ನವದೆಹಲಿ: ಎಲಾನ್ ಮಸ್ಕ್ (Elon Musk) ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಐದು ಮಾಡೆಲ್‌ನ Y ವಾಹನಗಳು ಈಗಾಗಲೇ ಮುಂಬೈಗೆ ಎಂಟ್ರಿ ಕೊಟ್ಟಿವೆ.
ಟೆಸ್ಲಾ (Tesla) ಸೆಂಟರ್ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ತೆರೆಯಲಿದೆ. ಮಾರ್ಚ್ ಆರಂಭದಲ್ಲಿ, ಭಾರತದಲ್ಲಿ ತನ್ನ ಮಾರಾಟವನ್ನು ಪ್ರಾರಂಭಿಸಲು ಟೆಸ್ಲಾ ಮುಂಬೈನಲ್ಲಿ ತನ್ನ ಮೊದಲ ಶೋ ರೂಂ ತೆರೆಯಲು ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಇವಿ ತಯಾರಕರು ಮುಂಬೈ ಮತ್ತು ನವದೆಹಲಿಯಲ್ಲಿ ಶೋ ರೂಂ ಸೈಟ್‌ಗಳಿಗಾಗಿ ನೇಮಕಾತಿ ಮತ್ತು ಸ್ಕೌಟಿಂಗ್ ಅನ್ನು ಹೆಚ್ಚಿಸಿದ್ದರು. ಇದನ್ನೂ ಓದಿ: ಕೆನಡಾ ಮೇಲೆ 35% ಸುಂಕ ವಿಧಿಸಿದ ಟ್ರಂಪ್ – ಪ್ರತೀಕಾರಕ್ಕೆ ಮುಂದ್ರಾದ್ರೆ ಇನ್ನಷ್ಟು ಸುಂಕ ವಿಧಿಸುವುದಾಗಿ ವಾರ್ನಿಂಗ್
ಚೀನಾದ ಶಾಂಘೈನಲ್ಲಿರುವ ಟೆಸ್ಲಾ ಕಾರ್ಖಾನೆಯಿಂದ ಐದು ಮಾಡೆಲ್ ವೈ ವಾಹನಗಳು ಈಗಾಗಲೇ ಮುಂಬೈಗೆ ಬಂದಿವೆ. ಈ ಕಾರುಗಳ ಬೆಲೆ 27 ಲಕ್ಷ ರೂ. ಎಂದು ಘೋಷಿಸಲಾಗಿತ್ತು. 21 ಲಕ್ಷಕ್ಕಿಂತ ಹೆಚ್ಚಿನ ಆಮದು ಸುಂಕವನ್ನು ವಿಧಿಸಲಾಗಿತ್ತು.
ಭಾರತದಲ್ಲಿ ಟೆಸ್ಲಾ ಕಂಪನಿಯ ಪ್ರವೇಶವು ಹಲವು ವರ್ಷಗಳಿಂದ ನಡೆಯುತ್ತಿದೆ. ಈ ಮಾತುಕತೆಯ ಸಮಯದಲ್ಲಿ, ಎಲಾನ್ ಮಸ್ಕ್ ಕಂಪನಿಯು ಕಡಿಮೆ ಆಮದು ಸುಂಕಕ್ಕಾಗಿ ಲಾಬಿ ಮಾಡುವತ್ತ ಗಮನಹರಿಸಿತ್ತು. ಇದನ್ನೂ ಓದಿ: ಕಪಿಲ್ ಶರ್ಮಾ ಕೆಫೆ ಮೇಲೆ ಖಲಿಸ್ತಾನಿ ಭಯೋತ್ಪಾದಕರಿಂದ ಗುಂಡಿನ ದಾಳಿ
ಟೆಸ್ಲಾ, ಭಾರತದಲ್ಲಿ ತನ್ನ ಕಾರ್ಯ ಪ್ರಾರಂಭಿಸಿದ್ದರೂ, ಎಲೆಕ್ಟ್ರಿಕ್ ವಾಹನ ಕಂಪನಿಯು ಭಾರತದಲ್ಲಿ ಭಾಗಗಳನ್ನು ತಯಾರಿಸಲು ಆಸಕ್ತಿ ಹೊಂದಿಲ್ಲ ಎಂದು ವರದಿಯಾಗಿದೆ. ಕಳೆದ ತಿಂಗಳು ಕೇಂದ್ರ ಬೃಹತ್ ಕೈಗಾರಿಕಾ ಸಚಿವ HD ಕುಮಾರಸ್ವಾಮಿ, ಟೆಸ್ಲಾ ದೇಶದಲ್ಲಿ ತನ್ನ ಶೋ ರೂಂಗಳನ್ನು ವಿಸ್ತರಿಸಲು ಮಾತ್ರ ಬಯಸುತ್ತದೆ ಎಂದು ಹೇಳಿದ್ದರು.