ಮಗು ಹುಟ್ಟಿದ ಸಂಭ್ರಮದ ಮಧ್ಯೆ ಬೇರ್ಪಟ್ಟ ಎಲೋನ್ ಮಸ್ಕ್ ಜೋಡಿ

Public TV
2 Min Read

ನ್ಯೂಯಾರ್ಕ್: ಕೆಲವು ದಿನಗಳ ಮೊದಲು ಮಗು ಸ್ವಾಗತಿಸಿದ್ದ ಖ್ಯಾತ ಉದ್ಯಮಿ ಬಿಲಿಯನೇರ್ ಎಲೋನ್ ಮಸ್ಕ್ ಮತ್ತು ಗ್ರಿಮ್ಸ್ ಇಬ್ಬರು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.

ಎಲೋನ್ ಮಸ್ಕ್ ಮತ್ತು ಗಾಯಕಿ ಹಾಗೂ ಗೀತರಚನೆಗಾರ್ತಿ ಗ್ರಿಮ್ಸ್ ಅವರು ಡಿಸೆಂಬರ್ 2021ರಲ್ಲಿ ಬಾಡಿಗೆ ತಾಯಿಯ ಮೂಲಕ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದರು. ಈಗ ಇಬ್ಬರು ದೂರವಾಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

ನಾನು ಮತ್ತು ಎಲೋನ್ ಮಾಸ್ಕ್ ಮತ್ತೆ ಬೇರ್ಪಟ್ಟಿದ್ದೇವೆ. ಆದರೆ ಅವನು ನನ್ನ ಆತ್ಮೀಯ ಸ್ನೇಹಿತ ಮತ್ತು ನನ್ನ ಜೀವನದ ಪ್ರೀತಿ. ನನ್ನ ಜೀವನ ಮತ್ತು ಕಲೆ ಎಂದೆಂದಿಗೂ ಮೀಸಲಾಗಿದೆ. ಡೆವಿನ್ ಆ ಭಾಗವನ್ನು ಬರೆದಿದ್ದಾರೆ ಎಂದು ನಾನು ಭಾವಿಸುತ್ತೇನೆ ಕಥೆ ನಿಜವಾಗಿಯೂ ಚೆನ್ನಾಗಿದೆ ಎಂದು ಗ್ರಿಮ್ಸ್ ಟ್ವೀಟ್ ಮಾಡಿದ್ದಾರೆ.

ಗ್ರಿಮ್ಸ್‍ಗೆ ಈಗಾಗಲೇ 22 ತಿಂಗಳ ಮಗು ಇದ್ದು, ಟೆಸ್ಲಾ ಕಂಪನಿಯ ಮಾಲೀಕರಾದ ಎಲೋನ್ ಮಸ್ಕ್ ಜೊತೆ ಮೂರು ವರ್ಷಗಳ ನಂತರ ಇಬ್ಬರೂ ಸೆಪ್ಟೆಂಬರ್ 2021ರಲ್ಲಿ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದ್ದರು. ಆದರೆ ಇವರಿಬ್ಬರು ಮತ್ತೆ ಒಂದಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಇದನ್ನೂ ಓದಿ: ಎರಡನೇ ಮಗುವನ್ನು ಸ್ವಾಗತಿಸಿದ ಎಲೋನ್ ಮಸ್ಕ್

 

ಪ್ರತ್ಯೇಕತೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಬಹುಶಃ ಅವನನ್ನು ನನ್ನ ಗೆಳೆಯ ಎಂದು ಹೇಳಿಕೊಳ್ಳತ್ತೆನೆ. ಆದರೆ ನಾವು ತುಂಬಾ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ನಾವು ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತೇವೆ. ಅದಲ್ಲದೆ ನಾವು ಉತ್ತಮ ಸ್ನೇಹಿತರು. ನಾವು ಯಾವಾಗಲೂ ಒಬ್ಬರನ್ನೊಬ್ಬರು ನೋಡುತ್ತಲೇ ಇರುತ್ತೇವೆ. ನಾವು ನಮ್ಮದೇ ಆದ ವಿಷಯವನ್ನು ಹೊಂದಿದ್ದೇವೆ. ಇತರ ಜನರು ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ ಎಂದರು.

ಮುಂಬರುವ ದಿನಗಳಲ್ಲಿ ಇವರಿಬ್ಬರು ಹೆಚ್ಚಿನ ಮಕ್ಕಳನ್ನು ಬೆಳೆಸಲು ಯೋಜಿಸಿದ್ದೇವೆ ಎಂದು ಪ್ರಕಟಣೆಗೆ ತಿಳಿಸಿದ್ದು, ನಾವು ಯಾವಾಗಲೂ ಕನಿಷ್ಠ ಮೂರು ಅಥವಾ ನಾಲ್ಕು ಮಕ್ಕಳನ್ನು ಬಯಸುತ್ತಿದ್ದೇವು ಎಂದು ತಿಳಿಸಿದ್ದರು. ಆದರೆ ಇದೀಗ ಮತ್ತೆ ದಂಪತಿ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿರುವುದಾಗಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *