ಎಮರ್ಜೆನ್ಸಿ ಅಲರ್ಟ್- ಲಕ್ಷಾಂತರ ಫೋನ್‌ಗಳಿಗೆ ಸರ್ಕಾರದಿಂದ ಬಂತು ಮೆಸೇಜ್

Public TV
1 Min Read

ನವದೆಹಲಿ: ಮಂಗಳವಾರ ಬೆಳಗ್ಗೆ ಸುಮಾರು 11:30ರ ವೇಳೆಗೆ ದೇಶಾದ್ಯಂತ ಲಕ್ಷಾಂತರ ಮೊಬೈಲ್ ಫೋನ್‌ಗಳಿಗೆ ಭಾರತ ಸರ್ಕಾರ ಎಚ್ಚರಿಕೆಯ ಸಂದೇಶವೊಂದನ್ನು (Message) ಕಳುಹಿಸಿದೆ. ತುರ್ತು ಎಚ್ಚರಿಕೆ (Emergency Alert) ಬಗ್ಗೆ ಜನತೆ ಕೆಲ ಕಾಲ ಆತಂಕಕ್ಕೀಡಾದರೂ ಈ ಸಂದೇಶ ಕೇವಲ ಪರೀಕ್ಷಾರ್ಥವಾಗಿ ಕೇಂದ್ರ ಸರ್ಕಾರ ಕಳುಹಿಸಿರುವುದು ಖಚಿತವಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಈ ಸಂದೇವನ್ನು ಪರೀಕ್ಷಾರ್ಥವಾಗಿ ಕಳುಹಿಸಿದೆ. ಆಂಡ್ರಾಯ್ಡ್ ಹಾಗೂ ಐಫೋನ್ ಹೊಂದಿರುವ ಬಹುತೇಕರಿಗೆ ಈ ಸಂದೇಶ ರವಾನೆಯಾಗಿದೆ. ಬೀಪ್ ಸದ್ದಿನೊಂದಿಗೆ 2 ಎಚ್ಚರಿಕೆ ಸಂದೇಶಗಳು ಬಂದಿದ್ದು, ಅವು ಕೆಲ ನಿಮಿಷಗಳ ಅಂತರದಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಕಳುಹಿಸಲಾಗಿದೆ.

ಇದು ತುರ್ತು ಸಮಯದಲ್ಲಿ ಎಚ್ಚರಿಕೆ ವ್ಯವಸ್ಥೆ ಪರಿಣಾಮಕಾರಿಯಾಗಿರುತ್ತದೆಯೇ ಎಂಬುದನ್ನು ನಿರ್ಣಯಿಸಲು ಹಾಗೂ ಯಾವುದೇ ಸಂಭಾವ್ಯ ಸಮಸ್ಯೆಗಳನ್ನು ತಿಳಿಸಲು ನಡೆಸಿದ ಪರೀಕ್ಷೆಯ ಭಾಗವಾಗಿದೆ. ಈ ಸಂದೇಶ ಸ್ವೀಕರಿಸಿದವರಿಗೆ ಇದೊಂದು ಪರೀಕ್ಷೆಯಾಗಿದ್ದು, ಯಾವುದೇ ಎಚ್ಚರಿಕೆ ಕ್ರಮದ ಅಗತ್ಯವಿಲ್ಲ ಎಂದು ಎನ್‌ಡಿಎಂಎ ತಿಳಿಸಿದೆ. ಇದನ್ನೂ ಓದಿ: ಮಹೇಂದ್ರ ಸಿಂಗ್ ಧೋನಿ ಈಗ ಜಿಯೋಮಾರ್ಟ್ ಬ್ರಾಂಡ್ ಅಂಬಾಸಿಡರ್

ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ಏಕೆಂದರೆ ನಿಮ್ಮ ಕಡೆಯಿಂದ ಯಾವುದೇ ಕ್ರಮದ ಅಗತ್ಯವಿಲ್ಲ. ಈ ಸಂದೇಶವನ್ನು ಪ್ಯಾನ್ ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪರೀಕ್ಷಿಸಲು ಕಳುಹಿಸಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಸಂದೇಶದಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಭಾರತದ 74 ಲಕ್ಷ ವಾಟ್ಸಪ್ ಖಾತೆಗಳು ನಿಷೇಧ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್