ವಾಷಿಂಗ್ಟನ್/ನವದೆಹಲಿ: ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿ ಪ್ರಭಾವಶಾಲಿ ಸೋಷಿಯಲ್ ಮೀಡಿಯಾ (Social Media) ವೇದಿಕೆಯಾದ ಎಕ್ಸ್ ಖಾತೆ (X Account) ಸುಮಾರು ಕಳೆದ 1 ಗಂಟೆಯಿಂದ ಸ್ಥಗಿತಗೊಂಡಿದೆ.
ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ ಮಾಡಿದ ಪೋಸ್ಟ್‌ಗಳನ್ನ ನೋಡುವುದಕ್ಕಾಗಲಿ ಅಥವಾ ಹೊಸ ಟ್ವೀಟ್‌ಗಳನ್ನ ಅಪ್‌ಲೋಡ್ ಮಾಡುವುದಕ್ಕಾಗಲಿ ಸಾಧ್ಯವಾಗುತ್ತಿಲ್ಲ. ಯಾರ ಖಾತೆಯನ್ನ ಸರ್ಚ್ ಮಾಡಿದ್ರೂ ರೀಟ್ರೈ (ಇಂಗ್ಲಿಷ್‌ನಲ್ಲಿ) ಎಂದೇ ತೋರಿಸುತ್ತಿದೆ. ಟ್ವಿಟರ್ ಎಂದು ಕರೆಯಲಾಗುತ್ತಿದ್ದ ʻಎಕ್ಸ್ʼ ಅಷ್ಟೇ ಅಲ್ಲದೇ ಚಾಟ್ ಜಿಪಿಟಿಯಲ್ಲೂ ಜಾಗತಿಕವಾಗಿ ಸಮಸ್ಯೆ ಕಾಣಿಸಿಕೊಂಡಿದೆ. ಡೌನ್ ಡಿಟೆಕ್ಟರ್ (Downdetector) ಟ್ರ್ಯಾಕಿಂಗ್ ವೆಬ್‌ಸೈಟ್ ಸಹ ಸ್ಥಗಿತಗೊಂಡಿದೆ.
ಕ್ಲೌಡ್‌ಫ್ಲೇರ್‌ನಲ್ಲಿ (Cloudflare) ಉಂಟಾದ ತಾಂತ್ರಿಕ ಸಮಸ್ಯೆ ಇದಕ್ಕೆ ಕಾರಣ ಎಂದು ವರದಿಗಳು ತಿಳಿಸಿವೆ. ಎಕ್ಸ್‌ನಲ್ಲಿ ಟ್ವೀಟ್ ಮಾಡಲು ಸಮಸ್ಯೆಯಾಗುತ್ತಿದ್ದಂತೆ ಸಾವಿರಾರು ಬಳಕೆದಾರರು ಸಮಸ್ಯೆ ಕುರಿತು ವರದಿ ಮಾಡುತ್ತಿದ್ದಾರೆ. ಆದ್ರೆ ಆ ಟ್ವೀಟ್‌ಗಳು ಸಹ ಓದುವುದಕ್ಕೆ ಸಾಧ್ಯವಾಗುತ್ತಿಲ್ಲದಿರುವುದು ಕಂಡುಬಂದಿದೆ.
ಸದ್ಯ ತಂತ್ರಜ್ಞರ ತಂಡ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ.

