84 ಮಿಲಿಯನ್ ದಿರ್ಹಮ್ (ಅಂದಾಜು 3.2 ಕೋಟಿ ರೂ.) ನೀಡಿದ್ದಾರೆ.

32 ವರ್ಷದ ಜನರ್ ಖಮಿಸ್ ಎಂಬ ಮತ್ತೋರ್ವ ಉದ್ಯಮಿ ಈ ಹರಾಜು ಪ್ರಕ್ರಿಯೆಯಲ್ಲಿ ಎರಡನೇ ಬಾರಿ ಭಾಗವಹಿಸಿದ್ದು, ಅವರು 700,000 ದಿರ್ಹಮ್ (ಅಂದಾಜು 1.2 ಕೋಟಿ ರೂ.) ನೀಡಿ ಎಎ333 ಸಂಖ್ಯೆಯ ನಂಬರ್ ಪ್ಲೇಟ್ ತನ್ನದಾಗಿಸಿಕೊಂಡಿದ್ದಾರೆ. ಈ ಮೊದಲು ಭಾಗವಹಿಸಿದ್ದ ಹರಾಜು ಕಾರ್ಯಕ್ರಮದಲ್ಲಿ ಅವರು 5000,000(ಅಂದಾಜು 87 ಲಕ್ಷ ರೂ.) ದಿರ್ಹಮ್ ನೀಡಿ ವಿಶಿಷ್ಟ ನಂಬರ್ ಪ್ಲೇಟ್ ಪಡೆದುಕೊಂಡಿದ್ದು, ಅದರಲ್ಲಿ ಎರಡೇ ತಿಂಗಳಲ್ಲಿ ಅವರಿಗೆ 200,000 ದಿರ್ಹಮ್(ಅಂದಾಜು 35 ಲಕ್ಷ ರೂ.) ಲಾಭವಾಗಿದೆ ಎಂದು ವರದಿಯಾಗಿದೆ.

ಎಎ333 ಸಂಖ್ಯೆಯ ನಂಬರ್ ಪ್ಲೇಟ್ ನಿಜಕ್ಕೂ ವಿಶೇಷವಾಗಿದ್ದು, ಈ ನಂಬರ್ ಪ್ಲೇಟನ್ನ ಲಂಬೋರ್ಗಿನಿ ಕಾರಿಗೆ ಹಾಕಿಸಲು ಇಚ್ಛಿಸುತ್ತೇನೆ. ಅಲ್ಲದೇ ಒಳ್ಳೆಯ ಬೆಲೆ ಸಿಕ್ಕರೆ ಅದನ್ನು ಮಾರಾಟ ಮಾಡುತ್ತೇನೆ ಅಂತ ಮುಸ್ತಾಫಾ ಹೇಳಿದ್ದಾರೆ.

ವಿಶೇಷ ನಂಬರ್ ಪ್ಲೇಟ್ ಗಳ ಬೆಲೆಗಳು ಇಂತಿವೆ:

ಎಎ10- 5.46 ಕೋಟಿ ರೂ.
ಎಎ12- 4.76 ಕೋಟಿ ರೂ.
ಎಎ50- 3.2 ಕೋಟಿ ರೂ.
ಎಎ11111- 2.1 ಕೋಟಿ ರೂ.
ಎಎ100- 1.5 ಕೋಟಿ ರೂ.
ಎಎ333- 1.2 ಕೋಟಿ ರೂ.
ಎಎ55555- 1.17 ಕೋಟಿ ರೂ.
ಎಎ1000- 1.10 ಕೋಟಿ ರೂ.
ಎಎ8888-87 ಲಕ್ಷ ರೂ.
ಎಎ786- 78 ಲಕ್ಷ ರೂ.

Share This Article
Leave a Comment

Leave a Reply

Your email address will not be published. Required fields are marked *