ಗಾಂಧಿವಾದಿ ಎಸ್.ಎನ್.ಸುಬ್ಬರಾವ್ ನಿಧನಕ್ಕೆ ಸಿಎಂ ಸಂತಾಪ

Public TV
1 Min Read

– ಕುಖ್ಯಾತ ಡಕಾಯಿತರ ಮನವೊಲಿಸಿದ್ದ ರಾವ್

ಬೆಂಗಳೂರು: ಕರ್ನಾಟಕ ಮೂಲದ ಹಿರಿಯ ಗಾಂಧಿವಾದಿ ಎಸ್.ಎನ್.ಸುಬ್ಬರಾವ್ ಅವರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ಶಾಲಾ ದಿನಗಳಲ್ಲಿಯೇ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ, ದೇಶಪ್ರೇಮ ಮೆರೆದ ಸುಬ್ಬರಾವ್ ಅವರು ಗಾಂಧೀ ವಿಚಾರಧಾರೆ ಪ್ರಸಾರ ಹಾಗೂ ಯುವಜನರಲ್ಲಿ ರಾಷ್ಟ್ರೀಯತೆಯ ಭಾವ ಮೂಡಿಸಲು ನಿರಂತರವಾಗಿ ಶ್ರಮಿಸಿದ್ದವರು. ಇದನ್ನೂ ಓದಿ: ಹೊಸ ಪಕ್ಷ ಸ್ಥಾಪನೆ ಖಚಿತಪಡಿಸಿದ ಅಮರೀಂದರ್ ಸಿಂಗ್ – ಬಿಜೆಪಿ ಜೊತೆಗೆ ಹೊಂದಾಣಿಕೆ

 

ಮಧ್ಯಪ್ರದೇಶದ ಚಂಬಲ್ ಕಣಿವೆಯಲ್ಲಿ ಕುಖ್ಯಾತ ಡಕಾಯಿತರ ಮನವೊಲಿಸಿ, ಶರಣಾಗತರಾಗುವಂತೆ ಮಾಡುವಲ್ಲಿ ಹಾಗೂ ಆ ಡಕಾಯಿತರ ಕುಟುಂಬಗಳ ಪುನರ್ವಸತಿಗಾಗಿ ತಮ್ಮ ಗಾಂಧಿ ಸೇವಾ ಆಶ್ರಮದ ಮೂಲಕ ಶ್ರಮಿಸಿದ್ದರು ಎಂದು ಬೊಮ್ಮಾಯಿ ಅವರು ಸ್ಮರಿಸಿಕೊಂಡಿದ್ದಾರೆ.

ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಬೊಮ್ಮಾಯಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:  ನನ್ನನ್ನು ಅವಮಾನ ಮಾಡಲಾಗಿದೆ – ಸಿಎಂ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ

Share This Article
Leave a Comment

Leave a Reply

Your email address will not be published. Required fields are marked *