ಎಲಾನ್‌ ಮಸ್ಕ್‌ ಅವರ 13ನೇ ಮಗುವಿಗೆ ಜನ್ಮ ನೀಡಿದ್ದೇನೆ: ಆಶ್ಲೇ ಹೇಳಿಕೆಗೆ ಮೌನ ಮುರಿದ ಮಸ್ಕ್‌

Public TV
2 Min Read

ವಾಷಿಂಗ್ಟನ್: ಎಲಾನ್‌ ಮಸ್ಕ್‌ (Elon Musk) ಅವರ 13ನೇ ಮಗುವಿನ ನಾನು ಜನ್ಮ ನೀಡಿದ್ದೇನೆ ಎಂಬ ಲೇಖಕಿ ಆಶ್ಲೇ ಸೇಂಟ್‌ ಕ್ಲೇರ್‌ (Ashley St Clair) ಅವರ ಹೇಳಿಕೆಗೆ ಟೆಸ್ಲಾ ಸಿಇಒ ಮಸ್ಕ್‌ ಕೊನೆಗೂ ಮೌನ ಮುರಿದಿದ್ದಾರೆ.

ಶುಕ್ರವಾರ ಸೇಂಟ್‌ ಕ್ಲೇರ್‌ ಈ ಹೇಳಿಕೆ ನೀಡಿದ್ದರು. ತನ್ನ ಮಗುವಿಗೆ ಮಸ್ಕ್‌ ಅವರೇ ತಂದೆ ಎಂದು ಘೋಷಿಸಿದ್ದರು. ‘ಐದು ತಿಂಗಳ ಹಿಂದೆ, ನಾನು ಹೊಸ ಮಗುವನ್ನು ಜಗತ್ತಿಗೆ ಸ್ವಾಗತಿಸಿದೆ. ಎಲಾನ್‌ ಮಸ್ಕ್‌ ಅವರೇ ನನ್ನ ಮಗುವಿನ ತಂದೆ’ ಎಂದು ತಿಳಿಸಿದ್ದರು. ಆದರೆ, ಎಲಾನ್‌ ಮಸ್ಕ್‌ ಅವರಿಂದ ಈ ಬಗ್ಗೆ ಯಾವುದೇ ದೃಢೀಕರಣ ಬಂದಿಲ್ಲ. ಇದನ್ನೂ ಓದಿ: ಈಗ 5 ತಿಂಗಳ ಮಗುವಿನ ತಂದೆ – ಒಟ್ಟು 13 ಮಕ್ಕಳ ಅಪ್ಪನಾದ ಎಲಾನ್‌ ಮಸ್ಕ್‌!

ಆಶ್ಲೇ ಸೇಂಟ್‌ ಕ್ಲೇರ್‌, ನಾನು ಜಗತ್ತಿನಲ್ಲಿ ಹೊಸ ಮಗುವಿಗೆ ಜನ್ಮ ನೀಡಿದ್ದೇನೆ. ಎಲಾನ್‌ ಮಸ್ಕ್‌ ಈ ಮಗುವಿಗೆ ತಂದೆ. ನಮ್ಮ ಮಗುವಿನ ಗೌಪ್ಯತೆ ಮತ್ತು ಸುರಕ್ಷತೆಗಾಗಿ ನಾನು ಇಲ್ಲಿಯ ವರೆಗೆ ಇದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿರಲಿಲ್ಲ. ಆದರೆ, ಕೆಲವು ದಿನಗಳಿಂದ ಇದು ಮಾಧ್ಯಮಗಳಲ್ಲಿ ಹೈಲೈಟ್‌ ಆಗುತ್ತಿದೆ. ನಮ್ಮ ಮಗು ಸಾಮಾನ್ಯ ಮತ್ತು ಸುರಕ್ಷಿತ ವಾತಾವರಣದಲ್ಲಿ ಬೆಳೆಯಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ ನಮ್ಮ ಮಗುವಿನ ವೈಯಕ್ತಿಕ ಜೀವನವನ್ನು ಗೌರವಿಸಿ ಮತ್ತು ಅನಗತ್ಯ ಹಸ್ತಕ್ಷೇಪವನ್ನು ತಪ್ಪಿಸುವಂತೆ ವಿನಂತಿಸುತ್ತೇನೆಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

ಈ ಕುರಿತು ಎಕ್ಸ್‌ನಲ್ಲಿ ಒಬ್ಬ ಬಳಕೆದಾರರು ಸ್ಕ್ರೀನ್‌ಶಾಟ್‌ ಹಂಚಿಕೊಂಡು, ಎಲಾನ್ ಮಸ್ಕ್ ಅವರನ್ನು ಸಿಲುಕಿಸಲು ಆಶ್ಲೇ ಸೇಂಟ್ ಕ್ಲೇರ್ ಅರ್ಧ ದಶಕದ ಸಂಚು ರೂಪಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಎಲಾನ್‌ ಮಸ್ಕ್‌, ‘ವಾವ್‌’ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಿಂದ 2ನೇ ಹಂತದ ಗಡಿಪಾರು – ಇಂದು 119 ಮಂದಿ ಅಕ್ರಮ ವಲಸಿಗರು ಭಾರತಕ್ಕೆ

ಮಸ್ಕ್‌ ಪ್ರತಿಕ್ರಿಯೆಗೆ ಕ್ಲೇರ್‌ ರಿಪ್ಲೆ ಮಾಡಿ ನಂತರ ಡಿಲೀಟ್‌ ಮಾಡಿದ್ದರು. ಆದರೆ, ಅದರ ಸ್ಕ್ರೀನ್‌ಶಾಟ್‌ ಅನ್ನು ಮತ್ತೊಬ್ಬ ಎಕ್ಸ್‌ ಬಳಕೆದಾರ ಹಂಚಿಕೊಂಡಿದ್ದಾರೆ.

Share This Article